ಬಹುನಿರೀಕ್ಷಿತ ಜಾತಿಗಣತಿಯನ್ನು ಬಿಹಾರ ಸರ್ಕಾರ ಆರಂಭಿಸಿದೆ. ಈ ಗಣತಿಯಿಂದಾಗಿ ಪ್ರತಿ ಸಮುದಾಯದ ಜನರ ಆರ್ಥಿಕ ಪರಿಸ್ಥಿತಿಗಳು ತಿಳಿಯಲಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪಟನಾ: ಬಹುನಿರೀಕ್ಷಿತ ಜಾತಿಗಣತಿಯನ್ನು ಬಿಹಾರ ಸರ್ಕಾರ ಆರಂಭಿಸಿದೆ. ಈ ಗಣತಿಯಿಂದಾಗಿ ಪ್ರತಿ ಸಮುದಾಯದ ಜನರ ಆರ್ಥಿಕ ಪರಿಸ್ಥಿತಿಗಳು ತಿಳಿಯಲಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ನಾವು ಮೊದಲಿನಿಂದಲೂ ಜಾತಿ ಗಣತಿ ನಡೆಸಬೇಕು ಎಂಬ ಬೇಡಿಕೆ ಸಲ್ಲಿಸುತ್ತಲೇ ಇದ್ದೆವು. ಇದರಿಂದಾಗಿ ಎಲ್ಲಾ ಸಮುದಾಯಗಳ ಜನರ ಆರ್ಥಿಕ ಸ್ಥಿತಿ ಸರ್ಕಾರಕ್ಕೆ ತಿಳಿಯಲಿದೆ. ಕೆಳಗಿರುವವರನ್ನು ಆರ್ಥಿಕವಾಗಿ ಮೇಲೆತ್ತಲು ಇದು ಸಹಾಯ ಮಾಡುತ್ತದೆ. 2011ರ ಜನಗಣತಿಯ ಬಳಿಕ ಸರ್ಕಾರ ಜಾತಿ ಆಧಾರಿತ ಗಣತಿಯನ್ನು ನಡೆಸಿತ್ತು. ಆದರೆ ಅದು ಸರಿಯಾಗಿರಲಿಲ್ಲ ಮತ್ತು ಆ ವರದಿಯನ್ನು ಬಿಡುಗಡೆ ಮಾಡಲಿಲ್ಲ. ಆದರೆ ಮತ್ತೊಮ್ಮೆ ಜಾತಿ ಗಣತಿ ನಡೆಸುವಂತೆ ನಾವು ಅವರಿಗೆ (ಮೈತ್ರಿ ಸರ್ಕಾರ) ಕೇಳಿದೆವು. ಆದರೆ ಅವರು ಒಪ್ಪಲಿಲ್ಲ ಎಂದು ಹೇಳಿದರು.
ನಾವು ಇದೇ ವಿಷಯವನ್ನು ಕೇಂದ್ರ ಸರ್ಕಾರದ ಎದುರು ಮಂಡಿಸಿದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರು ನಾವು ಜಾತಿ ಗಣತಿ ನಡೆಸುವುದಿಲ್ಲ. ಬೇಕಿದ್ದರೆ ರಾಜ್ಯಗಳು ನಡೆಸಿಕೊಳ್ಳಬಹುದು ಎಂದು ಹೇಳಿದರು. ಹಾಗಾಗಿ ನಾವು ಜಾತಿ ಆಧಾರಿತ ಗಣತಿ ನಡೆಸುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯನ್ನು ಲೆಕ್ಕ ಮಾಡುವಂತೆ ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಕೆಲವರು ನಗರಗಳಲ್ಲಿ, ಇನ್ನೂ ಕೆಲವರು ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಸರಿಯಾಗಿ ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದೇವೆ’ ಎಂದು ಅವರು ಹೇಳಿದರು.
ಜಾತಿ ಗಣತಿ ವರದಿ ಪುನರ್ ಪರಿಶೀಲನೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಜಾತಿಗಣತಿ ವರದಿ ಕಾಂಗ್ರೆಸ್ ಸೋರಿಕೆ ಮಾಡಿರಲಿಲ್ಲವೇ?: ಸುಧಾಕರ್ ವಾಗ್ದಾಳಿ