ISRO Chairman : ಇಸ್ರೋ ಮುನ್ನಡೆಸಲಿದ್ದಾರೆ ಸೋಮನಾಥ್, ರಾಕೆಟ್ ವಿಜ್ಞಾನಿಗೆ ದೊಡ್ಡ ಜವಾಬ್ದಾರಿ

By Kannadaprabha News  |  First Published Jan 13, 2022, 3:38 AM IST

* ರಾಕೆಟ್‌ ವಿಜ್ಞಾನಿ ಸೋಮನಾಥ್‌ಗೆ ಇಸ್ರೊ ಮುಖ್ಯಸ್ಥ ಹುದ್ದೆ

* ಕೆ. ಶಿವನ್‌ ಸ್ಥಾನಕ್ಕೆ ನೇಮಕ, ಶುಕ್ರವಾರ ಅಧಿಕಾರ ಸ್ವೀಕಾರ

* 3 ವರ್ಷದ ಕಾರ್ಯಭಾರ ಅವರ ಮೇಲಿದೆ


ನವದೆಹಲಿ(ಜ. 13) ಪ್ರಸಿದ್ಧ ರಾಕೆಟ್‌ ವಿಜ್ಞಾನಿ (Senior Rocket Scientist) ಎಸ್‌.ಸೋಮನಾಥ್‌ (S. Somanath) ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಹಾಲಿ ಇಸ್ರೋ ಅಧ್ಯಕ್ಷರಾಗಿದ್ದ ಕೆ.ಶಿವನ್‌, ಶುಕ್ರವಾರ  ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಸೋಮನಾಥ್‌ ತುಂಬಲಿದ್ದಾರೆ.

ಎಸ್‌.ಸೋಮನಾಥ್‌ ಅವರು ಪ್ರಸ್ತುತ ತಿರುವನಂತಪುರದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ(VSSC)ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಡಾವಣಾ ವಾಹನದ ವಿನ್ಯಾಸ ಮತ್ತು ರಾಕೆಟ್‌ ಸಮನ್ವಯತೆ ರೂಪಿಸುವುದರಲ್ಲಿ ನಿಪುಣರಾದ ಇವರನ್ನು 3 ವರ್ಷದ ಅವಧಿಗೆ ಇಸ್ರೋದ ಮುಖ್ಯಸ್ಥ ಮತ್ತು ಬಾಹ್ಯಕಾಶ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಈ ಎರಡು ಸ್ಥಾನಗಳಿಗೂ ಕೇವಲ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ.

Tap to resize

Latest Videos

undefined

2 ವರ್ಷಗಳ ಕಾಲ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್‌ ಸೆಂಟರ್‌ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಸೋಮನಾತ್‌, 2018 ಜ.22ರಿಂದ ವಿಎಸ್‌ಎಸ್‌ಸಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇರಳದ ಎರ್ನಾಕುಲಂನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು, ಕೇರಳ ವಿಶ್ವವಿದ್ಯಾಲಯದಿಂದ ಮೆಕಾನಿಕಲ್‌ ಎಂಜಿನಿಯರ್‌ ಪದವಿ ಪಡೆದಿದ್ದಾರೆ. ಬೆಂಗಳೂರಿನ ಐಐಎಸ್‌ಸಿಯಲ್ಲಿ ಎರೋಸ್ಪೇಸ್‌ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವಿ ಪಡೆದ ನಂತರ ಇಸ್ರೋದಲ್ಲಿ ಕೆಲಸ ಮಾಡಲು ಆರಂಭಿಸಿದರು. ಕೆಲಸಕ್ಕೆ ಸೇರಿದಾಗಿನಿಂದಲೂ ಉಡಾವಣಾ ವಾಹನಗಳ ಕುರಿತು ಅನೇಕ ಸಂಶೋಧನೆಗಳನ್ನು ನಡೆಸಿದರು. ಇಸ್ರೋದ ಬಹುದೊಡ್ಡ ಯೋಜನೆಯಾದ ಮೂರು ಹಂತದ ರಾಕೆಟ್‌ ಜಿಎಸ್‌ಎಲ್‌ವಿ ಮಾರ್ಕ್-3ರ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇರ್‌ ಕಟ್‌ ಹೇಗೆ ಮಾಡ್ತಾರೆ ಗೊತ್ತಾ... ಈ ವಿಡಿಯೋ ನೋಡಿ

ಭಾರೀ ಆದಾಯ: ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಭಾರತದ ಉಪಗ್ರಹಗಳು  ಮಾತ್ರವಲ್ಲದೆ, ವಿದೇಶಿ ಉಪಗ್ರಹಗಳನ್ನು ಕೂಡ ಕಕ್ಷೆಗೆ ಸೇರಿಸಿದ ಕೀರ್ತಿ ಇಸ್ರೋಗೆ (ISRO)ಸಲ್ಲುತ್ತದೆ. ಈ ರೀತಿ 26 ದೇಶಗಳ  ಉಪಗ್ರಹಗಳ ಉಡಾವಣೆ ಮೂಲಕ ಕಳೆದ 5 ವರ್ಷಗಳಲ್ಲಿ ಭಾರತ ಸುಮಾರು 1,245ಕೋಟಿ ರೂ.  (35 ಮಿಲಿಯನ್ ಅಮೆರಿಕ ಡಾಲರ್ ಮತ್ತು 10 ಮಿಲಿಯನ್ ಯುರೋಗಳಷ್ಟು) ಆದಾಯ ಗಳಿಸಿದೆ. ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್  (Jitendra Singh)ಈ ಮಾಹಿತಿ ನೀಡಿದ್ದರು.

ಇಸ್ರೋ ವಾಣಿಜ್ಯ ವಿಭಾಗದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್  ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮೂಲಕ ಇತರ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಇದ್ರಿಂದ ಇಸ್ರೋಗೆ ಆದಾಯ ಬರುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. 2020-23ರ ಅವಧಿಯಲ್ಲಿ PSLV ಮೂಲಕ ಉಪಗ್ರಹಗಳನ್ನು ಉಡಾಯಿಸಲು ಇಸ್ರೋ ನಾಲ್ಕು ದೇಶಗಳ ಗ್ರಾಹಕರೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ಒಟ್ಟು ಆರು ಒಪ್ಪಂದಗಳಿಗೆ ಇಸ್ರೋ ಸಹಿ ಹಾಕಿದೆ. ಈ ವಿದೇಶಿ ಉಪಗ್ರಹಗಳ ಉಡಾವಣೆಯಿಂದ ಅಂದಾಜು 132 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಇಸ್ರೋ ಗಳಿಸಲಿದೆ. 34 ದೇಶಗಳ 342 ವಿದೇಶಿ ಉಪಗ್ರಹಗಳನ್ನು ಸ್ವದೇಶಿ ಉಡಾವಣಾ ವಾಹನಗಳ ಮೂಲಕ ಭೂ ಕಕ್ಷೆಗೆ ಸೇರಿಸಲಾಗಿದೆ. ಇನ್ನು ವಿದ್ಯಾರ್ಥಿಗಳು ನಿರ್ಮಿಸಿರೋ 12 ಉಪಗ್ರಹಗಳು ಸೇರಿದಂತೆ ಒಟ್ಟು 124 ಸ್ವದೇಶಿ ಉಪಗ್ರಹಗಳನ್ನು ಕ್ಷಕೆಗೆ ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದರು.

ಭಾರತೀಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಈ ತನಕ 50 ಟನ್ ನಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಅದ್ರಲ್ಲಿ ಸುಮಾರು ಶೇ.17ರಷ್ಟು ವಿದೇಶಿ ಗ್ರಾಹಕರ ಉಪಗ್ರಹಗಳು ಸೇರಿವೆ. ಇನ್ನು 2018-19ನೇ ಆರ್ಥಿಕ ಸಾಲಿನಲ್ಲಿ ಭಾರತ  91.63 ಕೋಟಿ ರೂ. ವಿದೇಶಿ ವಿನಿಮಯ ಗಳಿಸಲು ಇಸ್ರೋ ನೆರವು ನೀಡಿದೆ. ಕಳೆದ 5 ವರ್ಷಗಳಲ್ಲಿ ಇಸ್ರೋ ಅಮೆರಿಕ, ಇಂಗ್ಲೆಂಡ, ಜರ್ಮನಿ, ಕೆನಡಾ, ಸಿಂಗಾಪುರ, ನೆದರ್ಲ್ಯಾಂಡ್, ಜಪಾನ್, ಮಲೇಷ್ಯಾ, ಅಲ್ಜೆರಿಯಾ ಹಾಗೂ ಫ್ರಾನ್ಸ್ ಸೇರಿದಂತೆ ಒಟ್ಟು 10 ರಾಷ್ಟ್ರಗಳ  ಜೊತೆಗೆ ಉಪಗ್ರಹ ಉಡಾವಣೆಗೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿದೆ. 1999ರಿಂದ ಈ ತನಕ ಭಾರತ 319 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. 

 

click me!