
ನವದೆಹಲಿ: ದೆಹಲಿಯಲ್ಲಿ ಕಾರು ಮೂಲಕ ಸುಮಾರು 12 ಕಿ.ಮೀ. ಎಳೆದೊಯ್ದು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಅಂಜಲಿ ಪರಿವಾರಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಸಂಸ್ಥೆ ಮೀರ್ ಫೌಂಡೇಶನ್ ಧನ ಸಹಾಯ ಒದಗಿಸಿದೆ. ಆದರೆ ಹಣದ ಮೊತ್ತ ತಿಳಿದು ಬಂದಿಲ್ಲ. ಶಾರುಖ್ ಖಾನ್ ತಂದೆ ಮೀರ್ ತಾಜ್ ಮೊಹ್ಮಮದ್ ಖಾನ್ ಹೆಸರಿನಲ್ಲಿರುವ ಮೀರ್ ಸಂಸ್ಥೆಯು ಅಂಜಲಿ ತಾಯಿ ಚಿಕಿತ್ಸೆಗೆ ಹಾಗೂ ಅಂಜಲಿ ಸಹೋದರಿ ವಿದ್ಯಾಭ್ಯಾಸಕ್ಕೆ ಹಣ ಸಹಾಯ ಒದಗಿಸಿದೆ. ತಳಮಟ್ಟದಲ್ಲಿ ಸುಧಾರಣೆಗೆ ಹಾಗೂ ಮಹಿಳೆಯರ ಬೆಳವಣಿಗೆಗೆ ಆಸರೆಯಾಗಲು ಹಣ ಸಹಾಯ ಮಾಡಲಾಗಿದೆ’ ಎಂದು ಸಂಸ್ಥೆ ತಿಳಿಸಿದೆ. ಜ.1ರಂದು ಸ್ಕೂಟಿ ಚಲಾಯಿಸುತ್ತಿದ್ದ ಅಂಜಲಿ ಕಾರು ಕೆಳಗೆ ಸಿಲುಕಿಕೊಂಡಿದ್ದು, ಕಾರು ಆಕೆಯನ್ನು 12 ಕಿ.ಮೀ ವರೆಗೆ ಎಳೆದೊಯ್ದ ಹಿನ್ನೆಲೆಯಲ್ಲಿ ಆಕೆ ಮೃತಪಟ್ಟಿದ್ದ ಘಟನೆ ನಡೆದಿತ್ತು. ಅಂಜಲಿ ಸಿಲುಕಿದ್ದ ಕಾರೊಳಗಿದ್ದ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯ ಕಾರು ಎಳೆದೊಯ್ದ ಪ್ರಕರಣ: ಅಪಘಾತದ ತೀವ್ರತೆಗೆ ಮೆದುಳು, ಶ್ವಾಸಕೋಶ ಹೊರಕ್ಕೆ
Delhi Accident: ಫುಟ್‌ಪಾತ್‌ನಲ್ಲಿ ಆಟವಾಡುತ್ತಿದ್ದ 3 ಮಕ್ಕಳಿಗೆ ಡಿಕ್ಕಿ ಹೊಡೆದ ಕಾರು: ಚಾಲಕ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ