
ವಾಷಿಂಗ್ಟನ್: ತಾನು ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದು ತನಗಿಂತ ಹಿರಿಯ ಮಹಿಳೆಯ ಜತೆ ಎಂದು ಬ್ರಿಟನ್ ರಾಜಕುವರ ಪ್ರಿನ್ಸ್ ಹ್ಯಾರಿ ಹೇಳಿದ್ದಾರೆ. ಹ್ಯಾರಿ ಆತ್ಮಕತೆ ಜ.10ರಂದು ಬಿಡುಗಡೆ ಆಗಲಿದ್ದು ಅದರಲ್ಲಿ ಈ ರೋಚಕ ಪ್ರಸಂಗವಿದೆ ಎಂದು ತಿಳಿದು ಬಂದಿದೆ. ಮೊದಲ ಬಾರಿಗೆ ಹಿರಿಯ ಮಹಿಳೆಯೊಬ್ಬರ ಜೊತೆ ನಾನು ಪಬ್ ಹಿಂಭಾಗದಲ್ಲಿ ಲೈಂಗಿಕ ಕ್ರಿಯೆ ನಡೆಸಿದೆ. 2001ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಈ ಘಟನೆ ನಡೆದಿತ್ತು. ಆ ಸಮಯದಲ್ಲಿ ನನಗೆ 17 ವರ್ಷ ವಯಸ್ಸಾಗಿತ್ತು. ಇದೊಂದು ನಾಚಿಕೆಯ ಅಧ್ಯಾಯ.. ಅವಳು ಕುದುರೆಗಳನ್ನು ಇಷ್ಟಪಡುತ್ತಿದ್ದಳು. ನನ್ನನ್ನು ಸಹ ಯುವ ಕುದುರೆ ಎಂದು ಭಾವಿಸಿದಳು. ಇದೊಂದು ತಪ್ಪು ಎನಿಸಬಹುದು. ಆದರೆ ಇದು ಪಬ್ ಹಿಂಭಾಗದಲ್ಲಿದ್ದ ಹುಲ್ಲುಗಾವಲಿನಲ್ಲಿ ನಡೆದೇ ಹೋಯಿತು ಎಂದು ಹ್ಯಾರಿ ಬರೆದಿದ್ದಾರೆ. ಆ ಮಹಿಳೆ ಯಾರು ಎಂಬುದು ಆ ವೇಳೆ ತಿಳಿಯದಿದ್ದರೂ ಸಹ ಆಕೆ ಎಲಿಜಬೆತ್ ಹರ್ಲೆ (Elizabeth Hurley) ಇರಬಹುದು ಎಂಬ ವದಂತಿ ಇದೆ. ಆದರೆ ಇದನ್ನು ಹರ್ಲೆ ಅಲ್ಲಗಳೆದಿದ್ದಾರೆ.
ಆತ್ಮಕಥೆಯಲ್ಲಿ ಸಿದ್ದರಾಮನವರ ಬಗ್ಗೆ ಬರೆದುಕೊಂಡ ಮೊಟಮ್ಮ, ಮಾಧ್ಯಮಗಳಿಗೆ ಹೇಳಿದ್ದಿಷ್ಟು
Wrist Assured: ದಿಗ್ಗಜ ಕ್ರಿಕೆಟಿಗ ಜಿಆರ್ ವಿಶ್ವನಾಥ್ ಆತ್ಮಕಥನ ಬಿಡುಗಡೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ