
ಪಂಜಾಬ್(ಸೆ.18): ಪಂಜಾಬ್ ರಾಜಕೀಯ ತಲ್ಲಣ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ಶುರುವಾಗಿದೆ. ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಶ್ರ ಸುನಿಲ್ ಜಕಾರ್ ಸೇರಿದಂತೆ ಹಲವರ ಹೆಸರು ಮುಂಚೂಣಿಯಲ್ಲಿದೆ. ಇದರ ನಡುವೆ ಹಾಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬರುತ್ತಿದೆ. ಆದರೆ ಸಿಧು ಆಯ್ಕೆಯನ್ನು ಅಮರಿಂದರ್ ಸಿಂಗ್ ತೀವ್ರವಾಗಿ ವಿರೋಧಿಸಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದ ಏಕೈಕ ದೇಶಭಕ್ತ ಅಮರಿಂದರ್, ಸೋಶಿಯಲ್ ಮೀಡಿಯಾದಲ್ಲಿ #JoinBJP ಟ್ರೆಂಡ್!
ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾದರೆ ದೇಶದ ಭದ್ರತೆಗೆ ಸವಾಲು ಎದುರಾಗಲಿದೆ. ಪಾಕಿಸ್ತಾನಕ್ಕೆ ನೆರವು ನೀಡಲು ಭಾರತವನ್ನು ಬಲಿಕೊಡಲು ಸಿಧು ಹಿಂಜರಿಯುವುದಿಲ್ಲ. ಕಾರಣ ಸಿಧು ಪಾಕಿಸ್ತಾನ ಬ್ಯುಸಿನೆಸ್ ರಾಜಕೀಯ ಮಾಡುತ್ತಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇಜ್ ಬಾಜ್ವಾ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಿಧು ಆಪ್ತರಾಗಿದ್ದಾರೆ ಎಂದು ANI ಜೊತೆಗಿನ ಸಂದರ್ಶನದಲ್ಲಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಸಿಧು ಮುಖ್ಯಮಂತ್ರಿಯಾದರೆ ಪಂಜಾಬ್ ಪಠಾನ್‌ಕೋಟ್‌ನಿಂದ ಫಾಜಿಲ್ಕಾ ವರೆಗಿನ 600 ಕಿ.ಮೀ ಉದ್ದರ ಅಂತಾರಾಷ್ಟ್ರೀಯ ಗಡಿಯಲ್ಲಿ ಏನು ಸಂಭವಿಸುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಸ್ನೇಹದಿಂದ ಸಿಧು ದೇಶದಲ್ಲಿ ಅಭದ್ರತೆ ಸೃಷ್ಟಿಸುವ ಸಾಧ್ಯತೆ ಹೆಚ್ಚು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಗಾಳಿ; ರಾಜೀನಾಮೆಗೆ ಮುಂದಾದ ಸಿಎಂ ಅಮರಿಂದರ್!
ಕಾಂಗ್ರೆಸ್ ನಾಯಕರಿಂದ 3 ಬಾರಿ ಅವಮಾನಿತನಾಗಿದ್ದೇನೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕುತಂತ್ರಕ್ಕೆ ಬೇಸತ್ತಿದ್ದೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. 2019ರಲ್ಲಿ ಅಮರಿಂದರ್ ಸಿಂಗ್, ಸಿಧು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥನ ಅಪ್ಪಿಕೊಂಡ ವ್ಯಕ್ತಿಯನ್ನು ಭಾರತೀಯರು ಸಹಿಸಲು ಸಾಧ್ಯವಿಲ್ಲ ಎಂದಿದ್ದರು. ಸಿಧು ಪಾಕಿಸ್ತಾನ ಪ್ರೇಮಕ್ಕೆ ದೇಶದೆಲ್ಲಡೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಯಾವ ಭಾರತೀಯನೂ ಪಾಕಿಸ್ತಾನ ಸೇನಾ ಮುಖ್ಯಸ್ಥನ ಅಪ್ಪಿಕೊಂಡ ವ್ಯಕ್ತಿಯನ್ನು ಸಹಿಸುವುದಿಲ್ಲ. ಪಾಕಿಸ್ತಾನ ಸೇನೆ ಇದೇ ಮುಖ್ಯಸ್ಥನ ಅಣತಿಯಂತೆ ಅದೆಷ್ಟು ಬಾರಿ ಗಡಿ ನಿಯಮ ಉಲ್ಲಂಘಿಸಿ ನಮ್ಮ ಯೋಧರ ಮೇಲೆ ದಾಳಿ ಮಾಡಿದೆ. ಅದೆಷ್ಟು ಯೋಧರು ಹುತಾತ್ಮರಾಗಿದ್ದಾರೆ. ಅದೇ ಸೇನಾ ಮುಖ್ಯಸ್ಥನನ್ನು ಸಿಧು ಅಪ್ಪಿಕೊಂಡಿದ್ದಾರೆ ಎಂದು ಅಮರಿಂದರ್ ತಮ್ಮದೇ ಪಕ್ಷದ ನಾಯಕನ ವಿರುದ್ಧ ಗುಡಿಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ