ಬಾಕ್ಸ್‌ ನೋಡಿ ಶಾಕ್‌ ಆದ ವಿದ್ಯಾರ್ಥಿಗಳು: ಟೀಚರ್ ಬಾಕ್ಸ್‌ ಒಳಗೆ ಇಟ್ಟಿದ್ದೇನು?

Published : May 01, 2022, 10:02 AM ISTUpdated : May 01, 2022, 10:59 AM IST
ಬಾಕ್ಸ್‌ ನೋಡಿ ಶಾಕ್‌ ಆದ ವಿದ್ಯಾರ್ಥಿಗಳು: ಟೀಚರ್ ಬಾಕ್ಸ್‌ ಒಳಗೆ ಇಟ್ಟಿದ್ದೇನು?

ಸಾರಾಂಶ

ಟೀಚರ್ ಬಾಕ್ಸ್‌ ಒಳಗೆ ಇಟ್ಟಿದ್ದೇನು? ಬೆಸ್ಟ್ ಸ್ಟೂಡೆಂಟ್ ನೋಡಿ ವಿದ್ಯಾರ್ಥಿಗಳಿಗೆ ಅಚ್ಚರಿ ಟೀಚರ್‌ ವಿಡಿಯೋ ಸಖತ್ ವೈರಲ್‌  

ಮಕ್ಕಳ ಜೀವನದಲ್ಲಿ ಮಹತ್ತರ ಬದಲಾವಣೆ ತಂದ ಬದುಕಿನ ದಾರಿ ತೋರಿಸಿದ ಹಲವು ಶಿಕ್ಷಕರು ನೀವು ನೋಡಿರಬಹುದು. ಶಿಕ್ಷಕರು ಎಳೆಯ ಮಕ್ಕಳ ಬದುಕಿನಲ್ಲಿ ಮೂಡಿಸುವ ಚಾಪನ್ನು ಯಾರು ಕೂಡ ಮೂಡಿಸಲು ಸಾಧ್ಯವಿಲ್ಲ. ಉತ್ತಮ ಗುರು ಹಾಗೂ ಗುರಿ ಬದುಕಿನಲ್ಲಿ ಮಹತ್ತರವಾದುದನ್ನು ಸಾಧಿಸಲು ಪ್ರೇರಣೆ ನೀಡುವುದು. ಹಾಗೆಯೇ ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುವುದು ಕೂಡ ಗುರುವಾದವನ ಕರ್ತವ್ಯ. ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಸಲುವಾಗಿ ಒಂದು ಅಪೂರ್ವವಾದ ಕೆಲಸವನ್ನು ಮಾಡಿದ್ದು ಅದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗುರುವೊಬ್ಬರ ಅದ್ಬುತ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಕ್ಲಾಸಿಗೆ ಒಂದು ಬಾಕ್ಸ್ ಜೊತೆ ಬರುವ ಶಿಕ್ಷಕಿ. ಆ ಬಾಕ್ಸ್‌ನಲ್ಲಿ ನನ್ನ ಅತ್ಯುತ್ತಮ ವಿದ್ಯಾರ್ಥಿಯ ಫೋಟೋ ಇದೆ ಎನ್ನುತಾರೆ. ಶಿಕ್ಷಕರ ಪಾಲಿನ ಅತ್ಯುತ್ತಮ ವಿದ್ಯಾರ್ಥಿ ಯಾರು ಎಂದು ತಿಳಿಯುವ ಕುತೂಹಲ ಎಲ್ಲ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಇದನ್ನರಿತ ಶಿಕ್ಷಕಿ ಒಬ್ಬೊಬ್ಬರೇ ಹೋಗಿ ಅತ್ಯುತ್ತಮ ವಿದ್ಯಾರ್ಥಿ ಯಾರು ಎಂದು ನೋಡುವಂತೆ ಹೇಳುತ್ತಾರೆ. ಬಳಿಕ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬಂದು ಬಾಕ್ಸ್‌ನೊಳಗೆ ನೋಡುವ ಅವರಿಗೆ ಅಚ್ಚರಿ ಕಾದಿರುತ್ತದೆ. ಬಾಕ್ಸ್‌ ನೋಡಿದ ಎಲ್ಲರೂ ತುಂಬು ಮುಖದ ನಗುವಿನೊಂದಿಗೆ ಹಾಗೂ ಅಚ್ಚರಿಯೊಂದಿಗೆ ಹೊರಟು ಹೋಗುತ್ತಾರೆ.

1 ಕ್ವಾರ್ಟರ್‌ ಅಂದ್ರೆ ಎಷ್ಟು? ಟೀಚರ್‌ ಪ್ರಶ್ನೆಗೆ ವಿದ್ಯಾರ್ಥಿಯ ಶಾಕಿಂಗ್ ಉತ್ತರ!

ಹಾಗಾದರೆ ಬಾಕ್ಸ್‌ನೊಳಗೆ ಇರೋದೇನು?

ಬಾಕ್ಸ್‌ನೊಳಗೆ ಇದ್ದಿದ್ದು ಯಾರ ಫೋಟೋವೋ ಅಲ್ಲ. ಅಲ್ಲಿ ಇದ್ದದ್ದು ಒಂದು ಪುಟ್ಟ ಕನ್ನಡಿ. ಹೌದು ಕನ್ನಡಿ ನೋಡಿದ ಪ್ರತಿಯೊಬ್ಬ ವಿದ್ಯಾರ್ಥಿಗಳು (Student) ಅಲ್ಲಿ ತಮ್ಮ ಮುಖವನ್ನು ನೋಡಿ ಖುಷಿ ಪಟ್ಟಿದ್ದಾರೆ. ಅಂದರೆ ಶಿಕ್ಷಕರರಿಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಮೂಲ್ಯವೇ ಅಲ್ಲಿ ಯಾರೂ ಕೆಟ್ಟವರಿಲ್ಲ. ಹೂವಿನ ತೋಟದಲ್ಲಿರುವ ಪ್ರತಿಯೊಂದು ಹೂವು ಕೂಡ ಅಮೂಲ್ಯವೇ ಹಾಗೆಯೇ ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕಿಗೆ ಅಮೂಲ್ಯ ಎಂಬುದನ್ನು ಶಿಕ್ಷಕರು ಈ ಒಂದು ನಡೆಯ ಮೂಲಕ ತೋರಿಸಿ ಕೊಟ್ಟಿದ್ದಾರೆ. ಟರ್ಕಿಯ (Turkey) ಶಿಕ್ಷಕರೊಬ್ಬರು(Teacher) ಈ ನಡೆ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ಹೊಸ ಟಚ್, ಕೊಠಡಿಯಾಯ್ತು ಸೈನ್ಸ್ ರೂಂ, ಮಲ್ಟಿ ಟ್ಯಾಲೆಂಟೆಡ್ ವಿಜ್ಞಾನ ಶಿಕ್ಷಕನ ಕಮಾಲ್!
 

ಇದೊಂದು ಅತ್ಯಂತ ಸುಂದರವಾದ ಕಲ್ಪನೆ. ಈ ಮಕ್ಕಳಿಗೆ ಅವರು ಎಷ್ಟು ವಿಶೇಷ ಮತ್ತು ಪ್ರಮುಖರು ಎಂಬುದನ್ನು ಅರಿತುಕೊಳ್ಳಲು ಸಹಾಯ ಮಾಡುವ ಇಂತಹ ಶಿಕ್ಷಕರನ್ನು ದೇವರು ಆಶೀರ್ವದಿಸುತ್ತಾನೆ. ಇದು ನಾನು ಇಂದು ನೋಡುವ ಅತ್ಯಂತ ಆರೋಗ್ಯಕರ ವಿಷಯ ಎಂದು ನನಗೆ ಖಚಿತವಾಗಿದೆ. ಇದು ತುಂಬಾ ಅಮೂಲ್ಯವಾಗಿದೆ ಹೀಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. Hulusi Çakır (@troll_ogretmen) ಅವರು ವ್ಯಾಯಾಮದ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ ಅದು ಈಗ ವೈರಲ್ ಆಗಿದೆ.

 

ಶಿಕ್ಷಕರು ಮಕ್ಕಳ ಬದುಕಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕೆಲ ದಿನಗಳ ಹಿಂದೆ ಶಿಕ್ಷಕರೊಬ್ಬರು ಕುಣಿಯುತ್ತ ನಲಿಯುತ್ತಾ ಮಕ್ಕಳೊಂದಿಗೆ ಮಕ್ಕಳಾಗಿ ಪಾಠ ಮಾಡುವ ಶಿಕ್ಷಕಿಯೊಬ್ಬರ ವಿಡಿಯೋ ವೈರಲ್‌ ಆಗಿತ್ತು. ಅದನ್ನು ನೀವು ಗಮನಿಸಿರಬಹುದು. ಕಾರ್ಕಳದ ವಂದನಾ ಎಂಬ ಶಿಕ್ಷಕಿಯೊಬ್ಬರು, ಹಾಡುತ್ತಾ ನಲಿಯುತ್ತಾ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡುತ್ತಿದ್ದರು. ಅವರ ವಿಡಿಯೋವನ್ನು ಸಾವಿರಾರು ಜನ ಮೆಚ್ಚಿಕೊಂಡಿದ್ದರು. 

ಇವರ ವಿಡಿಯೋ ಪಾಠಗಳು ಫೇಸ್ಬುಕ್ಕಿನಲ್ಲಿ ಪೋಸ್ಟ್ ಆದ ಗಂಟೆಗಳಲ್ಲಿ ಸಾವಿರಾರು ಶೇರ್ ಗಳನ್ನು ಕಾಣುತ್ತವೆ, ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ನಮಗೂ ಪಾಠ ಮಾಡಿ ಮೇಡಂ ಎಂಬ ಬೇಡಿಕೆ ಎಲ್ಲೆಡೆಯಿಂದ ಇವರಿಗೆ ಬರುತ್ತದೆ. ಇವರೀಗ ಮಕ್ಕಳು ಹಾಗೂ ಹೆತ್ತವರ ಪಾಲಿನ ನೆಚ್ಚಿನ ಮೇಡಂ ಅಂತೂ ಹೌದು ಎಂಬುದರಲ್ಲಿ ಎರಡು ಮಾತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!