ಅಯೋಧ್ಯೆಯಲ್ಲಿ 750 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಮುಂದಾದ ಟಾಟಾಸನ್ಸ್

By Anusha KbFirst Published Jun 26, 2024, 12:16 PM IST
Highlights

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 750 ಕೋಟಿ ವೆಚ್ಚದಲ್ಲಿ ಬೃಹತ್ ಮ್ಯೂಸಿಯಂನ್ನು ಸ್ಥಾಪಿಸಲು ಟಾಟಾ ಸನ್ಸ್‌ ಸಂಸ್ಥೆ ಮುಂದಾಗಿದೆ.  

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 750 ಕೋಟಿ ವೆಚ್ಚದಲ್ಲಿ ಬೃಹತ್ ಮ್ಯೂಸಿಯಂನ್ನು ಸ್ಥಾಪಿಸಲು ಟಾಟಾ ಸನ್ಸ್‌ ಸಂಸ್ಥೆ ಮುಂದಾಗಿದೆ.  ಟಾಟಾ ಸನ್ಸ್‌ನ ಈ ಮನವಿಗೆ ಉತ್ತರ ಪ್ರದೇಶ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಟಾಟಾ ಗ್ರೂಪ್‌ ಟಾಟಾಸನ್ಸ್‌ನ ಮಾತೃ ಸಂಸ್ಥೆಯಾಗಿದೆ. ವರದಿಗಳ ಪ್ರಕಾರ ಟಾಟಾ ಸನ್ಸ್, ಈ ಯೋಜನೆಗಾಗಿ ದೊಡ್ಡ ಮೊತ್ತದ ಹಣವನ್ನು ತೆಗೆದಿಟ್ಟಿದ್ದು,  ಸುಮಾರು 750 ಕೋಟಿ ರೂಪಾಯಿಯನ್ನು ಈ ಮಹತ್ವಾಕಾಂಕ್ಷಿ ಯೋಜನೆಗಳಿಗೆ ವೆಚ್ಚ ಮಾಡಲಿದೆ. ಅದರಲ್ಲಿ 650 ಕೋಟಿಯನ್ನು ಮೂಲಭೂತ ಸೌಕರ್ಯ, ಡಿಸೈನ್ ಹಾಗೂ ಇಂಟಿರಿಯರ್ ಕೆಲಸಗಳಿಗಾಗಿ ವಿನಿಯೋಗಿಸಲಿದೆ. ಹಾಗೆಯೇ ಉಳಿದ 100 ಕೋಟಿಯನ್ನು ಕಟ್ಟಡ ನಿರ್ಮಾಣವಾದ ಸ್ಥಳದ ಅಭಿವೃದ್ಧಿಗೆ ವಿನಿಯೋಗಿಸಲಿದೆ ಎಂಬ ಮಾಹಿತಿ ಇದೆ. 

ಟಾಟಾ ಸನ್ಸ್‌ನ ಈ ದೇಗುಲ ವಸ್ತುಸಂಗ್ರಹಾಲಯದ ನಿರ್ಮಾಣಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ ಸರ್ಕಾರವೂ ಟಾಟಾಸನ್ಸ್‌ಗೆ ಮ್ಯೂಸಿಯಂ ನಿರ್ಮಿಸುವ ಭೂಮಿಯನ್ನು 90 ವರ್ಷಗಳಿಗೆ ಕೇವಲ 1 ರೂಪಾಯಿಗೆ ಲೀಸ್‌ಗೆ ನೀಡಲಿದೆ. ಇನ್ನು ಈ ಮ್ಯೂಸಿಯಂ ನಿರ್ಮಾಣಕ್ಕೆ ನೀಡಲಾಗುತ್ತಿರುವ ಭೂಮಿಯೂ ಪ್ರವಾಸೋದ್ಯಮ ಇಲಾಖೆಗೆ ಸೇರಿದ್ದು,  ಸರಾಯು ನದಿಗೆ ಸಮೀಪದಲ್ಲಿರುವ ಮಜ್ಹಾ ಜಮ್ಥಾರ್ ಗ್ರಾಮದಲ್ಲಿದೆ. ಇದನ್ನು ಮ್ಯೂಸಿಯಂ ನಿರ್ಮಾಣಕ್ಕಾಇ ಈಗ ಖಾಸಗಿ ಸಂಸ್ಥೆಗೆ ನೀಡಲಾಗುತ್ತದೆ. 

Latest Videos

ಥೈಲ್ಯಾಂಡ್‌ನಲ್ಲಿದೆ ಮಿನಿ ಅಯೋಧ್ಯೆ, ರಾಮ ಹೋಗಿರದ ಜಾಗದಲ್ಲಿ ಮಂದಿರ ನಿರ್ಮಾಣವಾಗಿದ್ದು ಹೀಗೆ?

ಅಧಿಕಾರಿಗಳು ಹೇಳುವ ಪ್ರಕಾರ ಇದು 25 ಎಕರೆಯಷ್ಟು ವಿಸ್ತಾರವಾದ ಭೂಮಿ ಇದಾಗಿದ್ದು,  ಇದನ್ನು ಟಾಟಾ ಸನ್ಸ್‌ಗೆ ಹಸ್ತಾಂತರಿಸಲಾಗುವುದು ಇದಕ್ಕೆ ಸಂಬಂಧಿಸಿದಂತೆ ಒಪ್ಪಂದಗಳು ಹಾಗೂ ಷರತ್ತುಗಳಿಗೆ ಒಪ್ಪಂದ ಪ್ರತಿಗೆ ಎರಡು ಪಾರ್ಟಿಗಳು (ಸರ್ಕಾರ ಹಾಗೂ ಟಾಟಾ ಸನ್ಸ್) ಸಹಿ ಹಾಕಲಿದ್ದಾರೆ. ಟಾಟಾ ಸನ್ಸ್ ಮ್ಯೂಸಿಯಂ ನಿರ್ಮಾಣಕ್ಕೆ ಆಸಕ್ತಿ ತೋರಿಸಿದ್ದಾರೆ. ಇವರ ಪ್ರಪೋಸಲ್‌ನನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಕೇಂದ್ರ ಸರ್ಕಾರವೂ ಅದನ್ನು  ಅಂತಿಮ ನಿರ್ಧಾರಕ್ಕಾಗಿ ರಾಜ್ಯ ಸರ್ಕಾರದ ಅನುಮತಿಗೆ ಕಳುಹಿಸಿತ್ತು ಎಂದು ಹೇಳಿದ್ದಾರೆ. 

ಶ್ರೀರಾಮನ ಹೆಸರಲ್ಲಿ ಲೋಕಸಭೆ ಚುನಾವಣೆ ಎದುರಿಸಿದ ಬಿಜೆಪಿಗೆ ರಾಮನಿಂದಲೇ ಸಿಗಲಿಲ್ಲ ಶ್ರೀರಕ್ಷೆ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಬ್ಬರೂ ಈ ಪ್ರಾಜೆಕ್ಟ್ ಬಗ್ಗೆ ವೈಯಕ್ತಿಕವಾಗಿ ಆಸಕ್ತಿ ತೋರಿಸಿದ್ದಾರೆ. ಹಾಗೂ ಈ ಯೋಜನೆಗೆ ಸಂಬಂಧಿಸಿದಂತೆ ಈ ಹಲವು ಸ್ಟಾಕ್‌ ಹೋಲ್ಡರ್‌ಗಳು ಹಾಗೂ ಸರ್ಕಾರಿ ಅಧಿಕಾರಿಗಳು ನೀಡಿದ ನೋಟ್‌ ಹಾಗೂ ಪ್ರಸಂಟೇಷನ್ ಅನ್ನು ವೀಕ್ಷಿಸಿದ್ದಾರೆ.  ಕಳೆದ ನವಂಬರ್‌ನಲ್ಲಿ ವಾಸ್ತುಶಿಲ್ಪಿ ಬ್ರಿಂದಾ ಸೋಮಯ್ಯ, ಅವರು ಮ್ಯೂಸಿಯಂ ಕಟ್ಟಲು ನೀಲಾನಕಾಶೆ ನಿರ್ಮಾಣಕ್ಕಾಗಿ ಯೋಜಿಸಲಾದ ಸೈಟ್‌ಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ. 

ಬ್ರಿಂದಾ ಸೋಮಯ್ಯ ಅವರು ಖ್ಯಾತ ವಾಸ್ತುಶಿಲ್ಪಿಯಾಗಿದ್ದು, ಬಾಂಬೆ ಹೌಸ್‌ನನ್ನು ನಿರ್ಮಿಸಿದ ಹೆಗ್ಗಳಿಕೆ ಇದೆ.  ಬಾಂಬೆ ಹೌಸ್ ಮುಂಬೈನಲ್ಲಿ ಟಾಟಾ ಗ್ರೂಪ್‌ನ ಹೆಡ್‌ಕ್ವಾರ್ಟರ್ ಆಗಿದೆ. ಇನ್ನು ಟಾಟಾ ಸನ್ಸ್ ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮ್ಯೂಸಿಯಂ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಿದೆ.  ಈ ಮ್ಯೂಸಿಯಂ ಕಾಂಪ್ಲೆಕ್ಸ್ ಕನಿಷ್ಟ 12 ವಿವಿಧ ರೀತಿಯ ಗ್ಯಾಲರಿಗಳನ್ನು ಹೊಂದಿದೆ. 

ಉತ್ತರ ಪ್ರದೇಶದ ನಗರಾಭಿವೃದ್ದಿ ಸಚಿವ ಎ.ಕೆ. ಶರ್ಮಾ, ಅವರು ಈ ಮ್ಯೂಸಿಯಂ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. 

click me!