
ಲೂಧಿಯಾನ: ವೇಟರ್ ವೇಷದಲ್ಲಿ ಮದುವೆ ಮನೆಗೆ ಬಂದ ಕಳ್ಳನೋರ್ವ ಅಲ್ಲಿದ್ದ ಒಂದು ಕೋಟಿ ಹಣವಿದ್ದ ಬ್ಯಾಗ್ ಅನ್ನು ಕದ್ದುಕೊಂಡು ಹೋದಂತಹ ಘಟನೆ ನಡೆದಿದ್ದು, ಮದುವೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿದೆ. ಪಂಜಾಬ್‌ನ ಲೂಧಿಯಾನದ ಪಖೋವಾಲ್ ರಸ್ತೆಯಲ್ಲಿರುವ ಸ್ಟರ್ಲಿಂಗ್ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಜನವರಿ 18ರಂದು ಈ ಘಟನೆ ನಡೆದಿದ್ಉದ, ಈಗ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಲೂಧಿಯಾನ ನಗರದ ಪ್ರಮುಖ ಆಭರಣ ವ್ಯಾಪಾರಿಯೊಬ್ಬರ ಮದುವೆ ಪೂರ್ವ ನಡೆಯುವ ಶಗುನ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯ ಪ್ರಕಾರ ಸಂಜೆ 5 ಗಂಟೆ ಸುಮಾರಿಗೆ ಈ ರೆಸಾರ್ಟ್‌ನ ಮದುವೆ ಹಾಲ್ ವೇಟರ್ ವೇಷದಲ್ಲಿ ಬಂದಿರುವ ಕಳ್ಳ ಈ ಭಾರಿ ಮೊತ್ತದ ಹಣವಿದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ.
ಸಿಸಿಟಿವಿ ದೃಶ್ಯಗಳಲ್ಲಿ ಕಾಣುವಂತೆ ಆತ ವೈಟರ್‌ಗಳ ಸಮವಸ್ತ್ರವಾದ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಮದುವೆ ಮನೆಗೆ ಬಂದಿದ್ದಾನೆ. ಸ್ಥಳದಲ್ಲಿ ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸಿದ ಆತ, ಕುಟುಂಬ ಸದಸ್ಯರು ಮದುವೆಯ ಆಚರಣೆಗಳಲ್ಲಿ ಬ್ಯುಸಿಯಾಗಿರುವುದನ್ನು ನೋಡಿ ವಧುವಿನ ಕುಟುಂಬಕ್ಕೆ ಸೇರಿದ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಚೀಲವನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾನೆ. ಹಿಂದಿ ಮಾಧ್ಯಮ ದೈನಿಕ್ ಭಾಸ್ಕರ್ ವರದಿಯ ಪ್ರಕಾರ ಆ ಚೀಲದಲ್ಲಿ ಸುಮಾರು 400 ಗ್ರಾಂ ಚಿನ್ನದ ಆಭರಣಗಳು ಹಾಗೂ 'ಶಗುನ್' (ನಗದು ಉಡುಗೊರೆಗಳು) ತುಂಬಿದ್ದ ಹಲವಾರು ಲಕೋಟೆಗಳು ಇದ್ದವು ಎಂದು ತಿಳಿದು ಬಂದಿದೆ.
ನಗದು ಸೇರಿದಂತೆ ಕದ್ದ ವಸ್ತುಗಳ ಒಟ್ಟು ಮೌಲ್ಯ ಸುಮಾರು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ಈ ಘಟನೆ ನಡೆದಿದೆ ಎಂದು ವಧುವಿನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮದುವೆಸಮಾರಂಭಕ್ಕಾಗಿ ವಧುವಿನ ಕುಟುಂಬ ಅಮೃತಸರದಿಂದ ಲೂಧಿಯಾನಗೆ ಬಂದಿತ್ತು.
ಇದನ್ನೂ ಓದಿ:
ಅಪ್ಪ ಮಗನ ಮೇಲೆ ಚಿರತೆ ದಾಳಿ : ಮಗನ ಜೀವ ಉಳಿಸಲು ಚಿರತೆಯ ಕೊಂದ ರೈತನ ವಿರುದ್ಧ ಅರಣ್ಯ ಇಲಾಖೆ ಕೇಸ್
ಈ ಅಮೂಲ್ಯ ವಸ್ತುಗಳಿದ್ದ ಚೀಲವನ್ನು ವಧುವಿನ ತಂದೆಯೇ ಹಿಡಿದುಕೊಂಡಿದ್ದರು. ಆದರೆ ಮದುವೆಯ ಆಚರಣೆಗಳ ನಡುವೆ ಅವರು ಸ್ವಲ್ಪ ಸಮಯದವರೆಗೆ ಚೀಲವನ್ನು ಕುರ್ಚಿಯ ಮೇಲೆ ಇಟ್ಟಿದ್ದಾರೆ ಇದೇ ಸಮಯವನ್ನು ನೋಡಿ ಕಳ್ಳ ಹೊಂಚು ಹಾಕಿದ್ದು, ಬೆಲೆ ಬಾಳುವ ವಸ್ತುವನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾನೆ. ಬ್ಯಾಗ್ ಕಾಣೆಯಾಗಿರುವುದು ತಿಳಿದ ನಂತರ, ಕುಟುಂಬ ಸದಸ್ಯರು ರೆಸಾರ್ಟ್‌ನ ವ್ಯವಸ್ಥಾಪಕರಿಗೆ ದೂರು ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಕೇಳಿಕೊಂಡರು. ನಂತರ ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ ವೇಟರ್ ವೇಷದಲ್ಲಿದ್ದ ಯುವಕನೋರ್ವ ಮದುವೆ ಮನೆಗೆ ಬಂದುಬ್ಯಾಗ್‌ನೊಂದಿಗೆ ಸ್ಥಳದಿಂದ ಹೊರಹೋಗುವುದು ಸೆರೆಯಾಗಿದೆ.
ಇದನ್ನೂ ಓದಿ: ತಲೆಯಲ್ಲಿ ಹುಳು ಆಗುತ್ತಾ? ಎಡಗಾಲು ಎಡಗೈಗೆ ಹಠಾತ್ ಪಿಟ್ಸ್: ಸಿಟಿಸ್ಕ್ಯಾನ್ ರಿಪೋರ್ಟ್ ನೋಡಿ ರೈತನಿಗೆ ಆಘಾತ
ಸದರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಜಗದೇವ್ ಸಿಂಗ್ ನಂತರ ಸ್ಥಳಕ್ಕೆ ಆಗಮಿಸಿ ಈ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ