ಪ್ರಧಾನಿ ವಿರುದ್ಧ ಟ್ವೀಟ್; ಕನ್ನಡ ಸಿನಿಮಾ ಕಿರಾತಕ ನಟಿ ವಿರುದ್ಧ ಕೇಸ್ ದಾಖಲು!

By Suvarna NewsFirst Published Feb 15, 2021, 8:03 PM IST
Highlights

ಹಲವು ಅಭಿವೃದ್ಧಿ ಯೋಜನೆಗೆ ಚಾಲನೆ, ಯುದ್ಧಟ್ಯಾಂಕ್ ರಾಷ್ಟ್ರಕ್ಕೆ ಸಮರ್ಪಣೆ ಸೇರಿದಂತೆ ಕೆಲ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಫೆ.14ಕ್ಕೆ ತಮಿಳುನಾಡಿಗೆ ಭೇಟಿ ನೀಡಿದ್ದರು. ಈ ವೇಳೆ ಮೋದಿ ವಿರುದ್ಧ ಟ್ವೀಟ್ ಮಾಡಿದ ನಟಿ ಓವಿಯಾ ವಿರುದ್ಧ ಕೇಸ್ ದಾಖಲಾಗಿದೆ.

ಚೆನ್ನೈ(ಫೆ.15): ಮದುವೆ ಹಾಗೂ ಶಾಲಾ ವಿಚಾರದಲ್ಲಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಕಿರಾತಕ ಕನ್ನಡ ಸಿನಿಮಾ ನಾಯಕಿ ನಟಿ ಓವಿಯಾ ಹೆಲನ್ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಧಾನಿ ಮೋದಿ ತಮಿಳುನಾಡು ಭೇಟಿ ವೇಳೆ ಗೋಬ್ಯಾಕ್ ಮೋಡಿ ಎಂದು ಟ್ವೀಟ್ ಮಾಡಿದ ಓವಿಯಾ ವಿರುದ್ಧ ಕೇಸ್ ದಾಖಲಾಗಿದೆ.

ರೈತ ಹೋರಾಟದ ಮಧ್ಯೆ, ತ. ನಾಡಿನ ಅನ್ನದಾತನ ಈ ನಡೆ ಶ್ಲಾಘಿಸಿದ ಮೋದಿ!.

ತಮಿಳುನಾಡು ಬಿಜೆಪಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ತಮಿಳುನಾಡು ಬಿಜೆಪಿ ಓವಿಯಾ ಕ್ಷಮೆ ಕೇಳುವಂತೆ ಒತ್ತಾಯಿಸಿದೆ. ಪ್ರಧಾನಿ ಮೋದಿ ವಿರುದ್ಧ ಸಾರ್ವಜನಿಕವಾಗಿ ಅಗೌವ ತೂರಿದ ಹಾಗೂ ಪಿತೂರಿ ಸಂಚು ಮಾಡಿದ ಆರೋಪದಡಿಯಲ್ಲಿ 69, 69ಎ, 124ಎ, 153 ಎ,  ಹಾಗೂ 294 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗೋ ಬ್ಯಾಕ್ ಮೋದಿ ಎಂದು ಟ್ವೀಟ್ ಮಾಡಿದ ಓವಿಯಾಗೆ ಟ್ವೀಟನ್ನು ಅನೇಕರು ಲೈಕ್ಸ್, ರಿಪ್ಲೈ ಮಾಡಿದ್ದಾರೆ. ಇಷ್ಟೇ ಅಲ್ಲ ಈ ಟ್ವೀಟ್ ಬಳಿಕ ಹಲವರು ಗೋ ಬ್ಯಾಕ್ ಮೋದಿ ಟ್ಯಾಗ್ ಟ್ರೆಂಡ್ ಮಾಡಲು ಯತ್ನಿಸಿದ್ದಾರೆ. ಈ ಮೂಲಕ ದೇಶದ ಪ್ರಧಾನಿ ವಿರುದ್ಧ ಪಿತೂರಿ ನಡೆಸಲು ಹಾಗೂ ಅಗೌರವ ತೋರಲು ಉದ್ದೇಶಪೂರ್ವಕ ಪ್ರಯತ್ನ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 

— Oviyaa (@OviyaaSweetz)

ದೇವೇಂದ್ರ ಕುಲ ವೆಲ್ಲಾಲಾರ್ ಸಮುದಾಯ, 40 ಲಕ್ಷ ಜನರ ಬೇಡಿಕೆಗೆ ಮೋದಿ ಗ್ರೀನ್ ಸಿಗ್ನಲ್!

ತಮಿಳುನಾಡು ಬಿಜೆಪಿ ಓವಿಯಾ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಿಸಿದೆ. ಇತ್ತ ಓವಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳಿಗೆ ಚಾಲನೆ ನೀಡಲು ತಮಿಳುನಾಡಿಗೆ ಭೇಟಿ ನೀಡಿದ್ದರು. ಫೆಬ್ರವರಿ 14 ರಂದು ಮೋದಿ ಚೆನ್ನೈಗೆ ಭೇಟಿ ನೀಡಿದ್ದರು. ಈ ಭೇಟಿಯನ್ನು ಓವಿಯಾ ಹೆಲನ್ ಗೋ ಬ್ಯಾಕ್ ಮೋದಿ ಎಂಬ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.

ತಮಿಳುನಾಡು ಮೂಲದ ಓವಿಯಾ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಮಿಂಚಿದ್ದರು. ಮಲೆಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ನಟಿಸಿರುವ ಓವಿಯಾ ವಿವಾದಗಳಲ್ಲೂ ಮುಂಚೂಣಿಯಲ್ಲಿದ್ದಾರೆ

 

click me!