PM Modi Security Breach: ಗಣರಾಜ್ಯೋತ್ಸವ, ಮೋದಿಗೆ ಅಡ್ಡಿ: ಆಡಿಯೋದಲ್ಲಿ ಬೆದರಿಕೆ

Kannadaprabha News   | Asianet News
Published : Jan 13, 2022, 05:04 AM IST
PM Modi Security Breach: ಗಣರಾಜ್ಯೋತ್ಸವ, ಮೋದಿಗೆ ಅಡ್ಡಿ: ಆಡಿಯೋದಲ್ಲಿ ಬೆದರಿಕೆ

ಸಾರಾಂಶ

*  ಪ್ರಧಾನಿ ವಿರುದ್ಧ ಷಡ್ಯಂತ್ರಕ್ಕೆ ಸಿಖ್‌ ಪ್ರತ್ಯೇಕತಾವಾದಿ ಸಂಘಟನೆ ಕರೆ *  ಜ.26ರಂದು ಮೋದಿಗೆ ತಡೆ ಒಡ್ಡಿ, ತ್ರಿವರ್ಣ ಧ್ವಜ ಇಳಿಸಲು ಸೂಚನೆ *  ವಕೀಲರಿಗೂ ಮತ್ತೆ ಬೆದರಿಕೆ ಸಂದೇಶ  

ನವದೆಹಲಿ(ಜ.13):  ಪಂಜಾಬ್‌ನಲ್ಲಿ(Punjab) ಪ್ರಧಾನಿ ನರೇಂದ್ರ ಮೋದಿ(Narendra Modi) ಭದ್ರತಾ ವೈಫಲ್ಯ ಕುರಿತು ಸುಪ್ರೀಂಕೋರ್ಟ್‌ನಲ್ಲಿ(Supreme Court) ನಡೆಯುತ್ತಿರುವ ವಿಚಾರಣೆಗೆ ಹಾಜರಾಗದಂತೆ ವಕೀಲರಿಗೆ ಬೆದರಿಕೆ ಹಾಕಲಾಗಿದೆ. ಕೆನಡಾದ(Canada) ಒಂಟಾರಿಯೋದಿಂದ ವಕೀಲರೊಬ್ಬರಿಗೆ ಈ ಕರೆ ಬಂದಿದೆ. ಕಳೆದ 3 ದಿನದಲ್ಲಿ ವಕೀಲರಿಗೆ ಬರುತ್ತಿರುವ 4ನೇ ಕರೆ ಇದಾಗಿದೆ.

ಭದ್ರತಾ ಲೋಪ ತನಿಖೆ: ನ್ಯಾ. ಇಂದು ನೇತೃತ್ವ

ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್‌ ಭೇಟಿಯ ವೇಳೆ ನಡೆದ ಭದ್ರತಾ ಲೋಪ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್‌ ಐವರು ಸದಸ್ಯರ ಉನ್ನತ ತನಿಖಾ ಸಮಿತಿ ರಚನೆ ಮಾಡಿದೆ. ಸಮಿತಿಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶೆ ನ್ಯಾ ಇಂದು ಮಲ್ಹೋತ್ರಾ ಅವರು ನೇತೃತ್ವ ವಹಿಸಲಿದ್ದಾರೆ.

PM Security Breach: ಪೊಲೀಸರೇ ರೈತರನ್ನು ಕರೆತಂದಿದ್ದು, ಪಂಜಾಬ್ ಸರ್ಕಾರದ ಷಡ್ಯಂತ್ರ ಬಿಚ್ಚಿಟ್ಟ ಮಾಜಿ IAS!

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್‌ ಭೇಟಿ ವೇಳೆ ಅವರ ಸಂಚಾರಕ್ಕೆ ಅಡ್ಡಿಪಡಿಸಿ ಆತಂಕದ ಕ್ಷಣ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಪ್ರತ್ಯೇಕ ಖಲಿಸ್ತಾನಿ(Khalistan) ರಾಷ್ಟ್ರದ ಪರ ಹೋರಾಟ ಸಂಘಟನೆಯಾದ ‘ಸಿಖ್ಸ್‌ ಫಾರ್‌ ಜಸ್ಟೀಸ್‌’ (ಎಸ್‌ಎಫ್‌ಜೆ), ಇದೀಗ ಮತ್ತೆ ಪ್ರಧಾನಿ ಮೋದಿ ವಿರುದ್ಧ ಷಡ್ಯಂತ್ರಕ್ಕೆ ಕರೆ ಕೊಟ್ಟಿದೆ. ಹೀಗೆ ಕರೆ ಕೊಟ್ಟ ಆಡಿಯೋ ಸಂದೇಶವೊಂದನ್ನು ಬುಧವಾರ ಸುಪ್ರೀಂಕೋರ್ಟ್‌ನ ವಕೀಲರಿಗೆ ರವಾನಿಸಲಾಗಿದೆ. ಅದರಲ್ಲಿ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ(Republic Day) ಕಾರ್ಯಕ್ರಮಕ್ಕೆ ಯಾವ ರೀತಿಯಲ್ಲಿ ಅಡ್ಡಿ ಮಾಡಬೇಕು ಎಂಬುದನ್ನು ಪ್ರಸ್ತಾಪಿಸಲಾಗಿದೆ.

ಎಸ್‌ಎಫ್‌ಜೆ ಮುಖ್ಯಸ್ಥ ಗುರ್ಪತ್‌ವತ್‌ ಸಿಂಗ್‌ ಪನ್ನು ಧ್ವನಿಯಲ್ಲಿರುವ ಈ ಸಂದೇಶವನ್ನು ಕೆನಡಾದಿಂದ ರವಾನಿಸಲಾಗಿದ್ದು, ಅದರಲ್ಲಿ ‘ನಮ್ಮ ಬೆಂಬಲಿಗರು ಜ.26ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಡೆ ಒಡ್ಡಬೇಕು. ದಿಲ್ಲಿಯಲ್ಲಿ ಅಂದು ಹಾರುವ ತ್ರಿವರ್ಣಧ್ವಜ(India Flag) ಇಳಿಸಬೇಕು’ ಎಂದು ಕರೆ ನೀಡಿದ್ದಾನೆ. ಈ ಮೂಲಕ ಸಂಘಟನೆ ಗಣರಾಜ್ಯೋತ್ಸವ ಸಂಭ್ರಮವನ್ನು ಹಾಳು ಮಾಡುವ ಬೆದರಿಕೆ ಒಡ್ಡಿದೆ. ಕಳೆದ 3 ದಿನದಲ್ಲಿ ವಕೀಲರಿಗೆ(Advocate) ಬರುತ್ತಿರುವ 4ನೇ ಕರೆ ಇದಾಗಿದೆ.

PM Security Breach: ಮೋದಿಗೆ ಸಹಾಯ ಮಾಡ್ಬೇಡಿ, ಸುಪ್ರೀಂ ವಕೀಲರಿಗೆ ಖಲಿಸ್ತಾನಿ ಬೆಂಬಲಿಗರ ಬೆದರಿಕೆ!

ಎರಡು ದಿನಗಳ ಹಿಂದೆ ಸುಪ್ರೀಂಕೋರ್ಟ್‌ನ ವಕೀಲರಿಗೆ ರವಾನಿಸಿದ ಸಂದೇಶದಲ್ಲಿ ‘ಸುಪ್ರೀಂಕೋರ್ಟ್‌ನ ಯಾವುದೇ ನ್ಯಾಯಾಧೀಶರು ಪ್ರಧಾನಿ ಮೋದಿ ಅವರಿಗೆ ಪಂಜಾಬ್‌ನಲ್ಲಿ ಭದ್ರತಾ ಲೋಪ ಎಸಗಲಾಗಿದೆ ಎಂದು ಆರೋಪಿಸಿದ ಪ್ರಕರಣದ ವಿಚಾರಣೆ ನಡೆಸಬಾರದು. ವಕೀಲರು ಕೂಡ ಈ ಪ್ರಕರಣದ ಕುರಿತು ವಾದಿಸಬಾರದು’ ಎಂದು ಎಚ್ಚರಿಕೆ ನೀಡಲಾಗಿತ್ತು.

ಇನ್ನು ಭದ್ರತಾ ಲೋಪ ಘಟನೆ ನಡೆದ ಜ.5ಕ್ಕೂ 2 ದಿನ ಮೊದಲು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಗುರ್ಪಾವತ್‌ ಸಿಂಗ್‌ ಅದರಲ್ಲಿ ‘ಮೋದಿ ರಾರ‍ಯಲಿ ವಿಫಲಗೊಳಿಸುವಂತೆ ಕರೆ ಕೊಟ್ಟಿದ್ದ. ಅಲ್ಲದೆ ಹೀಗೆ ಮಾಡಿದವರಿಗೆ 1 ಲಕ್ಷ ಡಾಲರ್‌ (75 ಲಕ್ಷ ರು.) ಬಹುಮಾನ ಘೋಷಿಸಿದ್ದ. ಜೊತೆಗೆ ಮೋದಿ ಕಾರಿಗೆ ಪ್ರತಿಭಟನಾಕಾರರು ಅಡ್ಡಗಟ್ಟಿದ ಬಳಿಕವೂ ವಿಡಿಯೋ ಬಿಡುಗಡೆ ಮಾಡಿದ್ದ ಪನ್ನು, ಇದು ಖಲಿಸ್ತಾನಿ ಸ್ವಾತಂತ್ರ್ಯಕ್ಕಾಗಿ ರೈತರು ಆರಂಭಿಸಿದ ಸ್ವಾತಂತ್ರ್ಯ ಹೋರಾಟ. ಈ ಹಿಂದೆ ಶಸಾಸ್ತ್ರ ಹಿಡಿದು ಬಂದ ಪ್ರಧಾನಿ ಇಂದಿರಾ ಗಾಂಧಿಗೆ(Indira Gandhi) ಶಸ್ತ್ರಾಸ್ತ್ರದ ಮೂಲಕವೇ ಉತ್ತರ ನೀಡಿದ್ದೆವು. ಈಗ ನೀವು ಪಂಜಾಬ್‌ ಜನರಲ್ಲಿ ಭೀತಿ ಹುಟ್ಟು ಹಾಕುತ್ತಿದ್ದೀರಿ. ನಿಮಗೆ ನಾವು ಶಾಂತಿಯುತವಾಗಿ ಮತಗಳ ಮೂಲಕವೇ ಉತ್ತರ ನೀಡಲಿದ್ದೇವೆ ಎಂದು ಪ್ರಧಾನಿ ಮೋದಿಗೆ ಎಚ್ಚರಿಸಿದ್ದ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ