ಏಷ್ಯಾನೆಟ್‌ ನ್ಯೂಸ್‌ ರಿಪೋರ್ಟರ್‌ ಅಖಿಲಾ ನಂದಕುಮಾರ್ ಮೇಲಿನ ಆರೋಪ ಕೈಬಿಟ್ಟ ಕೇರಳ ಪೊಲೀಸ್‌!

Published : Sep 19, 2023, 07:57 PM IST
ಏಷ್ಯಾನೆಟ್‌ ನ್ಯೂಸ್‌ ರಿಪೋರ್ಟರ್‌ ಅಖಿಲಾ ನಂದಕುಮಾರ್ ಮೇಲಿನ ಆರೋಪ ಕೈಬಿಟ್ಟ ಕೇರಳ ಪೊಲೀಸ್‌!

ಸಾರಾಂಶ

ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ ಅವರ ಕೊಚ್ಚಿಯ ಮಹಾರಾಜ ಕಾಲೇಜಿನ ಅಂಕಪಟ್ಟಿ ವಿವಾದದ ಕುರಿತು ವರದಿ ಮಾಡಿದ್ದಕ್ಕಾಗಿ ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.

ಕೊಚ್ಚಿ (ಸೆ.19): ಮಹಾರಾಜ ಕಾಲೇಜು ಅಂಕಪಟ್ಟಿ ವಿವಾದದ ಸುದ್ದಿ ವರದಿಗೆ ಸಂಬಂಧಿಸಿದಂತೆ ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧದ ಆರೋಪವನ್ನು ಕೇರಳ ಪೊಲೀಸರು ಮಂಗಳವಾರ (ಸೆ.19) ಕೈಬಿಟ್ಟಿದ್ದಾರೆ. ಅಖಿಲಾ ನಂದಕುಮಾರ್ ಪಿತೂರಿ ನಡೆಸಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕೇರಳ ಪೊಲೀಸರ ಅಪರಾಧ ವಿಭಾಗ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದೆ. ಇದರಿಂದಾಗಿ  ವರದಿಗಾರ್ತಿಯ ವಿರುದ್ಧದ ಆರೋಪವನ್ನು ಜಿಲ್ಲಾ ಅಪರಾಧ ವಿಭಾಗ ಕೈಬಿಟ್ಟಿದೆ. ಎಡಪಂಥೀಯರ ಬೆಂಬಲಿಕ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ ನೀಡಿದ ದೂರಿನ ಆಧಾರದ ಮೇಲೆ ಪೊಲೀಸ್ ಕ್ರಮ ಕೈಗೊಂಡಿತ್ತು. ಆಘಾತಕಾರಿ ಸಂಗತಿಯೆಂದರೆ, ದೂರು ಕೊಟ್ಟ ಬೆನ್ನಲ್ಲಿಯೇ ಅದರ ಪೂರ್ವಾಪರ ಗಮನಿಸಿದೆ ಪ್ರಾಥಮಿಕ ತನಿಖೆಯನ್ನೂ ನಡೆಸದೆ ಅಖಿಲಾ ನಂದಕುಮಾರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ ಅವರ ದೂರಿನ ಮೇರೆಗೆ ಎರ್ನಾಕುಲಂನ ಮಹಾರಾಜ ಕಾಲೇಜಿನ ಮಾಜಿ ಸಂಯೋಜಕ ವಿನೋದ್ ಕುಮಾರ್, ಕಾಲೇಜು ಪ್ರಾಂಶುಪಾಲ ವಿಎಸ್ ಜಾಯ್, ಕೆಎಸ್‌ಯು ರಾಜ್ಯಾಧ್ಯಕ್ಷ ಅಲೋಶಿಯಸ್ ಕ್ಸೇವಿಯರ್, ಫಾಜಿಲ್ ಸಿಎ ಮತ್ತು ಅಖಿಲಾ ನಂದಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.

ಈ ಘಟನೆಯನ್ನು ತನ್ನ ವಿರುದ್ಧದ ಪಿತೂರಿ ಎಂದು ಅರ್ಶೋ ವ್ಯಾಖ್ಯಾನಿಸಿ ಪೊಲೀಸರನ್ನು ಸಂಪರ್ಕಿಸಿದ್ದರು. ಈ ದೂರಿನ ಮೇರೆಗೆ ಕೊಚ್ಚಿ ಸೆಂಟ್ರಲ್ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಏಷ್ಯಾನೆಟ್‌ ನ್ಯೂಸ್‌ ಪತ್ರಕರ್ತರ ಮೇಲಿನ ಕೇಸ್‌ ವಾಪಾಸ್‌ ತೆಗೆದುಕೊಳ್ಳಿ, ಕೇರಳ ಸರ್ಕಾರಕ್ಕೆ ಬುದ್ಧಿಜೀವಿಗಳ ಪತ್ರ

ಭಾರತೀಯ ದಂಡ ಸಂಹಿತೆಯ (IPC) 120-B, 465,469 ಮತ್ತು 500 ಮತ್ತು ಕೇರಳ ಪೊಲೀಸ್ (KP) ಕಾಯಿದೆ 2011 ರ 120 (o) ಕ್ರಿಮಿನಲ್ ಪಿತೂರಿ, ಫೋರ್ಜರಿ ಮತ್ತು ಮಾನನಷ್ಟ ಸೇರಿದಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಫೋರ್ಜರಿ ಪ್ರಕರಣದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಕ್ಯಾಂಪಸ್‌ಗೆ ತೆರಳಿದ್ದ ಪತ್ರಕರ್ತೆಯ ವಿರುದ್ಧ ಪೊಲೀಸರು ಪಿತೂರಿ ಆರೋಪ ಹೊರಿಸಿದ್ದಾರೆ.

ಅಕ್ರಮ ಬಯಲಿಗೆಳೆದ ವರದಿಗಾರ್ತಿ ಮೇಲೆ ಪ್ರಕರಣ: ಪತ್ರಕರ್ತರಿಂದ ಕೇರಳದಲ್ಲಿ ಪ್ರತಿಭಟನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!