Covid in India: ಕರ್ನಾಟಕ ಸೇರಿ 8 ರಾಜ್ಯಗಳ ಕೋವಿಡ್‌ ಸ್ಥಿತಿ ಆತಂಕಕಾರಿ

Kannadaprabha News   | Asianet News
Published : Jan 13, 2022, 04:46 AM IST
Covid in India: ಕರ್ನಾಟಕ ಸೇರಿ 8 ರಾಜ್ಯಗಳ ಕೋವಿಡ್‌ ಸ್ಥಿತಿ ಆತಂಕಕಾರಿ

ಸಾರಾಂಶ

*    ಬೆಂಗಳೂರು ಸೇರಿ 6 ಜಿಲ್ಲೆಗಳು ಡೇಂಜರ್‌: ಕೇಂದ್ರ ಕಳವಳಕಾರಿ *    ಪಾಸಿಟಿವಿಟಿ ದರ 1.1%ರಿಂದ 11.05%ಕ್ಕೇರಿಕೆ *   19 ರಾಜ್ಯಗಳಲ್ಲಿ 10,000ಕ್ಕೂ ಹೆಚ್ಚು ಸಕ್ರಿಯ ಕೇಸ್‌   

ನವದೆಹಲಿ(ಜ.13):  ಕೋವಿಡ್‌(Covid19) ಪ್ರಕರಣಗಳು ಭಾರೀ ಪ್ರಮಾಣದಲ್ಲಿ ವರದಿಯಾಗುತ್ತಿರುವ ಕರ್ನಾಟಕ(Karnataka) ಸೇರಿದಂತೆ 8 ರಾಜ್ಯಗಳು ಮತ್ತು ಬೆಂಗಳೂರು(Bengaluru) ನಗರ ಜಿಲ್ಲೆ ಸೇರಿದಂತೆ 6 ಜಿಲ್ಲೆಗಳನ್ನು ಕಳವಳಕಾರಿಯಾಗಿ ಹೊರಹೊಮ್ಮುತ್ತಿರುವ ಪ್ರದೇಶಗಳು ಎಂದು ಕೇಂದ್ರ ಸರ್ಕಾರ(Central Government) ಬಣ್ಣಿಸಿದೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ(Central Ministry of Health)ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ಕೋವಿಡ್‌ ಪ್ರಕರಣಗಳು ದೇಶಾದ್ಯಂತ(India)ಹೆಚ್ಚುತ್ತಿವೆ. ಡಿ.30ರಂದು ಕೇವಲ ಶೇ.1.1 ಇದ್ದ ಪಾಸಿಟಿವಿಟಿ ದರ(Positivity Rate)  ಶೇ.11.05ಕ್ಕೇರಿದೆ. ದೇಶದಲ್ಲಿ ಕೊರೋನಾ(Coronavirus) ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳ ಸಂಖ್ಯೆಕಳೆದ ವಾರ 43 ಇತ್ತು. ಈಗ ಅದು 300ಕ್ಕೇರಿದೆ. 19 ರಾಜ್ಯಗಳಲ್ಲಿ 10 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದಿಲ್ಲಿ, ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ಕೇರಳ ಹಾಗೂ ಗುಜರಾತ್‌ನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಕಳವಳಕಾರಿ ರಾಜ್ಯಗಳಾಗಿ ಪರಿಣಮಿಸಿವೆ. ದಿಲ್ಲಿಯಲ್ಲಿ ಶೇ.23, ಬಂಗಾಳದಲ್ಲಿ ಶೇ.32 ಹಾಗೂ ಮಹಾರಾಷ್ಟ್ರದಲ್ಲಿ ಶೇ.22 ಪಾಸಿಟಿವಿಟಿ ದರ ದಾಖಲಾಗುತ್ತಿದೆ. ಇದು ಅಪಾಯಕಾರಿ ಎಂದು ಹೇಳಿದರು.

PM-CMs Meeting ಮುಖ್ಯಮಂತ್ರಿಗಳ ಜತೆ ಗುರುವಾರ ಪ್ರಧಾನಿ ಸಭೆ, ಎದುರುನೋಡುತ್ತಿರುವ ಕರ್ನಾಟಕ

ಜಿಲ್ಲೆ ಆತಂಕ:

ಇದೇ ವೇಳೆ ಬೆಂಗಳೂರು ನಗರ, ಮುಂಬೈ, ಥಾಣೆ, ಕೋಲ್ಕತಾ, ಚೆನ್ನೈ ಹಾಗೂ ಪುಣೆ ಜಿಲ್ಲೆಗಳು ಕೋವಿಡ್‌ ಸೋಂಕು ಅಂಕೆ ಮೀರುತ್ತಿರುವ ಜಿಲ್ಲೆಗಳಾಗಿವೆ ಎಂದೂ ಅವರು ನುಡಿದರು.

ದಾಖಲೆ ಏರಿಕೆ:

ಜಗತ್ತಿನಾದ್ಯಂತ(World) ಕೂಡ ಕೋವಿಡ್‌ ಕೇಸುಗಳು ಏರುತ್ತಿವೆ. ಇದರ ಸಂಕೇತವಾಗಿ 31.59 ಲಕ್ಷ ಪ್ರಕರಣಗಳು ವಿಶ್ವಾದ್ಯಂತ ಜ.10ರಂದು ಒಂದೇ ದಿನ ವರದಿಯಾಗಿವೆ ಎಂದು ತಿಳಿಸಿದರು.

ಕೋವಿಡ್‌ ಸ್ಫೋಟ

- 5%ಗಿಂತ ಅಧಿಕ ಪಾಸಿಟಿವಿಟಿಯ ಜಿಲ್ಲೆಗಳ ಸಂಖ್ಯೆ ಈಗ 300ಕ್ಕೇರಿಕೆ
- ಕಳೆದ ವಾರ ದೇಶದಲ್ಲಿ ಇಂತಹ ಜಿಲ್ಲೆಗಳ ಸಂಖ್ಯೆ ಕೇವಲ 43 ಇತ್ತು
- ಬಂಗಾಳದಲ್ಲಿ 32%, ದಿಲ್ಲಿಯಲ್ಲಿ 23% ಕೋವಿಡ್‌ ಪಾಸಿಟಿವಿಟಿ ದರ
- 19 ರಾಜ್ಯಗಳಲ್ಲಿ 10000ಕ್ಕೂ ಹೆಚ್ಚು ಸಕ್ರಿಯ ಕೇಸ್‌: ಕೇಂದ್ರ ಸರ್ಕಾರ

ಕರ್ನಾಟಕದಲ್ಲಿ ಕೈ ಮೀರಿತು ಪರಿಸ್ಥಿತಿ, ಒಂದೇ ದಿನ 20 ಸಾವಿರ ಗಡಿದಾಟಿದ ಹೊಸ ಕೇಸ್

ವೀಕೆಂಡ್ ಕರ್ಫ್ಯೂ ಸೇರಿದಂತೆ ಇತರೆ ಕಠಿಣ ನಿಯಮ ಜಾರಿಗೆ ತಂದರೂ ಸಹ ಕರ್ನಾಟಕದಲ್ಲಿ (Karnataka) ಕೊರೋನಾ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಏರಿಕೆಯಾಗುತ್ತಿದೆ, ಅದರಲ್ಲೂ ಇಂದು(ಜ.12) ಒಂದೇ ದಿನದ ಕರ್ನಾಟಕದಲ್ಲಿ ಕೋವಿಡ್ ಹೊಸ ಕೇಸ್ (Coronavirus Cases) 20 ಸಾವಿರದ ಗಡಿದಾಟಿದ್ದು, ಬೆಚ್ಚಿಬೀಳಿಸಿದೆ. 

Covid 19 Spike: ಇಂದಿನಿಂದ 1-8ನೇ ಭೌತಿಕ ತರಗತಿ ಬಂದ್‌

ಹೌದು...ಕಳೆದ 24 ಗಂಟೆಗಳಲ್ಲಿ 21,390 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ರೆ, ಈ ಪೈಕಿ ಬೆಂಗಳೂರು ನಗರದಲ್ಲಿಯೇ 15,617 ಕೇಸ್ ದೃಢಪಟ್ಟಿವೆ.ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 3099519ಕ್ಕೇರಿದ್ರೆ, ಬೆಂಗಳೂರಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1334957. ಇದುವರೆಗೂ ನಗರದಲ್ಲಿ 16433 ಜನರು ಮೃತಪಟ್ಟಿದ್ದಾರೆ.

ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 93,009ಕ್ಕೆ ಏರಿಯಾಗಿದ್ರೆ, ಬೆಂಗಳೂರಿನಲ್ಲಿ ನಗರದಲ್ಲಿಯೇ 73 ಸಾವಿರ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ 24 ಗಂಟೆಯಲ್ಲಿ 1,95,047 ಮಾದರಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ರಾಜ್ಯದ ಪಾಸಿಟಿವಿಟಿ ದರ ಶೇ 10.96ಕ್ಕೆ ಏರಿಕೆಯಾಗಿದೆ.  ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್