*ನಾಡಗೀತೆಯಾಗಿ ‘ತಮಿಳ್ ತಾಯ್ ವಾಳ್ತ್’
*ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ
*ಖ್ಯಾತ ವಿದ್ವಾಂಸ ಎಂ.ಎಸ್.ಪಿಳ್ಳೈ ಗೀತೆ
ಚೆನ್ನೈ (ಡಿ. 18): ತಮಿಳು ತಾಯಿಗೆ ವಂದಿಸುವ ‘ತಮಿಳ್ ತಾಯ್ ವಾಳ್ತ್’ (ತಮಿಳು ತಾಯಿಯೇ ನಿನಗೆ ವಂದನೆ- Tamil Thai Vazhthu) ಗೀತೆಯನ್ನು ತಮಿಳುನಾಡು (Tamil Nadu) ತನ್ನ ನಾಡಗೀತೆಯಾಗಿ ಶುಕ್ರವಾರ ಘೋಷಿಸಿದೆ ಹಾಗೂ ಈ ಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಗೌರವ ಕೊಡಬೇಕು ಎಂಬ ಸುತ್ತೋಲೆ ಹೊರಡಿಸಿದೆ.ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ‘ತಮಿಳ್ ತಾಯ್ ವಾಳ್ತು’ ಕೇವಲ ಪ್ರಾರ್ಥನಾ ಗೀತೆಯೇ ಹೊರತು ರಾಷ್ಟ್ರಗೀತೆಯಲ್ಲ, ಹೀಗಾಗಿ ಈ ಹಾಡಿನ ವೇಳೆ ಯಾರೂ ಎದ್ದು ನಿಲ್ಲುವ ಅವಶ್ಯಕತೆ ಇಲ್ಲ ಎಂದಿತ್ತು. ಆದರೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಈ ಹಾಡನ್ನು ನಾಡಗೀತೆಯಾಗಿ ಘೋಷಣೆ ಮಾಡಿ ಸರ್ಕಾರಿ ಆದೇಶ ಹೊರಡಿಸಿದ್ದಾರೆ.
55 ಸೆಕೆಂಡುಗಳಿರುವ ಈ ನಾಡಗೀತೆ ಹಾಡುವಾಗ ಅಂಗವಿಕಲರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎದ್ದು ನಿಲ್ಲಬೇಕು ಹಾಗೂ ರಾಜ್ಯದ ಎಲ್ಲಾ ಶಾಲೆಗಳು,ವಿಶ್ವವಿದ್ಯಾನಿಲಯಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಂಸ್ಥೆಗಳು ಯಾವುದೇ ಕಾರ್ಯಕ್ರಮ ಆರಂಭಿಸುವ ಮುನ್ನ ಈ ಗೀತೆಯನ್ನು ಹಾಡುವುದು ಕಡ್ಡಾಯ ಎಂದು ಸ್ಟಾಲಿನ್ ಆದೇಶಿಸಿದ್ದಾರೆ.
undefined
ತಮಿಳಿನ ಖ್ಯಾತ ವಿದ್ವಾಂಸರ ಗೀತೆ!
ತಮಿಳಿನ ಖ್ಯಾತ ವಿದ್ವಾಂಸ ಎಂ.ಎಸ್.ಪಿಳ್ಳೈ (1855-1897) ಗೀತೆ ಬರೆದಿದ್ದರು. ಎಂ.ಎಸ್.ವಿಶ್ವನಾಥನ್ ಸಂಗೀತ ನೀಡಿದ್ದಾರೆ. ಇದು 1970ರಿಂದ ಅಧಿಕೃತ ಗೀತೆ ಮಾನ್ಯತೆ ಹೊಂದಿತ್ತು. ಇದೀಗ ಇದಕ್ಕೆ ನಾಡಗೀತೆ ಸ್ಥಾನಮಾನ ದೊರಕಿದೆ. 2018ರಲ್ಲಿ ಈ ಗೀತಗಾಯನದ ವೇಳೆ ಕಂಚಿ ಕಾಮಕೋಟಿ ಶ್ರೀಗಳಾದ ವಿಜಯೇಂದ್ರ ಸರಸ್ವತಿಗಳು ಎದ್ದು ನಿಲ್ಲದೇ ಇರುವುದು ವಿವಾದಕ್ಕೀಡಾಗಿತ್ತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಡಗೀತೆಯಿದೆ. ಕರ್ನಾಟಕದಲ್ಲಿ ‘ಜಯಭಾರತ ತನನಿಯ ತನುಜಾತೆ’ ನಾಡಗೀತೆ ಹಾಡಲಾಗುತ್ತದೆ.
ತಮಿಳ್ ತಾಯ್ ವಾಳ್ತು ಕೇವಲ ಪ್ರಾರ್ಥನಾ ಗೀತೆ?
ಮದ್ರಾಸ್ ಹೈಕೋರ್ಟಿನ ಇತ್ತೀಚಿನ ಅವಲೋಕನದ ನಂತರ ಸರ್ಕಾರದ ನಿರ್ದೇಶನ ಬಂದಿದೆ. ವಿಭಿನ್ನ ಪ್ರಕರಣದಲ್ಲಿ, 'ತಮಿಳ್ ತಾಯ್ ವಾಳ್ತು' ಕೇವಲ ಪ್ರಾರ್ಥನಾ ಗೀತೆಯಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು ಹಾಡಿನ ಸಮಯದಲ್ಲಿ ನಿಲ್ಲಬೇಕು ಎಂಬ ಯಾವುದೇ ಕಾರ್ಯಕಾರಿ ಆದೇಶವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, 'ತಮಿಳ್ ತಾಯ್ ವಾಳ್ತು' ರಾಷ್ಟ್ರಗೀತೆ ಅಲ್ಲ ಮತ್ತು ಆದ್ದರಿಂದ, ಅದನ್ನು ಸಲ್ಲಿಸುವಾಗ ಪ್ರತಿಯೊಬ್ಬರೂ ನಿಂತಿರುವ ಭಂಗಿಯಲ್ಲಿ ಉಳಿಯುವ ಅಗತ್ಯವಿಲ್ಲ ಎಂದು ಹೇಳಿದೆ.
ಈ ವರ್ಷ ಐಐಟಿ-ಮದ್ರಾಸ್ ತನ್ನ ಘಟಿಕೋತ್ಸವದ ಸಮಯದಲ್ಲಿ ಹಾಡನ್ನು ಹಾಡಿರಲಿಲ್ಲ. ಈ ಕಾರ್ಯಕ್ರಮದ ನಂತರ ಈ ವಿಷಯವು ವ್ಯಾಪಕವಾಗಿ ಚರ್ಚೆಯಾಗಿದೆ. ಈ ಸಂಬಂಧ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವರು ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಸಂವಿಧಾನದ ಅನುಚ್ಛೇದ 51A(a) ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಆದೇಶಿಸುತ್ತದೆ.
ತಮಿಳುನಾಡು ಸರ್ಕಾರಿ ನೌಕರಿಗೂ ತಮಿಳು ಕಡ್ಡಾಯ!
ತಮಿಳುನಾಡಿನಲ್ಲಿ ಸರ್ಕಾರಿ ನೌಕರಿಗೆ (Tamil Nadu Government Employees) ಸೇರಬೇಕೆಂದರೆ ಇನ್ನುಮುಂದೆ ತಮಿಳು ಭಾಷಾ (Tamil Language) ವಿಷಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ರಾಜ್ಯದ ಸರ್ಕಾರಿ ನೌಕರರಿಗೆ ತಮಿಳು ಜ್ಞಾನ ಇರಬೇಕು, ಜನರಿಗೆ ಮಾತೃಭಾಷೆಯಲ್ಲಿ (Mother Tongue) ಸರ್ಕಾರಿ ಸೇವೆಗಳು ದೊರಕಬೇಕು ಮತ್ತು ತಮಿಳು ಭಾಷಿಕರಿಗೇ ಸ್ಥಳೀಯ ಉದ್ಯೋಗಗಳು (local Jobs) ಸಿಗಬೇಕು ಎಂಬ ಉದ್ದೇಶದೊಂದಿಗೆ ತಮಿಳುನಾಡು ಸರ್ಕಾರ ಎಲ್ಲ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ:
1) ತಮಿಳುನಾಡು ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ: ಕನಿಷ್ಠ 40 ಅಂಕ ಪಡೆದು ಉತ್ತೀರ್ಣರಾದರೆ ಮಾತ್ರ ನೇಮಕಾತಿ
2) Govt Of India : ಕೇಂದ್ರದಿಂದ ತಮಿಳಿಗೆ 50 ಕೋಟಿ, ಕನ್ನಡಕ್ಕೆ 9 ಕೋಟಿ: ಬಳಿಗಾರ್ ಕಿಡಿ
3) Hindi Language: ದಕ್ಷಿಣ ಭಾರತದ ವಿರೋಧದ ನಡುವೆ ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಯತ್ನ!