ಈ ದೀಪಾವಳಿ ಈ ಹಿಂದಿನಂತಿಲ್ಲ... 32 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಬಿಲಿಯನೇರ್ ಗೌತಮ್ ಸಿಂಘಾನೀಯ

By Anusha Kb  |  First Published Nov 13, 2023, 6:02 PM IST

ಕೋಟ್ಯಾಧಿಪತಿ ಉದ್ಯಮಿ ಗೌತಮ್ ಸಿಂಘಾನಿಯಾ ಅವರು ತಮ್ಮ  ಪತ್ನಿ ನವಾಜ್‌ ಜೊತೆಗಿನ 32 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಗುಡ್‌ಬಾಯ್‌ ಹೇಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


ನವದೆಹಲಿ: ಕೋಟ್ಯಾಧಿಪತಿ ಉದ್ಯಮಿ ಗೌತಮ್ ಸಿಂಘಾನಿಯಾ ಅವರು ತಮ್ಮ  ಪತ್ನಿ ನವಾಜ್‌ ಜೊತೆಗಿನ 32 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಗುಡ್‌ಬಾಯ್‌ ಹೇಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದೀಪಾವಳಿಯು ಈ ಹಿಂದೆ ಇದ್ದಂತೆ ಇರುವುದಿಲ್ಲ ತಾವಿಬ್ಬರೂ ಬೇರ್ಪಡುತ್ತಿದ್ದು ಇಬ್ಬರು ಬೇರೆ ಬೇರೆ ದಾರಿ ಹಿಡಿಯಲು ಬಯಸಿರುವುದಾಗಿ ಗೌತಮ್ ಸಿಂಘಾನಿಯಾ ಟ್ವಿಟ್ ಮಾಡಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 58 ವರ್ಷದ ಸಿಂಘಾನಿಯಾ ಅವರು 1999ರಲ್ಲಿ  ಸಾಲಿಸಿಟರ್ ನಾದರ್ ಮೋದಿಯವರ ಪುತ್ರಿ ನವಾಜ್ ಮೋದಿ ಅವರನ್ನು ವಿವಾಹವಾಗಿದ್ದರು. ಸಿಂಘಾನಿಯಾ ಅವರು  ಜವಳಿ ರಿಯಲ್ ಎಸ್ಟೇಟ್ ಸಂಘಟಿತ ರೇಮಂಡ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 

8 ವರ್ಷಗಳ ಪ್ರೇಮದ ನಂತರ 1999ರಲ್ಲಿ ಗೌತಮ್ ಸಿಂಘಾನಿಯಾ ನವಾಜ್ ಮೋದಿ ಅವರನ್ನು ವಿವಾಹವಾಗಿದ್ದರು. ನವಾಜ್ ಮತ್ತು ನಾನು ಇಲ್ಲಿಂದ ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತೇವೆ ಎಂಬುದು ನನ್ನ ನಂಬಿಕೆ. 32 ವರ್ಷಗಳು ದಂಪತಿಯಾಗಿ ಒಟ್ಟಿಗೆ ಇದ್ದೆವು, ಪೋಷಕರಾಗಿ ಬೆಳೆಯುವುದರೊಂದಿಗೆ ಯಾವಾಗಲೂ ಒಬ್ಬರಿಗೊಬ್ಬರು ಶಕ್ತಿಯಾಗಿದ್ದೇವೆ ನಾವು ಬದ್ಧತೆ, ಸಂಕಲ್ಪ, ನಂಬಿಕೆಯೊಂದಿಗೆ ಸಾಗಿದ್ದೇವೆ ಮತ್ತು ಇದರ ಜೊತೆ ನಮ್ಮ ಜೀವನದಲ್ಲಿ ಎರಡು ಅತ್ಯಂತ ಸುಂದರವಾದ ಸೇರ್ಪಡೆಗಳು ಬಂದವು ಎಂದು ಗೌತಮ್ ಬರೆದುಕೊಂಡಿದ್ದು, ತಮ್ಮ ಬೇರ್ಪಡುವಿಕೆಯ ನಂತರ ಮಕ್ಕಳ ಸುಪರ್ದಿ ಯಾರೂ ಪಡೆಯುತ್ತಾರೆ ಎಂಬುದನ್ನು ಹೇಳಿಕೊಂಡಿಲ್ಲ. 

Tap to resize

Latest Videos

ಕಳೆದ ಕೆಲ ಸಮಯದಿಂದ ದುರಾದೃಷ್ಟಕರವಾದ ಬೆಳವಣಿಗೆಗಳು ನಡೆಯುತ್ತಿದ್ದು, ಸಾಕಷ್ಟು ಆಧಾರರಹಿತ ವದಂತಿಗಳು ಹರಡುತ್ತಿವೆ ನಮ್ಮ ಹಿತೈಷಿಗಳಲ್ಲದವರಿಂದ ನಮ್ಮ ಜೀವನದ ಗಾಳಿಸುದ್ದಿಗಳು ತುಂಬಿವೆ. ನಮ್ಮ ಎರಡು ಅಮೂಲ್ಯ ವಜ್ರಗಳಾದ ನಿಹಾರಿಕಾ ಮತ್ತು ನಿಸಾ ಅವರಿಗೆ ಉತ್ತಮವಾದುದನ್ನು ನಾವು ಮುಂದುವರಿಸುತ್ತಿರುವಾಗ ನಾನು ಅವಳಿಂದ ಬೇರೆಯಾಗುತ್ತಿದ್ದೇನೆ. ದಯವಿಟ್ಟು ನಮ್ಮ ವೈಯಕ್ತಿಕ ನಿರ್ಧಾರ ಹಾಗೂ ಖಾಸಗಿತನವನ್ನು ಗೌರವಿಸಬೇಕಾಗಿ ಕೇಳಿಕೊಳ್ಳುವೆ. ಮತ್ತು ಸಂಬಂಧದ ಎಲ್ಲಾ ಅಂಶಗಳನ್ನು ಇತ್ಯರ್ಥಗೊಳಿಸಲು ನಮಗೆ ನಮ್ಮದೇ ಆದ ಸಮಯ ಕೊಡಿ. ಈ ಸಮಯದಲ್ಲಿ ಇಡೀ ಕುಟುಂಬಕ್ಕೆ ನಿಮ್ಮ ಶುಭಾಶಯಗಳನ್ನು ಕೋರುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ. 

ಈ ಸುದ್ದಿಯನ್ನು ಘೋಷಿಸುವ ಕೆಲವು ನಿಮಿಷಗಳ ಮೊದಲಷ್ಟೇ ಗೌತಮ್ ಸಿಂಘಾನಿಯಾ ಅವರು ತಮ್ಮ ಗುಂಪಿನ ರಿಯಲ್ ಎಸ್ಟೇಟ್ ವಿಭಾಗವು ಮುಂಬೈನಾದ್ಯಂತ ತನ್ನ ಅಸ್ತಿತ್ವವನ್ನು ವಿಸ್ತರಿಸುವುದನ್ನು ಮುಂದುವರೆಸುತ್ತದೆ ಎಂದು ಬರೆದುಕೊಂಡಿದ್ದರು.

pic.twitter.com/kW853q7Kc0

— Gautam Singhania (@SinghaniaGautam)

 

click me!