
ಮಧುರೈ (ಮೇ.01): ಮಿತಿಮೀರಿದ ನಗರೀಕರಣ ಹಾಗೂ ಕೈಗಾರೀಕರಣದಿಂದಾಗಿ ನಿಸರ್ಗ ಹಾಳಾಗುತ್ತಿರುವಾಗಲೇ, ಪರಿಸರ ಸಂರಕ್ಷಣೆಗಾಗಿ ಮದ್ರಾಸ್ ಹೈಕೋರ್ಟ್ (Madras High Court) ಪ್ರಕೃತಿ (Nature) ಮಾತೆಯನ್ನು ಜೀವಂತ ವ್ಯಕ್ತಿ (Mother Nature) ಎಂದು ಘೋಷಣೆ ಮಾಡಿದೆ. ಜೀವಂತ ಮಾನವನಿಗೆ ಇರುವ ಎಲ್ಲ ಹಕ್ಕು, ಕರ್ತವ್ಯ ಹಾಗೂ ಹೊಣೆಗಾರಿಕೆಗಳೂ ಪ್ರಕೃತಿಗೆ ಇವೆ ಎಂದು ಹೇಳಿದೆ. ರಾಷ್ಟ್ರವೇ ಪೋಷಕ ಎಂಬ ತತ್ವದಡಿ ಉತ್ತರಾಖಂಡ ಹೈಕೋರ್ಟ್ ಗಂಗೋತ್ರಿ, ಯಮನೋತ್ರಿ ಸೇರಿದಂತೆ ಆ ರಾಜ್ಯದ ಎಲ್ಲ ನೀರ್ಗಲ್ಲುಗಳನ್ನು ಕಾನೂನುಬದ್ಧ ಸಂಸ್ಥೆಗಳು ಎಂದು ಪ್ರಕಟಿಸಿತ್ತು. ಅವುಗಳ ಸಂರಕ್ಷಣೆ ಉದ್ದೇಶದಿಂದ ಈ ಕ್ರಮ ಕೈಗೊಂಡಿತ್ತು.
ಪ್ರಕರಣವೊಂದರ ವಿಚಾರಣೆ ವೇಳೆ ಮದುರೈ ಪೀಠದ ನ್ಯಾ ಎಸ್.ಶ್ರೀಮತಿ ಅವರು ಉತ್ತರಾಖಂಡ ಹೈಕೋರ್ಟ್ ಹೊರಡಿಸಿದ್ದ ತೀರ್ಪನ್ನು ಉಲ್ಲೇಖಿಸಿದರು. ಹಿಂದಿನ ತಲೆಮಾರುಗಳು ನಮಗೆ ಪ್ರಕೃತಿ ಮಾತೆಯನ್ನು ಶುದ್ಧ ರೂಪದಲ್ಲಿ ನೀಡಿವೆ. ಅದನ್ನು ನಮ್ಮ ಮುಂದಿನ ಪೀಳಿಗೆಗೂ ಹಸ್ತಾಂತರಿಸುವುದು ನೈತಿಕತೆ ಎಂದು ಹೇಳಿದರು. ಪ್ರಕೃತಿ ಮಾತೆಗೆ ಜೀವಂತ ವ್ಯಕ್ತಿ ಸ್ಥಾನ ನೀಡಲು ಇದು ಸಕಾಲ. ಪ್ರಕೃತಿ ಮಾತೆಗೆ ಜೀವಂತ ವ್ಯಕ್ತಿಯ ಸ್ಥಾನಮಾನ ನೀಡಲಾಗುತ್ತದೆ. ಉಳಿವು, ಸುರಕ್ಷತೆಗಾಗಿ ಬೇಕಾದ ಮೂಲಭೂತ/ಕಾನೂನು/ಸಾಂವಿಧಾನಿಕ ಹಕ್ಕುಗಳನ್ನೂ ನೀಡಲಾಗುತ್ತದೆ. ಪ್ರಕೃತಿ ಮಾತೆಯನ್ನು ಸಂರಕ್ಷಿಸಲು, ಸಾಧ್ಯವಿರುವ ಎಲ್ಲ ದಾರಿ ಬಳಸಿ ರಕ್ಷಣೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸೂಚನೆ ನೀಡಲಾಗುತ್ತದೆ ಎಂದರು.
ಶಶಿಕಲಾ ರಾಜಕೀಯ ಮರುಪ್ರವೇಶಕ್ಕೆ ಹಿನ್ನಡೆ, ಪಕ್ಷದಿಂದ ಉಚ್ಚಾಟನೆ ನಿರ್ಧಾರ ಎತ್ತಿಹಿಡಿದ ಹೈಕೋರ್ಟ್!
ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5 ವೈದ್ಯಕೀಯ ಕೋಟಾ: ತಮಿಳುನಾಡು (Tamil Nadu) ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವೈದ್ಯಕೀಯ ಕೋಟಾ ಮೀಸಲಿರಿಸುವ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ (Madras High Court ) ಎತ್ತಿ ಹಿಡಿದಿದೆ. ತಮಿಳುನಾಡಿನಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡಾ 7.5 ಕೋಟಾವನ್ನು ಮೀಸಲಿರಿಸುವ (reservation ) ಸರ್ಕಾರದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.
ಸರ್ಕಾರ ಘೋಷಣೆ ಮಾಡಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಖಾಸಗಿ ಶಾಲಾ ವಿದ್ಯಾರ್ಥಿಗಳು ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳು ತಮಗೂ ಇದೇ ರೀತಿಯ ಸೌಲಭ್ಯಗಳನ್ನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ (Chief Justice Munishwar Nath Bhandari ) ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ( Justice D Bharatha Chakravarthy) ನೇತೃತ್ವದ ಮೊದಲ ಪೀಠ ಈ ತೀರ್ಪು ಪ್ರಕಟಿಸಿತು. ವೈದ್ಯಕೀಯ ಕೋರ್ಸ್ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ದೇವಸ್ಥಾನದಲ್ಲಿ ದೇವರು ಮಾತ್ರ ವಿಐಪಿ ಎಂದ ಮದ್ರಾಸ್ ಹೈಕೋರ್ಟ್!
ಅಲ್ಲದೆ ಐದು ವರ್ಷಗಳಲ್ಲಿ ಮೀಸಲಾತಿ ಕೋಟಾವನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ ಮೀಸಲಾತಿಯನ್ನು ಪ್ರಶ್ನಿಸಿ ಮತ್ತು ಅದೇ ರೀತಿಯ ಪ್ರಯೋಜನಗಳನ್ನು ಕೋರಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಆದೇಶವು ದೂರಗಾಮಿ ಪರಿಣಾಮಗಳನ್ನು ಹೊಂದಿದ್ದು, ದ್ರಾವಿಡ ಚಳವಳಿಯನ್ನು ಎತ್ತಿ ಹಿಡಿದ ಮುಖ್ಯ ವೇದಿಕೆಯಾದ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಡಿಎಂಕೆ ಸರ್ಕಾರದ ಬದ್ಧತೆಗೆ ದೊಡ್ಡ ಉತ್ತೇಜನ ಎಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಈ ಮೀಸಲಾತಿಯನ್ನು ಹಿಂದಿನ ಎಐಎಡಿಎಂಕೆ ಸರ್ಕಾರವು ಪರಿಚಯಿಸಿತ್ತು. ಆದರೆ ಕಾನೂನಾಗಿ ಪರಿವರ್ತಿಸುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ನಿಭಾಯಿಸುವಲ್ಲಿ ಎಡವಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ