ಜನವರಿ 1, 2025 ರಿಂದ ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ಸಂಚರಿಸುವ 10 ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಪರಿವರ್ತಿಸಲಾಗುವುದು. ಹೊಸ ರೈಲು ಸಂಖ್ಯೆಗಳನ್ನು ಈಗಾಗಲೇ ಪ್ರಕಟಿಸಲಾಗಿದೆ.
ಬೆಂಗಳೂರು/ಹುಬ್ಬಳ್ಳಿ (ನ.28): ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನಾಲ್ಕೈದು ರಾಜ್ಯಗಳ ಪ್ರಮುಖ ಸ್ಥಳಗಳಿಗೆ ಪ್ರಯಾಣ ಸೇವೆ ಕಲ್ಪಿಸುತ್ತಿದ್ದ ಪ್ರಮುಖ 10 ರೈಲುಗಳನ್ನು ಜ.1ರ 2025ರಿಂದ ಅನ್ವಯ ಆಗುವಂತೆ ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಮಾರ್ಪಾಡು ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ, ರೈಲು ಗಾಡಿಗಳ ಸಂಖ್ಯೆಗಳನ್ನು ಬದಲಿಸಲು ಹೊಸ ಸಂಖ್ಯೆಗಳನ್ನೂ ನೀಡಲಾಗಿದೆ.
ದಕ್ಷಿಣ ಮಧ್ಯ ರೈಲ್ವೆ ತನ್ನ ಒಡೆತನದ 10 ಪ್ಯಾಸೆಂಜರ್ ವಿಶೇಷ ರೈಲುಗಳನ್ನು ಜನವರಿ 1, 2025 ರಿಂದ ಜಾರಿಗೆ ಬರುವಂತೆ ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಮರು ಸಂಖ್ಯೆ ನೀಡಲು ಅಧಿಸೂಚನೆ ಹೊರಡಿಸಿದೆ. ಇದೀಗ ರೈಲುಗಾಡಿಗಳ ಸಂಖ್ಯೆಗಳನ್ನು ಬದಲಾವಣೆ ಮಾಡಲು ನೀಡಲಾದ ಸಂಖ್ಯೆಗಳ ವಿವರ ಈ ಕೆಳಗಿನಂತಿದೆ..
undefined
ಗುಂತಕಲ್-ಹಿಂದೂಪುರ-ಗುಂತಕಲ್ ರೈಲು ಸಂಖ್ಯೆ 07693/07694 ಅನ್ನು 77213/77214 ಎಂದು ಬದಲಿಸಲು ಮರುಸಂಖ್ಯೆ ನೀಡಲಾಗಿದೆ.
ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ರೈಲು ಸಂಖ್ಯೆ 07657/07658 ಅನ್ನು 57401/57402 ಎಂದು ಬದಲಿಸಲು ಮರುಸಂಖ್ಯೆ ನೀಡಲಾಗಿದೆ.
ತಿರುಪತಿ-ಕದಿದೇವರಪಲ್ಲಿ-ತಿರುಪತಿ ರೈಲು ಸಂಖ್ಯೆ 07589/07590 ಅನ್ನು 57405/57406 ಎಂದು ಬದಲಿಸಲು ಮರುಸಂಖ್ಯೆ ನೀಡಲಾಗಿದೆ.
ಚಿಕ್ಕಜಾಜೂರು-ಗುಂತಕಲ್-ಚಿಕ್ಕಜಾಜೂರು ರೈಲು ಸಂಖ್ಯೆ 07585/07586 ಅನ್ನು 57416/57415 ಎಂದು ಬದಲಿಸಲು ಮರುಸಂಖ್ಯೆ ಮಾಡಲಾಗಿದೆ.
ವಿಜಯಪುರ-ರಾಯಚೂರು-ವಿಜಯಪುರ ರೈಲು ಸಂಖ್ಯೆ 07663/07664 ಅನ್ನು 57662/57661 ಎಂದು ಬದಲಿಸಲು ಮರುಸಂಖ್ಯೆ ಮಾಡಲಾಗಿದೆ.
ಇದನ್ನೂ ಓದಿ: ಭಾರತದ ಟಾಪ್-10 ಸುಂದರ ಗ್ರಾಮಗಳು; ಕರ್ನಾಟಕದ ಯಾವ ಹಳ್ಳಿ ಇದೆ?
ಪ್ರಯಾಣಿಕರು ಈ ಮಾರ್ಪಾಡುಗಳನ್ನು ಗಮನದಲ್ಲಿಟ್ಟುಕೊಂಡು ಸುಗಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಬೇಕು. ಈ ಮೂಲಕ ಪ್ಯಾಸೆಂಜರ್ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರು ಇದನ್ನು ಗಮನದಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಆದರೆ, ಇದರಲ್ಲಿ ಸ್ಪೆಷಲ್ ಪ್ಯಾಸೆಂಜರ್ ರೈಲುಗಳನ್ನು ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಮಾರ್ಪಾಡು ಮಾಡಲಾಗುತ್ತಿದ್ದರೂ, ಪ್ರಯಾಣದ ಟಿಕೆಟ್ ದರಗಳಲ್ಲಿ ಬದಲಾವಣೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.