Operation Sindoor: ಕಾರ್ಗಿಲ್​ ಯುದ್ಧ ಗೆಲ್ಲಿಸಿದ್ದ ಆ ಕುರಿಗಾಹಿ ಇನ್ನೈದು ತಿಂಗಳು ಬದುಕಿದ್ದರೆ...?

Published : May 09, 2025, 10:54 PM ISTUpdated : May 12, 2025, 12:58 PM IST
Operation Sindoor:  ಕಾರ್ಗಿಲ್​ ಯುದ್ಧ ಗೆಲ್ಲಿಸಿದ್ದ  ಆ ಕುರಿಗಾಹಿ ಇನ್ನೈದು ತಿಂಗಳು ಬದುಕಿದ್ದರೆ...?

ಸಾರಾಂಶ

1999ರ ಕಾರ್ಗಿಲ್ ಯುದ್ಧದಲ್ಲಿ ಕುರಿಗಾಹಿ ತಾಶಿ ನಮ್ಗ್ಯಾಲ್ ಪಾಕಿಸ್ತಾನಿ ಒಳನುಗ್ಗುವಿಕೆಯ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ನೀಡಿ ನಿರ್ಣಾಯಕ ಪಾತ್ರ ವಹಿಸಿದರು. ಯಾಕ್‌ಗಳನ್ನು ಹುಡುಕುವಾಗ ಶತ್ರುಗಳ ಚಲನವಲನ ಗಮನಿಸಿ ಸೇನೆಗೆ ತಿಳಿಸಿದ ಈತನ ಸಹಾಯದಿಂದ ಭಾರತ ಗೆಲುವು ಸಾಧಿಸಿತು. ಡಿಸೆಂಬರ್‌ನಲ್ಲಿ ನಿಧನರಾದ ತಾಶಿಗೆ ಸರ್ಕಾರ ಗೌರವ ಸಲ್ಲಿಸಿತು. ಆಧುನಿಕ ಯುದ್ಧ ತಂತ್ರಜ್ಞಾನದ ಪರಿವರ್ತನೆ ಕಾಣಲು ಆತ ಬದುಕಿರಬೇಕಿತ್ತೆಂದು ಅನೇಕರು ಭಾವಿಸುತ್ತಾರೆ.

ಇಂದು ಯುದ್ಧದ ಪರಿಕಲ್ಪನೆಯೇ ಸಂಪೂರ್ಣ ಬದಲಾಗಿ ಹೋಗಿದೆ. ಕುಳಿತ ಸ್ಥಳಗಳಿಂದಲೇ ಯಾವ ದೇಶವನ್ನಾದರೂ ಉಡಾಯಿಸಬಲ್ಲ ಶಕ್ತಿ ಇಂದಿನ ತಂತ್ರಜ್ಞಾನಕ್ಕಿದೆ. ಆದರೆ ಕೆಲವೇ ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಊಹಿಸಲೂ ಸಾಧ್ಯವಿಲ್ಲ. ಯೋಧರು ಸ್ಥಳಕ್ಕೇ ಧಾವಿಸಿ ಯುದ್ಧ ಮಾಡಬೇಕಿತ್ತು. ಅದರಲ್ಲಿಯೂ 1999ರಲ್ಲಿ ನಡೆದ ಕಾರ್ಗಿಲ್​ ಯುದ್ಧದ ಸಂದರ್ಭದಲ್ಲಿ ಇದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಶತ್ರುಗಳ ನೆಲೆಯನ್ನು ಕುಳಿತಜಾಗದಿಂದಲೇ ಕಂಡುಹಿಡಿಯುವ ತಾಕತ್ತು ಈಗಿದ್ದರೆ, ಆಗಿನ ಸಂದರ್ಭದಲ್ಲಿ ಅದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಅಂಥ ಪರಿಸ್ಥಿತಿಯಲ್ಲಿ ಕಾರ್ಗಿಲ್​ ಯುದ್ಧದ ನಿಜವಾದ ನಾಯಕ ಒಬ್ಬ ಕುರಿಗಾಹಿ ಎನ್ನುವುದು ಬಹುತೇಕ ಜನರಿಗೆ ತಿಳಿದಿರಲಿಕ್ಕಿಲ್ಲ. ಆ ಕುರಿಗಾಹಿ ಇಲ್ಲದಿದ್ದರೆ ಅಂದು ಏನಾಗುತ್ತಿತ್ತೋ ಎಂದು ಊಹಿಸಿಕೊಳ್ಳುವುದೂ ಕಷ್ಟವಾಗುವ ಸ್ಥಿತಿ ಇತ್ತು.

ಆ ಕುರಿ ಕಾಯುವವನ ಹೆಸರೇ ತಾಶಿ ನಮ್​ಗ್ಯಾಲ್​. ಈತ ಅಂದು ಕುರಿಕಾಯಲು ಹೋಗಿದಿದ್ದರೆ, ಕಾಯಲು ಹೋದ ಸಂದರ್ಭದಲ್ಲಿ ಆ ಸಂದೇಹಾಸ್ಪದ ಘಟನೆ ನೋಡದಿದ್ದರೆ, ನೋಡಿದ್ದರೂ ಅದನ್ನು ಅಲ್ಲಿಯೇ ಮರೆತಿದ್ದರೆ... ಬಹುಶಃ ಸ್ಥಿತಿ ಭೀಕರವಾಗುತ್ತಿತ್ತೋ ಗೊತ್ತಿಲ್ಲ. ಅಷ್ಟಕ್ಕೂ ತಾಶಿ ನಮ್​ಗ್ಯಾಲ್​ ಮಾಡಿದ್ದೇನೆಂದರೆ, 1999 ರಲ್ಲಿ ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನದ ಒಳನುಗ್ಗುವಿಕೆಯ ಬಗ್ಗೆ ಭಾರತೀಯ ಸೈನಿಕರಿಗೆ ಎಚ್ಚರಿಕೆ ನೀಡಿದ್ದರು.  ಕಾಣೆಯಾದ ತನ್ನ ಯಾಕ್‌ಗಳನ್ನು ಹುಡುಕುತ್ತಿರುವಾಗ, ಈತ ಕೆಲವರು  ಬಟಾಲಿಕ್ ಪರ್ವತ ಶ್ರೇಣಿಯ ಮೇಲೆ ಬಂಕರ್‌ಗಳನ್ನು ಅಗೆಯುತ್ತಿರುವುದನ್ನು ನೋಡಿದ್ದ. ಅದು ಪಾಕಿಸ್ತಾನದ ಸೇನೆ ಎನ್ನುವುದು ಈತನಿಗೆ ತಿಳಿಯಿತು. ಇಲ್ಲೇನೋ ಎಡವಟ್ಟು ಆಗುತ್ತಿದೆ ಎನ್ನುವುದನ್ನು ಆರಿತ ಆತ,  ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ತಕ್ಷಣವೇ ಭಾರತೀಯ ಸೇನೆಗೆ ಮಾಹಿತಿ ನೀಡಿದ. ಕೂಡಲೇ ಸೇನೆ ಎಚ್ಚೆತ್ತುಕೊಂಡಿತ್ತು. ಇದು ಭಾರತದ ಮಿಲಿಟರಿ ಪ್ರತಿಕ್ರಿಯೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.  

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!

ಈತ ಕೊಟ್ಟ ಸುಳಿವಿನಿಂದಲೇ ಎಲ್ಲಾ ಕಾರ್ಯತಂತ್ರಗಳನ್ನು ರೂಪಿಸಲಾಗಿತ್ತು. ಮೇ 3 ಮತ್ತು ಜುಲೈ 26, 1999 ರ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ, ಭಾರತೀಯ ಪಡೆಗಳು ತ್ವರಿತವಾಗಿ ಸಜ್ಜುಗೊಂಡು, ಶ್ರೀನಗರ-ಲೇಹ್ ಹೆದ್ದಾರಿಯನ್ನು ಬೇರ್ಪಡಿಸುವ ಪಾಕಿಸ್ತಾನದ ರಹಸ್ಯ ಕಾರ್ಯಾಚರಣೆಯನ್ನು ವಿಫಲಗೊಳಿಸಿದವು. ಈ ಮೂಲಕ ತಾಶಿ ನಮ್​ಗ್ಯಾಲ್​ ಭಾರತದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಅಂದಿನ ಅಟಲ್​ ಬಿಹಾರಿ ವಾಜಪೇಯಿ ಸರ್ಕಾರ ಆತನಿಗೆ ಯೋಧನ ರೀತಿಯಲ್ಲಿಯೇ ಗೌರವವನ್ನೂ ಸಲ್ಲಿಸಿತು.  ಆಪರೇಷನ್ ವಿಜಯ್ ಸಮಯದಲ್ಲಿ ಆತ ರಾಷ್ಟ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು. ಭಾರತದ ಇತಿಹಾಸದಲ್ಲಿ ಇದು  "ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುತ್ತದೆ" ಎಂದು ತಿಳಿಸಲಾಯಿತು.

ಕಳೆದ ಡಿಸೆಂಬರ್​ನಲ್ಲಿ ತಾಶಿ ನಮ್​ಗ್ಯಾಲ್​ 58ನೇ ನಿಧನರಾದರು. ಆಗಲೂ ಸರ್ಕಾರಿ ಗೌರವವನ್ನೇ ನೀಡುವ ಮೂಲಕ, ಅವರ ಕುಟುಂಬಕ್ಕೂ ಸರ್ಕಾರ ನೆರವಾಗಿದೆ. ಇಂದು ಆಪರೇಷನ್​ ಸಿಂದೂರದ ಸಮಯದಲ್ಲಿ ತಾಶಿ ನಮ್​ಗ್ಯಾಲ್​ನನ್ನು ನೆನೆಯಲು ಒಂದು ಕಾರಣವೂ ಇದೆ. ಅದೇನೆಂದರೆ, ಕಾರ್ಗಿಲ್​ ಯುದ್ಧದ ಸಮಯಕ್ಕೂ, ಈಗಿನ ಆಧುನಿಕ ಯುದ್ಧಕ್ಕೆ ಇರುವ ವ್ಯತ್ಯಾಸವನ್ನು ನೋಡುವುದಕ್ಕಾದರೂ ಇನ್ನೊಂದು ಐದು ತಿಂಗಳಾದರೂ ಆತ ಬದುಕಿರಬೇಕಿತ್ತು ಎಂದು ಹಲವರು ನೆನಪಿಸಿಕೊಳ್ಳುತ್ತಿದ್ದಾರೆ. ಆಗ ಶತ್ರುರಾಷ್ಟ್ರಗಳು ಪಿತೂರಿ ನಡೆಸುತ್ತಿರುವ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಕಷ್ಟವಾಗಿತ್ತು ಹಾಗೂ ಈಗ ಹೇಗೆ ಕುಳಿತಲ್ಲಿಯೇ ಅದು ಸಾಧ್ಯವಾಗುವ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ ಎನ್ನುವುದನ್ನು ಕಾಣಿಸುವ ಅದೃಷ್ಟ ಆತನಿಗೆ ಸಿಗಬೇಕಿತ್ತು ಎಂದು ನೆನಪಿಸಿಕೊಳ್ಳಲಾಗುತ್ತಿದೆ. ಇದೇ ವೇಳೆ, ಯಾರೂ ಕನಿಷ್ಠರಲ್ಲ, ಯಾರೂ ಶ್ರೇಷ್ಠರೂ ಅಲ್ಲ ಎನ್ನುವ ಸಂದೇಶವನ್ನೂ ಬಿಟ್ಟು ಹೋಗಿದ್ದಾನೆ  ತಾಶಿ ನಮ್​ಗ್ಯಾಲ್​. 

Operation Sindoor: ಸಿಂದೂರ ಕಸಿದ ಉಗ್ರರ ಮಟ್ಟ ಹಾಕಲು ನಿಂತ ಸೋಫಿಯಾ, ವ್ಯೋಮಿಕಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!