ಏರ್ ಇಂಡಿಯಾ ಖರೀದಿಸಿದ ಟಾಟಾ, ಚೀನಾಗೆ ಎಚ್ಚರಿಕೆ ನೀಡಿದ IAF ಮುಖ್ಯಸ್ಥ; ಅ.8ರ ಟಾಪ್ 10 ಸುದ್ದಿ!

By Suvarna NewsFirst Published Oct 8, 2021, 5:38 PM IST
Highlights

ನಷ್ಟದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಖರೀದಿಸಿದೆ. ಗಡಿಯಲ್ಲಿ ಕಿರಿಕ್ ಮಾಡುತ್ತಿರುವ ಚೀನಾಗೆ ನೂತನ್ ವಾಯುಪಡೆ ಮುಖ್ಯಸ್ಥ ವಾರ್ನಿಂಗ್ ನೀಡಿದ್ದಾರೆ. ಮೋದಿ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೀದಿ ಪಾಲಾಗಲಿದೆ ಎಂದು ಪಾಕ್ ಕ್ರಿಕೆಟ್ ಮುಖ್ಯಸ್ಥ ರಮೀಜ್ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಏಕಕಾಲದಲ್ಲಿ 2 ಐಪಿಎಲ್ ಪಂದ್ಯ, ಕುತೂಹಲ ಹೆಚ್ಚಿಸಿದ ಕೋಟಿಗೊಬ್ಬ 3 ಟ್ರೇಲರ್ ಸೇರಿದಂತೆ ಅಕ್ಟೋಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ ವಿಮಾನ ಸಂಸ್ಥೆ; ಭಾವುಕರಾದ ರತನ್ ಟಾಟಾ!
 

ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದ ಏರ್ ಇಂಡಿಯಾ(Air India) ವಿಮಾನಯಾನ ಸಂಸ್ಥೆಯನ್ನು ಕೇಂದ್ರ ಸರ್ಕಾರ(Government) ಕಳೆದ ಕೆಲ ವರ್ಷಗಳಿಂದ ಮಾರಾಟ ಮಾಡಲು ಹರಸಹಾಸಪಟ್ಟಿತ್ತು. ಇದೀಗ ಕೊನೆಗೂ ಕೇಂದ್ರ ಸರ್ಕಾರ ತನ್ನು ಬಹುದೊಡ್ಡ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ. ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್(Tata Sons) ಖರೀದಿಸಿದ್ದ ಬಿಡ್‌(Bid) ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಮೂಲಕ ಸರ್ಕಾರದ ಏರ್ ಇಂಡಿಯಾ ಸಂಸ್ಥೆ ಇದೀಗ ಟಾಟಾ ಸನ್ಸ್ ಪಾಲಾಗಿದೆ(acquired Airline).

ಅರುಣಾಚಲ ಪ್ರದೇಶಕ್ಕೆ ನುಗ್ಗಿದ ಚೀನಾ ಸೈನಿಕರು ವಶಕ್ಕೆ, ಎಚ್ಚರಿಕೆ ನೀಡಿದ IAF ಮುಖ್ಯಸ್ಥ!

 ಚೀನಾ ಸೇನೆ ಕಳೆದೆರಡು ವರ್ಷದಿಂದ ನಿರಂತರವಾಗಿ ಭಾರತದ(India) ಗಡಿ ಪ್ರದೇಶದಲ್ಲಿ ಕಿರಿಕ್ ಮಾಡುತ್ತಿದೆ. ಲಡಾಖ‌ನಲ್ಲಿ(Ladakh) ಅತಿಕ್ರಮಣ ಹಾಗೂ ಗಲ್ವಾನ್ ಕಣಿವೆ(Galwan valley) ಸಂಘರ್ಷದ ಬಳಿಕ ಇದೀಗ ಅರುಣಾಚಲ ಪ್ರದೇಶದ ಗಡಿಯಲ್ಲಿ ತಂಟೆ ಮಾಡುತ್ತಿದೆ.

ಆ್ಯಂಬುಲೆನ್ಸ್‌ ಸೈರನ್‌ ಆಗಿ ಆಕಾಶವಾಣಿ ಟ್ಯೂನ್‌: ನಿತಿನ್‌ ಗಡ್ಕರಿ

ವಾಹನಗಳು ಹಾರ್ನ್‌ (vehicle Horn) ಮಾಡಿದಾಗ ಉಂಟಾಗುವ ಕರ್ಕಶ ಶಬ್ಧವನ್ನು ತಪ್ಪಿಸಲು ಹಾರ್ನ್‌ಗಳಿಗೆ ಶಾಸ್ತ್ರೀಯ ವಾದ್ಯಗಳ ಶಬ್ದ ಬಳಸಲಾಗುವುದು ಎಂದು ಹೇಳಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಆ್ಯಂಬುಲೆನ್ಸ್‌ ಸೈರನ್‌ ಆಕಾಶವಾಣಿಯ ಟ್ಯೂನ್‌ (Akashwani Tune ಬಳಕೆ ಬಗ್ಗೆ ಯೋಚಿ​ಸ​ಲಾ​ಗು​ತ್ತಿ​ದೆ ಎಂದು ಹೇಳಿದ್ದಾರೆ.

ಲಖೀಂಪುರ ಗಲ​ಭೆ : ಸುಪ್ರೀಂ ಚಾಟಿ - ಇಬ್ಬರು ಅರೆಸ್ಟ್

ಉತ್ತರ ಪ್ರದೇಶದ (Uttara Pradesh) ಲಖೀಂಪುರ ಖೇರಿಯಲ್ಲಿ ನಾಲ್ವರು ರೈತರು (Farmers) ಸೇರಿದಂತೆ 8 ಮಂದಿ ಬಲಿ ಪಡೆದ ಘಟನೆಯನ್ನು ದುರದೃಷ್ಟಕರ ಎಂದಿರುವ ಸುಪ್ರೀಂ ಕೋರ್ಟ್‌ (Supreme Court), ‘ಎಷ್ಟುಜನ​ರನ್ನು ಈವ​ರೆಗೆ ಬಂಧಿ​ಸಿ​ದ್ದೀರಿ? ಏನು ಕ್ರಮ ಕೈಗೊಂಡಿ​ದ್ದೀ​ರಿ?’ ಎಂದು ಪ್ರಶ್ನಿ​ಸಿದೆ. ಈ ಘಟನೆ ಕುರಿತು ಶುಕ್ರವಾರದ ಒಳಗಾಗಿ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.

ಭಾರತದ ಪ್ರಧಾನಿ ಮನಸ್ಸು ಮಾಡಿದರೇ, ಪಾಕ್‌ ಕ್ರಿಕೆಟ್‌ ಮಂಡಳಿ ಬೀದಿಪಾಲು..!

ಸತ್ಯವನ್ನು ಹೆಚ್ಚುದಿನ ಮುಚ್ಚಿಡಲು ಸಾಧ್ಯವಿಲ್ಲ, ಅದು ಒಂದಲ್ಲಾ ಒಂದು ದಿನ ಹೊರಗೆ ಬರಲೇ ಬೇಕು ಎನ್ನುವುದು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಮುಖ್ಯಸ್ಥ ರಮೀಜ್ ರಾಜಾ ಮಾತಿನಿಂದ ಮತ್ತೊಮ್ಮೆ ಸಾಬೀತಾಗಿದೆ. ಭಾರತದ ಪ್ರಧಾನಿ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಚ್ಚಿಹೋಗಬಹುದು ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

IPL 2021‌: ಮೊದಲ ಬಾರಿ ಏಕಕಾಲಕ್ಕೆ 2 ಐಪಿಎಲ್‌ ಪಂದ್ಯ..!

14ನೇ ಆವೃತ್ತಿಯ ಐಪಿಎಲ್‌ (IPL 2021) ಲೀಗ್‌ ಹಂತದ ಕೊನೆಯ 2 ಪಂದ್ಯಗಳು ಶುಕ್ರವಾರ ಏಕಕಾಲಕ್ಕೆ ನಡೆಯಲಿದೆ. ಐಪಿಎಲ್‌ನಲ್ಲಿ ಈ ರೀತಿ ಒಟ್ಟಿಗೆ 2 ಪಂದ್ಯಗಳು ನಡೆಯುತ್ತಿರುವುದು ಇದೇ ಮೊದಲು. 

ಕುತೂಹಲ ಹೆಚ್ಚಿಸಿದ ಕೋಟಿಗೊಬ್ಬ 3 ಟ್ರೇಲರ್: ಮಾಸ್ ಡಯಲಾಗ್ಸ್

ಐಯಾಮ್ ದಿ ಮರ್ಚಂಟ್ ಆಫ್ ಡೆತ್! ಹಾ ಗಂತ ನವಾಬ್ ಶಾ ಹೇಳುತ್ತಿದ್ದಂತೆ, ಕತೆಗೊಂದು ಹೊಸ ಟ್ವಿಸ್ಟ್ ಸಿಗುತ್ತದೆ. ಅಲ್ಲಿಂದಾಚೆ ಕತೆಯ ಅಸಂಖ್ಯ ಆಯಾಮಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ಉಪಚುನಾವಣೆ ಗೆದ್ದು ದೇಶಕ್ಕೆ ಸಂದೇಶ ರವಾನಿಸಬೇಕಿದೆ: ಸಿದ್ದರಾಮಯ್ಯ

ವ್ಯವಸ್ಥೆಯನ್ನು ಬುಡಮೇಲು ಮಾಡುವಂಥ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ. ಹಾನಗಲ್‌(Hanagal), ಸಿಂದಗಿ(Sindagi) ಉಪಚುನಾವಣೆ ಗೆಲ್ಲುವ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕಿದೆ ಎಂದು ಮಾಜಿ ಸಿಎಂ, ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ

10 ನಿಮಿಷದಲ್ಲಿ 850 ಕೋಟಿ ಸಂಪಾದಿಸಿದ ಉದ್ಯಮಿ !

ಭಾರತದ ವಾರೆನ್‌ ಬಫೆಟ್‌ ಖ್ಯಾತಿಯ ಪ್ರಮುಖ ಷೇರು ಹೂಡಿಕೆದಾರ ರಾಕೇಶ್‌ ಜುಂಜುಂನ್‌ವಾಲಾ ಅವರ ಸಂಪತ್ತು ಕೆಲವೇ ನಿಮಿಷಗಳಲ್ಲಿ ಭಾರೀ ಜಿಗಿತಗೊಂಡಿದೆ. ಕೇವಲ 10 ನಿಮಿಷಗಳಲ್ಲಿ ಜುಂಜುನ್‌ವಾಲಾ ಸಂಪತ್ತು 854 ಕೋಟಿ ರು. ಏರಿಕೆಯಾಗಿದೆ. 

ಸಂಬಳಕ್ಕೂ ದುಡ್ಡಿಲ್ಲ.. ಸಾಲ ಕಟ್ಟೋಕೆ ಆಗ್ತಿಲ್ಲ...  ಈ 3 ಕಾರಣಕ್ಕೆ ಮಕಾಡೆ ಮಲಗಿದ ಚೀನಾ!

ಸಂಬಳಕ್ಕೂ ದುಡ್ಡಿಲ್ಲ.. ಸಾಲ(Loan) ಕಟ್ಟೋದಕ್ಕೂ ಆಗುತ್ತಿಲ್ಲ. ಚೀನಾದಲ್ಲಿ(China) ಭೀಕರ ಆರ್ಥಿಕ ಪರಿಸ್ಥಿತಿ(Financial Crisis) ಉಂಟಾಗಿದೆ. ಒಬ್ಬ ಸರ್ವಾಧಿಕಾರಿ ಎರಡು ದಶಕದ ಆಡಳಿತ.. ಆತ ಮಾಡಿದ ಮೂರು ತಪ್ಪು ಡ್ರ್ಯಾಗನ್ ದೇಶದ  ಪತನಕ್ಕೆ ಕಾರಣವಾಯ್ತಾ? ಕೊರೋನಾ ಜನಕ(Coronavirus) ಪಾಠ ಕಲಿಯುವ ಕಾಲ ಮಿಂಚಿ ಹೋಗಿದೆ.
 

click me!