ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಹಿಂದೂ ದೇವತೆ ಲಕ್ಷ್ಮೀಯ ಜನ್ಮವನ್ನು ಪ್ರಶ್ನಿಸಿದ್ದಾರೆ ಮತ್ತು ಲಕ್ಷ್ಮೀ ನಾಲ್ಕು ಕೈಗಳಿಂದ ಹೇಗೆ ಹುಟ್ಟುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ನವದೆಹಲಿ (ನವೆಂಬರ್ 13, 2023): ಭಾರತ ಮಾತ್ರವಲ್ಲದೆ ಜಗತ್ತಿನ ಹಲವೆಡೆ ದೀಪಾವಳಿ ಹಬ್ಬ ಆಚರಿಸಲಾಗ್ತಿದೆ. ಈ ವೇಳೆ ಲಕ್ಷ್ಮೀ ದೇವಿಯನ್ನು ಭಕ್ತರು ಪೂಜಿಸುತ್ತಾರೆ. ಆದರೆ, ಇದೆ ವೇಳೆ I.N.D.I.A ಒಕ್ಕೂಟದ ನಾಯಕ ವಿವಾದ ಸೃಷ್ಟಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಹಿಂದೂ ದೇವತೆ ಲಕ್ಷ್ಮೀಯ ಜನ್ಮವನ್ನು ಪ್ರಶ್ನಿಸಿದ್ದಾರೆ ಮತ್ತು ಲಕ್ಷ್ಮೀ ನಾಲ್ಕು ಕೈಗಳಿಂದ ಹೇಗೆ ಹುಟ್ಟುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಜಗತ್ತಿನಲ್ಲಿ ಎಲ್ಲಿಯಾದರೂ ಜನಿಸಿದ ಪ್ರತಿ ಮಗುವಿಗೆ ಎರಡು ಕೈಗಳು, ಎರಡು ಕಾಲುಗಳು, ಎರಡು ಕಿವಿಗಳು ಮತ್ತು ಎರಡು ಕಣ್ಣುಗಳಿವೆ. 4 ಕೈ, ಎಂಟು ಕೈಗಳು ಮತ್ತು ಹತ್ತು ಕೈಗಳ ಮಗು ಇದುವರೆಗೆ ಹುಟ್ಟಿಲ್ಲವಾದರೆ ಲಕ್ಷ್ಮೀ ದೇವಿಯು 4 ಕೈಗಳಿಂದ ಹುಟ್ಟಬಹುದೇ ಎಂದು ಸ್ವಾಮಿ ಪ್ರಸಾದ್ ಮೌರ್ಯ ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್: ಬಿಜೆಪಿ ಘೋಷಣೆ
ದೀಪೋತ್ಸವದ ಸಂದರ್ಭದಲ್ಲಿ ಹೆಂಡತಿಯನ್ನು ಪೂಜಿಸುವಾಗ ಮತ್ತು ಗೌರವಿಸುವಾಗ ನಾನು ಹೇಳುತ್ತೇನೆ, ಇಡೀ ಪ್ರಪಂಚದ ಪ್ರತಿಯೊಂದು ಧರ್ಮ, ಜಾತಿ, ಜನಾಂಗ, ಬಣ್ಣ ಮತ್ತು ದೇಶಗಳಲ್ಲಿ ಜನಿಸಿದ ಪ್ರತಿ ಮಗುವಿಗೆ ಎರಡು ಕೈಗಳು, ಎರಡು ಕಾಲುಗಳು, ಎರಡು ಕಿವಿಗಳು, ಎರಡು ಕಣ್ಣುಗಳು ಮತ್ತು ಒಂದು ಮೂಗಿನಲ್ಲಿ 2 ರಂಧ್ರಗಳಿವೆ. ಹಾಗೂ, ಒಂದು ತಲೆ, ಹೊಟ್ಟೆ ಮತ್ತು ಬೆನ್ನು ಮಾತ್ರ ಇದೆ.
ನಾಲ್ಕು ಕೈಗಳು, ಎಂಟು ಕೈಗಳು, ಹತ್ತು ಕೈಗಳು, ಇಪ್ಪತ್ತು ಕೈಗಳು ಮತ್ತು ಸಾವಿರ ಕೈಗಳಿರುವ ಮಗು ಇಲ್ಲಿಯವರೆಗೆ ಹುಟ್ಟಿಲ್ಲವಾದರೆ, ಲಕ್ಷ್ಮೀ ನಾಲ್ಕು ಕೈಗಳೊಂದಿಗೆ ಹೇಗೆ ಹುಟ್ಟುತ್ತಾರೆ? ಎಂದು ಸ್ವಾಮಿ ಪ್ರಸಾದ್ ಮೌರ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ಲಕ್ಷ್ಮೀ ದೇವಿಯನ್ನು ಪೂಜಿಸಲು ಬಯಸಿದರೆ, ನಿಜವಾದ ಅರ್ಥದಲ್ಲಿ ದೇವತೆಯಾಗಿರುವ ನಿಮ್ಮ ಹೆಂಡತಿಯನ್ನು ಪೂಜಿಸಿ ಮತ್ತು ಗೌರವಿಸಿ. ಏಕೆಂದರೆ ಅವಳು ನಿಮ್ಮ ಕುಟುಂಬದ ಪೋಷಣೆ, ಸಂತೋಷ, ಸಮೃದ್ಧಿ, ಆಹಾರ ಮತ್ತು ಆರೈಕೆಯ ಜವಾಬ್ದಾರಿಯನ್ನು ಅತ್ಯಂತ ಭಕ್ತಿಯಿಂದ ನಿರ್ವಹಿಸುತ್ತಾಳೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: ಭಾರತದ ರೈಲ್ವೆ ಕೇಂದ್ರಬಿಂದುವಾಗಲಿದೆ ಈ ನಗರ: ಸಾವಿರಾರು ಕೋಟಿ ರೂ. ಯೋಜನೆ ಘೋಷಿಸಿದ ಅಶ್ವಿನಿ ವೈಷ್ಣವ್
ಇನ್ನು, ಎಸ್‌ಪಿ ನಾಯಕನ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ, ಸ್ವಾಮಿ ಮೌರ್ಯ ಅವರು ಮಾತನಾಡುವುದನ್ನು ನಿಷೇಧಿಸಬೇಕು ಎಂದಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಮೌಖಿಕ ಅತಿಸಾರ ಕಾಣಿಸಿಕೊಂಡಿದೆ. ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಅವರು ಮಾತನಾಡುವುದನ್ನು ನಿಷೇಧಿಸುವಂತೆ ನಾನು ಯೋಗಿ ಆದಿತ್ಯನಾಥ್ ಅವರನ್ನು ಕೇಳುತ್ತೇನೆ ಎಂದು ಆಚಾರ್ಯ ಪ್ರಮೋದ್ ಹೇಳಿದ್ದಾರೆ.
ಛತ್ತೀಸ್‌ಗಢಕ್ಕೆ ಕಾಂಗ್ರೆಸ್ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!