
ಬೆಂಗಳೂರು(ನ.13) ಟಾಟಾ ಮಾಲೀಕತ್ವದ ಏರ್ ಇಂಡಿಯಾ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಇದೀಗ ಬೆಂಗಳೂರು-ಮಂಗಳೂರಿಗೆ ಎರಡು ಹೊಸ ವಿಮಾನ ಸೇವೆ ಘೋಷಿಸಿದೆ. ನವೆಂಬರ್ 15 ರಿಂದ ಹೊಸ ವಿಮಾನ ಸೇವೆ ಆರಂಭಗೊಳ್ಳುತ್ತಿದೆ. ಬೆಂಗಳೂರು-ಮಂಗಳೂರು ವಿಮಾನ ಸೇವೆ ಚೆನ್ನೈ, ಕಣ್ಮೂರು, ತಿರುವನಂತಪುರಂ ಹಾಗೂ ವಾರಣಾಸಿಯನ್ನೂ ಕನೆಕ್ಟ್ ಮಾಡಲಾಗುತ್ತಿದೆ.
ನವೆಂಬರ್ 25ರ ವರೆಗೆ ಮಾತ್ರ ವಾರಣಾಸಿ-ಮಂಗಳೂರು ಸಂಪರ್ಕ ವಿಮಾನ ಸೇವೆ ಇರಲಿದೆ. 10 ದಿನಗಳ ಬಳಿಕ ಈ ವಿಮಾನ ಸೇವೆ ಚೆನ್ನೈ-ಮಂಗಳೂರು ವಯಾ ಬೆಂಗಳೂರು ಆಗಿ ಬದಲಾಗಲಿದೆ. ಮತ್ತೊಂದು ವಿಮಾನ ಕಣ್ಮೂರು, ಮಂಗಳೂರು ಹಾಗೂ ಬೆಂಗಳೂರು ಸಂಪರ್ಕಿಸಲಿದೆ. ಮಂಗಳೂರು ವಿಮಾನ ನಿಲ್ದಾಣಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮಂಗಳೂರು ಮೂಲಕ ವಿಮಾನ ಪ್ರಯಾಣ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಬೆನ್ನಲ್ಲೇ ಏರ್ ಇಂಡಿಯಾ ಇದೀಗ ಮಂಗಳೂರು-ಬೆಂಗಳೂರಿಗೆ 2 ಹೊಸ ವಿಮಾನ ಸೇವೆ ನೀಡುತ್ತಿದೆ.
ಬೆಂಗಳೂರಿನಿಂದ ಸಿಂಗಾಪುರಕ್ಕೆ ಏರ್ ಇಂಡಿಯಾ ನಾನ್ ಸ್ಟಾಪ್ ವಿಮಾನ ಸೇವೆ ಆರಂಭ!
ಏರ್ ಇಂಡಿಯಾ IX 782 ವಿಮಾನ ಬೆಳಗ್ಗೆ 8 ಗಂಟೆಗೆ ವಾರಣಾಸಿ ವಿಮಾನ ನಿಲ್ದಾಣದಿಂದ ಹೊರಟು, 10.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಬಳಿಕ ಬೆಂಗಳೂರಿನಿಂದ 11.10ಕ್ಕೆ ಹೊರಟು 12.10ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ವಾರಣಾಸಿ-ಮಂಗಳೂರು ಸಂಪರ್ಕ ಕೇವಲ 10 ದಿನ ಮಾತ್ರ ಇರಲಿದೆ. ನವೆಂಬರ್ 25 ರಿಂದ ವಾರಣಾಸಿ ಬದಲು ಚೆನ್ನೇ ಸೇರಿಕೊಳ್ಳಲಿದೆ. ನವೆಂಬರ್ 26ರಿಂದ ಬೆಳಗ್ಗೆ 9.35ಕ್ಕೆ ಚೆನ್ನೈನಿಂದ ಹೊರಟು 10.35ಕ್ಕೆ ಬೆಂಗಳೂರು ತಲುಪಲಿದೆ. ಬಳಿಕ ಸಣ್ಣ ವಿರಾಮದ ಬಳಿಕ ಮಂಗಳೂರಿನತ್ತ ಪ್ರಯಾಣ ಬೆಳೆಸಲಿದೆ.
ಏರ್ ಇಂಡಿಯಾ IX 1795 ವಿಮಾನ ಕಣ್ಣೂರು-ಬೆಂಗಳೂರು-ಮಂಗಳೂರು ನಡುವೆ ಹಾರಾಟ ನಡೆಸಲಿದೆ. ಸಂಜೆ 4.30ಕ್ಕೆ ಕಣ್ಮೂರು ವಿಮಾನ ನಿಲ್ದಾಣದಿಂದ ಹೊರಟು, 5.50ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ. 6.25ಕ್ಕೆ ಬೆಂಗಳೂರಿನಿಂದ ಹೊರಟು, 7.30ಕ್ಕೆ ಮಂಗಳೂರು ತಲುಪಲಿದೆ.
ಏರ್ ಇಂಡಿಯಾ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ವರ್ಶ, ಮಾನವೀಯತೆ ಮೆರೆದ ಪಾಕಿಸ್ತಾನ!
ಸಾಮಾನ್ಯವಾಗಿ ಮಂಗಳೂರಿನಿಂದ ವಾರದಲ್ಲಿ 138 ವಿಮಾನಗಳ ಹಾರಾಟವಿದೆ. ಆದರೆ ಚಳಿಗಾಲದಲ್ಲಿ ಈ ಸಂಖ್ಯೆ ಹೆಚ್ಚಾಗುತ್ತಿದೆ. ನ.6ರಿಂದ 158(ಶೇ.16) ವಿಮಾನಗಳು ಹಾರಾಟ ನಡೆಸುತ್ತಿದೆ.ನ.15ರಿಂದ ಈ ಸಂಖ್ಯೆ 172 (ಶೇ.26) ತಲುಪಲಿದೆ. ಬೆಂಗಳೂರಿಗೆ ದೈನಂದಿನ ಐದು ಹಾರಾಟ, ಹೈದರಾಬಾದ್‌ಗೆ ದೈನಂದಿನ ಎರಡು ಹಾರಾಟ, ದೆಹಲಿಗೆ ದೈನಂದಿನ ಒಂದು ಇಂಡಿಗೋ ವಿಮಾನ ಸಂಚಾರ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ