Ramesh Kumar Rape Remark: ರಮೇಶ್ ಕುಮಾರ್ ಹೇಳಿಕೆಗೆ ಪ್ರಿಯಾಂಕ ಗಾಂಧಿ ಗರಂ

Published : Dec 17, 2021, 07:34 PM IST
Ramesh Kumar Rape Remark: ರಮೇಶ್ ಕುಮಾರ್ ಹೇಳಿಕೆಗೆ ಪ್ರಿಯಾಂಕ ಗಾಂಧಿ ಗರಂ

ಸಾರಾಂಶ

* ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ * ರಮೇಶ್ ಕುಮಾರ್ ಹೇಳಿಗೆ ಕಾಂಗ್ರೆಸ್ ಹೈಕಮಾಂಡ್ ಗರಂ  * ತೀವ್ರವಾಗಿ ಖಂಡಿಸಿದ ಪ್ರಿಯಾಂಕ್ ಗಾಂಧಿ

ನವದೆಹಲಿ, (ಡಿ.17): ಅತ್ಯಾಚಾರ (Rape) ತಡೆಯಲು ಸಾಧ್ಯವಾಗದಿದ್ದರೆ ಎಂಜಾಯ್ ಮಾಡಬೇಕು ಎನ್ನುವ  ಮಾಜಿ ಸ್ಪೀಕರ್ ರಮೇಶ್ ಕುಮಾರ್(Ramesh kumar) ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗಿದೆ.

 ರಮೇಶ್ ಕುಮಾರ್ ಹೇಳಿಕೆಯು ಲೋಕಸಭೆಯಲ್ಲೂ ಗದ್ದಲ ಸೃಷ್ಟಿಸಿದೆ. ಇದೀಗ ಕಾಂಗ್ರೆಸ್ ಕೈಕಮಾಂಡ್ (Congress High Command) ಸಹ ರಮೇಶ್ ಕುಮಾರ್‌ ಹೇಳಿಕೆಗೆ ಗರಂ ಆಗಿದ್ದು, ಪ್ರಿಯಾಂಕ ಗಾಂಧಿ (Priyanka Gandhi) ಟ್ವೀಟರ್ ಮೂಲಕ ಖಂಡಿಸಿದ್ದಾರೆ.

Ramesh Kumar Controversy: ರಮೇಶ್ ಕುಮಾರ್ ರೇಪ್ ಹೇಳಿಕೆಗೆ ಮಹಿಳಾ ಆಯೋಗ ಸೇರಿ ದೇಶದಾದ್ಯಂತ ಖಂಡನೆ

ಇಂತಹ ಹೇಳಿಕೆಗಳು ಒಪ್ಪಲು ಸಾಧ್ಯವಿಲ್ಲ. ಕೆ.ಆರ್.ರಮೇಶ್ ಕುಮಾರ್ ಹೇಳಿಕೆಯನ್ನು ಖಂಡಿಸುತ್ತೇನೆ. ಈ ರೀತಿ ಪದಗಳು ಯಾರು ಬಳಸಬಾರದು. ರೇಪ್ ಅನ್ನುವುದು ಘೋರ ಅಪರಾಧ. ಇಲ್ಲಿಗೆ ನಿಲ್ಲಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಸ್ಮೃತಿ ಇರಾನಿ ಸಹ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, 'ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಅವರು ನೀಡಿರುವ ಹೇಳಿಕೆ ನಾಚಿಕೆಗೇಡಿನ ವಿಷಯವಾಗಿದೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ವಿಷಾದ ವ್ಯಕ್ತಪಡಿಸಿದ ರಮೇಶ್ ಕುಮಾರ್
ಅತ್ಯಾಚಾರದ ಬಗ್ಗೆ ವಿವಾದಾತ್ಮಕ ನುಡಿಗಟ್ಟು ಉಲ್ಲೇಖ ಮಾಡಿದ್ದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.‌

ವಿಧಾನಸಭೆಯಲ್ಲಿ ಸದನ‌ ಆರಂಭ ಆಗುತ್ತಿದ್ದಂತೆ, ಎದ್ದು ನಿಂತ ರಮೇಶ್ ಕುಮಾರ್, ಇಂಗ್ಲಿಷ್ ಭಾಷೆಯ ಮಾತನ್ನು ಉಲ್ಲೇಖ ಮಾಡಿದೆ ಅಷ್ಟೇ.ಹೆಣ್ಣಿಗೆ ಅಪಮಾನ ಮಾಡುವುದು, ಸದನದ ಗೌರವ ಕಡಿಮೆ ಮಾಡುವುದು, ‌ಲಘುವಾಗಿ ವರ್ತಿಸುವ ಉದ್ದೇಶ ಇರಲಿಲ್ಲ ಎಂದರು.

ಮಾತನಾಡಿದ ಸಂದರ್ಭದ ಬಗ್ಗೆ ನಾನು ಸಮರ್ಥನೆ ಮಾಡಲ್ಲ. ನಾನು‌ ಉಲ್ಲೇಖ ಮಾಡಿದ ಮಾತು ಯಾರಿಗೂ ನೋವಾಗಿದ್ದರೂ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಸಾಮಾನ್ಯ ಹಿನ್ನೆಲೆಯಿಂದ ಬಂದವನು, ಸದನದ ಗೌರವದಲ್ಲಿ ನಡೆದುಕೊಳ್ಳಬೇಕು ಎಂಬ ಪ್ರಯತ್ನ ಮಾಡುತ್ತೇನೆ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ ಎಂದರು.

ತಾವು ನಗಾಡಿದ್ದೀರಿ,ತಮ್ಮನ್ನೂ ಸಹ ಅಪರಾಧಿ ಮಾಡಿದ್ದಾರೆ, ನಿಮ್ಮದೂ ಆ ಉದ್ದೇಶ ಇರಲಿಕ್ಕಿಲ್ಲ ಎಂದು ಸ್ಪೀಕರ್ ಕಾಗೇರಿಗೆ ಹೇಳಿದ ರಮೇಶ್ ಕುಮಾರ್, ನನ್ನ ಮಾತಿಂದ ಸಮಾಜದ ಯಾವ ವರ್ಗಕ್ಕೆ ನೋವಾಗಿದ್ದರೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನೋವಾದಲ್ಲಿ,ಅದಕ್ಕೆ ವಿಷಾದ ವ್ಯಕ್ತಪಡಿಸಲು ಯಾವುದೇ ಮುಜುಗರ ಇಲ್ಲ ಎಂದರು.

ಸದನದಲ್ಲಿ ಹೇಳಿದ್ದೇನು?
ಅತಿವೃಷ್ಠಿ ಹಾಗೂ ಪ್ರವಾಹ ಹಾನಿ ವಿಚಾರವಾಗಿ ನಿಯಮ 69 ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅವರಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಉತ್ತರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,‌ "ಎಷ್ಟು ಬೇಕಾದರೂ ಮಾತನಾಡಲು ಅವಕಾಶ ಕೊಡುತ್ತೇನೆ, ಗಮನ‌ ಸೆಳೆಯುವ ಸೂಚನೆ ಕೈಬಿಟ್ಟುಬಿಡುತ್ತೇನೆ. ಉಳಿದಿದ್ದನ್ನು ಮುಂದುವರಿಸಿಕೊಂಡು ಹೊಗುತ್ತೇನೆ," ಎಂದರು.

ಈ ಮಾತುಕತೆಯ ವೇಳೆ ಎದ್ದು ನಿಂತು ಮಾತನಾಡಿದ ರಮೇಶ್ ಕುಮಾರ್ ಇಂಗ್ಲಿಷ್ ನುಡಿಗಟ್ಟನ್ನು ಉಲ್ಲೇಖಿಸಿ ವೆನ್‌ ರೇಪ್‌ ಈಸ್‌ ಇನ್‌ಎವಿಟೇಬಲ್‌ (That is exactly the position into which you are) ಎಂದಿದ್ದರು.

ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದರು. ಈ ಹೇಳಿಕೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಕ್ಕಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!