18 ತಿಂಗ್ಳಿಂದ ಬಾರದ ವೇತನ: ಬಾಹ್ಯಾಕಾಶ ಯೋಜನೆಗೆ ಲಾಂಚ್‌ಪ್ಯಾಡ್ ನೀಡಿದ ಸಂಸ್ಥೆ ತಂತ್ರಜ್ಞನಿಂದ ಇಡ್ಲಿ ಮಾರಾಟ!

By BK AshwinFirst Published Sep 19, 2023, 9:07 PM IST
Highlights

ಇಸ್ರೋ ಸೇರಿ ಅನೇಕ ಬಾಹ್ಯಾಕಾಶ ಸಂಸ್ಥೆಗಳ ಯೋಜನೆಗಳಿಗೆ ಲಾಂಚ್‌ಪ್ಯಾಡ್ ನಿರ್ಮಿಸಲು ಸಹಕರಿಸಿದ HECಯಲ್ಲಿನ ತಂತ್ರಜ್ಞ ದೀಪಕ್ ಕುಮಾರ್ ಉಪ್ರಾರಿಯಾ ಅವರು ಜಾರ್ಖಂಡ್‌ ರಾಜಧಾನಿ ರಾಂಚಿಯ ರಸ್ತೆಬದಿ ಅಂಗಡಿಯಲ್ಲಿ ಇಡ್ಲಿ ಮಾರುತ್ತಿದ್ದಾರೆ.

ನವದೆಹಲಿ (ಸೆಪ್ಟೆಂಬರ್ 19, 2023): ಚಂದ್ರಯಾನ-3 ಸೇರಿ ಅನೇಕ ಬಾಹ್ಯಾಕಾಶ ಯೋಜನೆಗಳಿಗೆ ಲಾಂಚ್ ಪ್ಯಾಡ್ ನಿರ್ಮಿಸಲು ಸಹಕರಿಸುವ HEC ಸಂಸ್ಥೆಯ ತಂತ್ರಜ್ಞರೊಬ್ಬರಿಗೆ ಸಂಬಳವಿಲ್ಲದೆ, ಇಡ್ಲಿ ಮಾರಾಟ ಮಾಡ್ತಿದ್ದಾರೆ ಎಂದು ಅನೇಕ ರಾಷ್ಟ್ರೀಯ ಮಾಧ್ಯವಗಳು ವರದಿ ಮಾಡಿವೆ. 

ಇತ್ತೀಚೆಗೆ ಇಸ್ರೋ ಉಡಾಯಿಸಿದ ಚಂದ್ರಯಾನ-3 ಸೇರಿ ಹಲವು ಬಾಹ್ಯಾಕಾಶ ಯೋಜನೆಗಳಿಗೆ ಲಾಂಚ್‌ಪ್ಯಾಡ್ ನಿರ್ಮಿಸಲು ಸಹಕರಿಸಿದ್ದ HEC (ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ತಂತ್ರಜ್ಞ ದೀಪಕ್ ಕುಮಾರ್ ಉಪ್ರಾರಿಯಾ ಅವರು ಜಾರ್ಖಂಡ್‌ ರಾಜಧಾನಿ ರಾಂಚಿಯ ರಸ್ತೆ ಬದಿ ಅಂಗಡಿಯಲ್ಲಿ ಇಡ್ಲಿ ಮಾರುತ್ತಿದ್ದಾರೆ. ದೀಪಕ್ ಕುಮಾರ್ ರಾಂಚಿಯ ಧುರ್ವಾ ಪ್ರದೇಶದಲ್ಲಿ ಹಳೆಯ ಶಾಸನ ಸಭೆಯ ಎದುರು ಅಂಗಡಿಯನ್ನು ಹೊಂದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. 

ಇದನ್ನು ಓದಿ: ಚಂದ್ರಯಾನ ಬಳಿಕ ಈಗ ಸಮುದ್ರಯಾನ ಯೋಜನೆ: ಅಮೂಲ್ಯ ಲೋಹ, ಖನಿಜಗಳಿಗಾಗಿ 6 ಕಿ.ಮೀ ಆಳದಲ್ಲಿ ಭಾರತೀಯರ ಹುಡುಕಾಟ

ಚಂದ್ರಯಾನ-3 ಗಾಗಿಯೂ ಫೋಲ್ಡಿಂಗ್ ಪ್ಲಾಟ್‌ಫಾರ್ಮ್ ಮತ್ತು ಸ್ಲೈಡಿಂಗ್ ಡೋರ್ ನಿರ್ಮಾಣಕ್ಕೆ ಭಾರತ ಸರ್ಕಾರದ ಕಂಪನಿ (CPSU) HEC ತಯಾರಿಸಿದೆ ಎನ್ನಲಾಗಿತ್ತು. ಆದರೆ, 18 ತಿಂಗಳವರೆಗೆ ಈ ಸಂಸ್ಥೆಯ ಉದ್ಯೋಗಿಗಳಿಗೆ ವೇತನವನ್ನೇ ಪಾವತಿಸದ ನಂತರ ಅವರು ತಮ್ಮ ರಸ್ತೆ ಬದಿಯ ಅಂಗಡಿಯನ್ನು ತೆರೆದರು ಎಂದು ವರದಿಯಾಗಿದೆ. ಚಂದ್ರಯಾನ-3 ಆಗಸ್ಟ್‌ನಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಮಾಡಿತು ಮತ್ತು ಇದರೊಂದಿಗೆ ಭಾರತವು ಈ ಸಾಧನೆ ಮಾಡಿದ ಮೊದಲ ದೇಶವೆಂಬ ಖ್ವಾತಿಗೆ ಪಾತ್ರವಾಯಿತು. ಆ ಕಾರಣದಿಂದಉಪ್ರಾರಿಯಾ ಅವರನ್ನು ಚಂದ್ತಯಾನ್ ಜೊತೆಯೇ ಲಿಂಕ್ ಮಾಡಲಾಗುತ್ತಿದೆ ಹೊರತು, ಇವರಿಗೂ ಇಸ್ರೋ ಸಂಸ್ಥೆಗೂ ಯವುದೇ ನೇರ ಸಂಬಂಧವಿಲ್ಲ. 

ಕಳೆದ 18 ತಿಂಗಳುಗಳಿಂದ ತಮ್ಮ ಸಂಬಳವನ್ನು ಪಡೆದಿಲ್ಲ ಎಂದು HEC ಯ ಸುಮಾರು 2,800 ಉದ್ಯೋಗಿಗಳು ಹೇಳಿಕೊಂಡಿದ್ದಾರೆ. ಅವರಲ್ಲಿ ಉಪ್ರಾರಿಯಾ ಕೂಡ ಇದ್ದಾರೆ ಎಂದು ಬಿಬಿಸಿ  ಸೇರಿ ಹಲವು ಮಾಧ್ಯಮಗಳು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ಕಳೆದ ಕೆಲವು ದಿನಗಳಿಂದ ಇಡ್ಲಿ ಮಾರುತ್ತಿದ್ದಾರೆ. ಇವರು ಬೆಳಗ್ಗೆ ಇಡ್ಲಿ ಮಾರುತ್ತಾರೆ ಮತ್ತು ಮಧ್ಯಾಹ್ನ ಕಚೇರಿಗೆ ಹೋಗುತ್ತಾರೆ. ಸಂಜೆ, ಮತ್ತೆ ಇಡ್ಲಿಗಳನ್ನು ಮಾರುತ್ತಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಚಂದ್ರನ ಮೇಲೆ 2 ಎಕರೆ ಭೂಮಿ ಖರೀದಿಸಿ ಇಬ್ಬರು ಹೆಣ್ಣುಮಕ್ಕಳ ಹೆಸರಿಗೆ ನೋಂದಾಯಿಸಿದ ಎನ್‌ಆರ್‌ಐ

ಸಂಬಳ ಬಾರದ ಹಿನ್ನೆಲೆ ಕ್ರೆಡಿಟ್ ಕಾರ್ಡ್‌ನಿಂದ ಮನೆ ನಿರ್ವಹಿಸಿದೆ. ಇದುವರೆಗೆ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಯಾರಿಗೂ ಹಣ ಹಿಂದಿರುಗಿಸದ ಕಾರಣ ಈಗ ಜನರು ಸಾಲ ನೀಡುವುದನ್ನು ನಿಲ್ಲಿಸಿದ್ದಾರೆ. ನಂತರ ನಾನು ನನ್ನ ಹೆಂಡತಿಯ ಆಭರಣಗಳನ್ನು ಅಡಮಾನವಿಟ್ಟು ಕೆಲವು ದಿನ ಮನೆ ನಡೆಸಿದ್ದೇನೆ, ಎಂದಿದ್ದಾರೆ. 

ನನ್ನ ಹೆಂಡತಿ ಒಳ್ಳೆಯ ಇಡ್ಲಿ ಮಾಡುತ್ತಾಳೆ. ಅದನ್ನು ಮಾರಾಟ ಮಾಡುವುದರಿಂದ ನನಗೆ ಪ್ರತಿದಿನ 300 ರಿಂದ 400 ರೂಪಾಯಿ ಸಿಗುತ್ತವೆ. ನಾನು 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆ ನಡೆಸುತ್ತಿದ್ದೇನೆ" ಎಂದೂ ಅವರು ಹೇಳಿದ್ದಾರೆ. 

ಇದನ್ನೂ ಓದಿ: ಇಸ್ರೋ ಸೂರ್ಯಶಿಕಾರಿಯ ಕಂಪ್ಲೀಟ್‌ ಡೀಟೇಲ್ಸ್‌ ಹೀಗಿದೆ: ಅಧ್ಯಯನದ ಬಗ್ಗೆ ಇಲ್ಲಿದೆ ವಿವರ..

ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಮೂಲದ ಉಪ್ರಾರಿಯಾ 2012ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಬಿಟ್ಟು 8,000 ರೂ. ಸಂಬಳಕ್ಕೆ ಎಚ್‌ಇಸಿ ಸೇರಿದ್ದರು. ಸರ್ಕಾರಿ ಕಂಪನಿಯಾದ ಅವರು ತಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಆಶಿಸಿದ್ದರು. ಆದರೆ, ಅದು ಹಾಗಾಗಲಿಲ್ಲ. ಈ ಮಧ್ಯೆ, ದೀಪಕ್ ಕುಮಾರ್ ಉಪ್ರಾರಿಯಾರಂತೆಯೇ, HEC ಯೊಂದಿಗೆ ಸಂಬಂಧ ಹೊಂದಿರುವ ಇನ್ನೂ ಕೆಲವು ಜನರು ಇದೇ ರೀತಿಯ ಕೆಲಸ ಮಾಡುವ ಮೂಲಕ ತಮ್ಮ ಜೀವನೋಪಾಯ ಗಳಿಸುತ್ತಿದ್ದಾರೆ ಎಂದೂ ಬಿಬಿಸಿ ವರದಿ ಮಾಡಿದೆ. 

ಇದನ್ನೂ ಓದಿ: ನಾಸಾ ಪಾರ್ಕರ್‌ ಸೋಲಾರ್‌ ಪ್ರೋಬ್‌ಗೂ ಇಸ್ರೋ ಆದಿತ್ಯ ಎಲ್‌ - 1 ಮಿಷನ್‌ಗೂ ವ್ಯತ್ಯಾಸವೇನು? ಇಲ್ಲಿದೆ ವಿವರ..

click me!