ಚಡ್ಡಿಯೊಳಗಿತ್ತು ಒಂದೂವರೆ ಕೋಟಿ ಮೌಲ್ಯದ ಚಿನ್ನ: ಪೊಲೀಸರಿಗೆ ಶಾಕ್!

Published : Feb 15, 2021, 04:31 PM IST
ಚಡ್ಡಿಯೊಳಗಿತ್ತು ಒಂದೂವರೆ ಕೋಟಿ ಮೌಲ್ಯದ ಚಿನ್ನ: ಪೊಲೀಸರಿಗೆ ಶಾಕ್!

ಸಾರಾಂಶ

ಅಕ್ರಮ ಚಿನ್ನ ಸಾಗಾಟ| ಚಡ್ಡಿಯಲ್ಲಿ ಚಿನ್ನ ಬಚ್ಚಿಟ್ಟ ಆರೋಪಿಗಳು ಪೊಲೀಸರ ಬಲೆಗೆ| ಒಂದೂವರೆ ಕೋಟಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಆರೋಪಿಗಳು

ಲಕ್ನೋ(ಫೆ.15): ಚೌಧರಿ ಚರಣ್‌ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಹುದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಮಾಮೂಲಿ ಚೆಕ್ಕಿಂಗ್ ವೇಳೆ ನಾಲ್ವರು ಯಾತ್ರಿಗಳು ಒಂದೂವರೆ ಕೋಟಿ ಮೌಲ್ಯದ ಮೂರು ಕೆ. ಜಿ ಚಿನ್ನದೊಂದಿಗೆ ಸಿಕ್ಕಾಕೊಂಡಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು ಆರೋಪಿಗಳು ಚಿನ್ನವನ್ನು ಪೇಸ್ಟ್‌ನಂತೆ ತಮ್ಮ ಚಡ್ಡಿಯ ಬೆಲ್ಟ್‌ ಭಾಗದಲ್ಲಿ ಮುಚ್ಚಿಟ್ಟು ತರಲು ಯತ್ನಿಸಿದ್ದರೆನ್ನಲಾಗಿದೆ.

ಗುದನಾಳದಲ್ಲಿ 9 ಜನರಿಂದ 9 ಕೇಜಿ ಅಕ್ರಮ ಚಿನ್ನ ಸಾಗಣೆ!

ಎರಡೆರಡು ಅಂಡರ್‌ವೇರ್ ಧರಿಸಿದ್ದ ಆರೋಪಿಗಳು

ವಿಭಾಗದ ಉಪ ಆಯುಕ್ತೆ ನಿಹಾರಿಕಾ ಲಾಖಾ ಅನ್ವಯ ತಪಾಸಣಾಧಿಕಾರಿಗಳ ಕಣ್ತಪ್ಪಿಸಲು ಆರೋಪಿಗಳು ಎರಡೆರಡು ಚಡ್ಡಿ ಧರಿಸಿದ್ದರು. ಹೀಗಿದ್ದರೂ ನಾಲ್ವರು ಆರೋಪಿಗಳು ಸಿಕ್ಕಾಕೊಂಡಿದ್ದಾರೆ ಎಂದಿದ್ದಾರೆ.

ಮೂರೂವರೆ ಕೆ. ಜಿ ಚಿನ್ನದೊಂದಿಗೆ ಸಿಕ್ಕಾಕೊಂಡರು

ಮಯನ್ಮಾರ್‌ನಿಂದ ಅಕ್ರಮವಾಗಿ ಚಿನ್ನ ತರಲು ಯತ್ನಿಸುತ್ತಿದ್ದಬಿಹಾರ ಮೂಲದ ಇಬ್ಬರು ಸ್ಮಗ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ