ಅರುಣಾಚಲ ಪ್ರದೇಶಕ್ಕೆ ನುಗ್ಗಿದ ಚೀನಾ ಸೈನಿಕರು ವಶಕ್ಕೆ, ಎಚ್ಚರಿಕೆ ನೀಡಿದ IAF ಮುಖ್ಯಸ್ಥ!

Published : Oct 08, 2021, 03:44 PM ISTUpdated : Oct 08, 2021, 03:47 PM IST
ಅರುಣಾಚಲ ಪ್ರದೇಶಕ್ಕೆ ನುಗ್ಗಿದ ಚೀನಾ ಸೈನಿಕರು ವಶಕ್ಕೆ, ಎಚ್ಚರಿಕೆ ನೀಡಿದ IAF ಮುಖ್ಯಸ್ಥ!

ಸಾರಾಂಶ

ಗಡಿಯಲ್ಲಿ ಮತ್ತೆ ತಂಟೆ ಮಾಡುತ್ತಿದೆ ಚೀನಾ ಸೇನೆ ಅರುಣಾಚಲ ಪ್ರದೇಶದ ತವಾಂಗ್‌ಗೆ ಅತಿಕ್ರಮಣ ಬಂಕರ್ ನಾಶಪಡಿಸಲು ಮುಂದಾದ ಚೈನಾ ಸೈನಿಕರ ವಶಕ್ಕೆ ಪರಿಸ್ಥಿತಿ ಬಗೆಹರಿಸಿದ ಭಾರತೀಯ ಸೇನೆ, ವಾಯುಪಡೆಯಿಂದ ಎಚ್ಚರಿಕೆ

ಅರುಣಾಚಲ ಪ್ರದೇಶ(ಅ.08): ಚೀನಾ ಸೇನೆ ಕಳೆದೆರಡು ವರ್ಷದಿಂದ ನಿರಂತರವಾಗಿ ಭಾರತದ(India) ಗಡಿ ಪ್ರದೇಶದಲ್ಲಿ ಕಿರಿಕ್ ಮಾಡುತ್ತಿದೆ. ಲಡಾಖ‌ನಲ್ಲಿ(Ladakh) ಅತಿಕ್ರಮಣ ಹಾಗೂ ಗಲ್ವಾನ್ ಕಣಿವೆ(Galwan valley) ಸಂಘರ್ಷದ ಬಳಿಕ ಇದೀಗ ಅರುಣಾಚಲ ಪ್ರದೇಶದ ಗಡಿಯಲ್ಲಿ ತಂಟೆ ಮಾಡುತ್ತಿದೆ. ಅರುಣಾಚಲ ಪ್ರದೇಶದ ತವಾಂಗ್ ಗಡಿ ಪ್ರದೇಶಕ್ಕೆ ನುಗ್ಗಿದ ಚೀನಾ(China) ಸೈನಿಕರನ್ನು ಭಾರತೀಯ ಸೇನೆ(Indian Army) ವಶಕ್ಕೆ ಪಡೆದ ಘಟನೆ ನಡೆದಿದೆ. ಚೀನಾ ಉಪಟಳ ಹೆಚ್ಚಾಗುತ್ತಿದ್ದಂತೆ ಭಾರತೀಯ ವಾಯುಪಡೆ ಮುಖ್ಯಸ್ಥ(IAF) ವಿಆರ್ ಚೌದರಿ(VR Chaudhari) ವಾರ್ನಿಂಗ್ ನೀಡಿದ್ದಾರೆ.

ಕುದುರೆಯೇರಿ ಬಂದು ಗಡಿಯೊಳಗೆ ನುಗ್ಗಿದ ಚೀನಾ ಯೋಧರು: ಕಾಲ್ಸೇತುವೆ ಹಾಳು ಮಾಡಿ ಪರಾರಿ!

ಅರುಣಾಚಲ ಪ್ರದೇಶದ(Arunachal Pradesh) ತವಾಂಗ್ ಗಡಿ ಪ್ರದೇಶಕ್ಕೆ ಚೀನಾ ಸೇನೆ ಅತಿಕ್ರಮಣ ಮಾಡಿರುವ ಕುರಿತು ಭಾರತೀಯ ಸೇನೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಚೀನಾ ಪ್ರಯತ್ನವನ್ನು ಭಾರತೀಯ ಸೇನೆ ಸದ್ದಡಗಿಸಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಸುಮಾರು 200 ಚೀನಾ ಸೈನಿಕರು(PLA troops) ಭಾರತ ಗಡಿಯೊಳಕ್ಕೆ ನುಗ್ಗಿ  LACನಲ್ಲಿನ ಬಂಕರ್ ನಾಶಪಡಿಸಲು ಮುಂದಾಗಿದ್ದರು.

ಚೀನಾ, ಭಾರತ ಗಡಿಯಲ್ಲಿ ಡ್ರ್ಯಾಗನ್ ಸೈನ್ಯ: ಮತ್ತೆ ಯುದ್ಧ ಭೀತಿ!

ತಕ್ಷಣ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ, ಕೆಲ ಚೀನಾ ಸೈನಿಕರನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದರು ಎಂದ ಮೂಲಗಳು ತಿಳಿಸಿವೆ. ಬಮ್ ಲಾ ಹಾಗೂ ಯಾಂಗ್‌ಸ್ಟೆ LAC ಬಳಿ ಈ ಸಂಘರ್ಷ ನಡೆದಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಚೀನಾ ಈ ಪ್ರಯತ್ನಗಳನ್ನು ನಡೆಸಿದೆ.

ಲಡಾಖ್‌ ಗಡಿಯಲ್ಲಿ ಚೀನಾ ಸೇನೆ ಟೆನ್ಷನ್‌!

2021ರ ಜನವರಿಯಲ್ಲಿ ಅಮೆರಿಕ ಪ್ಲಾನೆಟ್ ಲ್ಯಾಬ್ಸ್ ಪ್ರಕಟಿಸಿದ ವರದಿಯಲ್ಲಿ ಅರುಣಾಚಲ ಪ್ರದೇಶದ ತ್ಸರಿ ಚು ನದಿ ದಂಡೆಯಲ್ಲಿ ಚೀನಾ ಸೇನೆ 100 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದೆ ಎಂದು ಫೋಟೋ ಸಮೇತ ವರದಿ ನೀಡಿದೆ. ಆಗಸ್ಟ್ 20 ರಂದು ಉತ್ತರಖಂಡದ ಬಾರಹೊತಿ ಸೆಕ್ಟರ್ ಬಳಿ ಚೀನಾ ಸೇನೆ ಅತಿಕ್ರಮಣಕ್ಕೆ ಯತ್ನಿಸಿತ್ತು.

ಗಡಿಯುದ್ಕಕ್ಕೂ ಚೀನಾ ನಡೆಸುತ್ತಿರುವ ಸಂಘರ್ಷಕ್ಕೆ ಇಂದು(ಅ.08) ವಾಯುಸೇನೆ ಮುಖ್ಯಸ್ಥ(Indian Airforce) ವಿಆರ್ ಚೌದರಿ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ವಾಯುಸೇನಾ ದಿವಸ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥ  ಚೌದರಿ, ನೇರವಾಗಿ ಚೀನಾಗೆ ವಾರ್ನಿಂಗ್ ನೀಡಿದ್ದಾರೆ.

ಸೇನೆಗೆ ಅರುಣಾಚಲ ಯುವಕರ ನೇಮಕಕ್ಕೆ ಚೀನಾ ಹುನ್ನಾರ?

89ನೇ ವಾಯುಸೇನಾ ದಿನ(89th Air Force Day) ಕಾರ್ಯಕ್ರಮದಲ್ಲಿ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.  ಭಾರತ ಎದುರಿಸುವ ಭದ್ರತಾ ಸವಾಲಿನ ನಡುವೆ ಮಹತ್ವದ ಜವಾಬ್ದಾರಿ ಸ್ವೀಕರಿಸಿದ್ದೇನೆ. ದೇಶದ ಗಡಿಯನ್ನು ರಕ್ಷಿಸಲು(India’s sovereignty) ನಮ್ಮ ಪಡೆ ಸಜ್ಜಾಗಿದೆ. ಅದಕ್ಕೆ ಬದ್ದವಾಗಿದೆ. ಹೀಗಾಗಿ ಯಾವುದೇ ಶಕ್ತಿಗಳು ಭಾರತವನ್ನು ಕೆಣಕಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಭಾರತೀಯ ವಾಯುಪಡೆ 90ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ನೀಲಿ ಸಮವಸ್ತ್ರದಲ್ಲಿ ದೇಶ ಸೇವೆ ಮಾಡಿದ ಎಲ್ಲಾ ಪುರುಷ ಹಾಗೂ ಮಹಿಳಾ ಪಡೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಚೌದರಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು