ತಮಿಳುನಾಡಲ್ಲಿ Online Game ಮತ್ತೆ ನಿಷೇಧ: ಆನ್‌ಲೈನ್‌ ಜೂಜು, ಅದೃಷ್ಟದ ಆಟಗಳು ಬ್ಯಾನ್‌

Published : Oct 09, 2022, 08:50 AM ISTUpdated : Oct 09, 2022, 08:56 AM IST
ತಮಿಳುನಾಡಲ್ಲಿ Online Game ಮತ್ತೆ ನಿಷೇಧ: ಆನ್‌ಲೈನ್‌ ಜೂಜು, ಅದೃಷ್ಟದ ಆಟಗಳು ಬ್ಯಾನ್‌

ಸಾರಾಂಶ

ತಮಿಳುನಾಡಿನಲ್ಲಿ ಆನ್‌ಲೈನ್‌ ಗೇಮ್‌ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆನ್‌ಲೈನ್‌ ಜೂಜು, ಅದೃಷ್ಟದ ಆಟಗಳಿಗೆ ನಿಷೇಧ ಹೇರಲಾಗಿದ್ದು, ಹಣ ಕಟ್ಟದೆ ಆಡುವ ಗೇಮ್‌ಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. 

ಚೆನ್ನೈ: ಆನ್‌ಲೈನ್‌ ಜೂಜು (Online Betting) ಮತ್ತು ಅದೃಷ್ಟದ ಆಟಗಳ (ಗೇಮ್‌ ಆಫ್‌ ಚಾನ್ಸ್‌) (Game of Chance) ಮೇಲೆ ನಿಷೇಧ (Ban) ಹೇರಿ ಹಾಗೂ ಆನ್‌ಲೈನ್‌ ಆಟಗಳ ಮೇಲೆ ನಿಯಂತ್ರಣ ವಿಧಿಸಿ ತಮಿಳುನಾಡು (Tamil Nadu) ಸರ್ಕಾರ ಶನಿವಾರ ಸುಗ್ರೀವಾಜ್ಞೆ (Ordinance) ಹೊರಡಿಸಿದೆ. ಆದರೆ ಹಣ ಕಟ್ಟದೇ ಆಡುವ ಆನ್‌ಲೈನ್‌ ಆಟಗಳಿಗೆ ನಿಯಂತ್ರಿತ ಅನುಮತಿ ನೀಡಲು ನಿರ್ಧರಿಸಿದೆ ಹಾಗೂ ಅವುಗಳ ಮೇಲೆ ನಿಯಂತ್ರಣ ಹೇರಲು ಮತ್ತು ಸುಗ್ರೀವಾಜ್ಞೆ ಜಾರಿ ಮಾಡಲು ಆಲ್‌ಲೈನ್‌ ಗೇಮಿಂಗ್‌ ಪ್ರಾಧಿಕಾರ ಸ್ಥಾಪಿಸಲಾಗುವುದು ಎಂದು ಹೇಳಿದೆ. ನಿಯಮ ಉಲ್ಲಂಘಿಸಿದವರಿಗೆ 3 ತಿಂಗಳಿಂದ 3 ವರ್ಷದವರೆಗೆ ಜೈಲು ಶಿಕ್ಷೆ (Punishment) ವಿಧಿಸಲಾಗುತ್ತದೆ.

ಅಕ್ಟೋಬರ್ 1ರಂದು ರಾಜ್ಯಪಾಲ ಆರ್‌.ಎನ್‌. ರವಿ ಅವರು ‘ತಮಿಳುನಾಡು ಆನ್‌ಲೈನ್‌ ಜೂಜು ನಿಷೇಧ ಪ್ರಾಧಿಕಾರ ಹಾಗೂ ಆನ್‌ಲೈನ್‌ ಆಟಗಳ ನಿಯಂತ್ರಣ ಸುಗ್ರೀವಾಜ್ಞೆ 2022’ ಅನ್ನು ಹೊರಡಿಸಿದ್ದಾರೆ. ‘ಆನ್‌ಲೈನ್‌ ಜೂಜಾಟ ಹಲವಾರು ಕುಟುಂಬಗಳನ್ನು ನಾಶ ಮಾಡಿದ್ದು, ಹಲವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ. ಆನ್‌ಲೈನ್‌ ಆಟಗಳು ಗೀಳಾಗಿ ಪರಿಣಮಿಸುತ್ತಿದ್ದು ಸಾಮಾಜಿಕ ಸ್ವಾಸ್ಥ್ಯಕ್ಕೂ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ಈ ಸುಗ್ರೀವಾಜ್ಞೆಯ ಅವಶ್ಯಕತೆಯಿದೆ’ ಎಂದು ಸರ್ಕಾರ ಅಕ್ಟೋಬರ್‌ 3ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಆನ್‌ಲೈನ್ ಗೇಮ್‌ನಿಂದ ಗಳಿಸಿದ ಆದಾಯಕ್ಕೂ ತೆರಿಗೆ; ಐಟಿಆರ್-ಯು ಫೈಲ್ ಮಾಡದಿದ್ರೆ ಬೀಳುತ್ತೆ ದಂಡ

‘ರಾಜ್ಯ ಸರ್ಕಾರ ನಿಗದಿ ಪಡಿಸಿದ ದಿನದಿಂದ ಸುಗ್ರೀವಾಜ್ಞೆ ಜಾರಿಗೆ ಬರಲಿದೆ. ಸುಗ್ರೀವಾಜ್ಞೆಯಡಿ ನೀಡಲಾಗಿರುವ ಅಧಿಕಾರ ಚಲಾವಣೆ ಹಾಗೂ ನಿಗದಿ ಪಡಿಸಿದ ಕಾರ್ಯನಿರ್ವಹಿಸಲು ತಮಿಳುನಾಡು ಆನ್‌ಲೈನ್‌ ಗೇಮಿಂಗ್‌ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಲಾಗಿದೆ.

ಈ ಹಿಂದೆ ಅಣ್ಣಾಡಿಎಂಕೆ ಸರ್ಕಾರ ಆನ್‌ಲೈನ್‌ ಆಟ ನಿಷೇಧ ಹಾಗೂ ಪೊಲೀಸಿಂಗ್‌ ಕಾಯ್ದೆ ಜಾರಿಗೆ ತಂದಿತ್ತಾರದೂ ಅದನ್ನು 2021ರ ಆಗಸ್ಟ್‌ನಲ್ಲಿ ಮದ್ರಾಸ್‌ ಹೈಕೋರ್ಟ್‌ ರದ್ದು ಮಾಡಿತ್ತು. ಹೀಗಾಗಿ ಕಾಯ್ದೆಯಲ್ಲಿ ಈಗ ಮಾರ್ಪಾಡು ಮಾಡಿ ಸುಗ್ರೀವಾಜ್ಞೆ ಜಾರಿಗೆ ತರಲಾಗಿದೆ. ಇನ್ನು 6 ತಿಂಗಳಲ್ಲಿ ಈ ಕಾಯ್ದೆಗೆ ವಿಧಾನಸಭೆ ಅನುಮೋದನೆ ದೊರಕಬೇಕಿದ್ದು, ಆಗ ಕಾಯ್ದೆ ಶಾಶ್ವತವಾಗಿ ಜಾರಿಗೆ ಬರಲಿದೆ.

ಆನ್‌ಲೈನ್‌ ಆಟಕ್ಕೆ ಷರತ್ತಿನ ಅವಕಾಶ:
ಆನ್‌ಲೈನ್‌ ಜೂಜು ನಿಷೇಧಿಸಲಾಗಿದ್ದರೂ ಆನ್‌ಲೈನ್‌ ಆಟಕ್ಕೆ ಷರತ್ತಿನ ಅವಕಾಶ ನೀಡಲಾಗಿದೆ. ರಮ್ಮಿ, ಪೋಕರ್‌ ಮೊದಲಾದವುಗಳನ್ನು ಗುರುತಿಸಿ ಅವುಗಳಿಗೆ ಸ್ಥಳೀಯ ಮಟ್ಟದಲ್ಲಿ ನೋಂದಣಿ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ. ಆದರೆ ಇದರಲ್ಲಿ ಹಣ ಕಟ್ಟಿ ಆಡುವಂತಿಲ್ಲ.

ಇದನ್ನೂ ಓದಿ: Online Gameನಲ್ಲಿ ಕಳೆದುಕೊಂಡ ಹಣ ಕೊಡಿಸು, ಸವದತ್ತಿ ಯಲ್ಲಮ್ಮನಿಗೆ ಭಕ್ತನ ವಿಚಿತ್ರ ಹರಕೆ

ಹಣ ಕಟ್ಟುವ ಜೂಜಿಗೆ ನಿಷೇಧ:
ಆದರೆ, ಯಾವುದೇ ಬ್ಯಾಂಕ್‌, ಹಣಕಾಸು ಸಂಸ್ಥೆ ಅಥವಾ ಪೇಮೆಂಟ್‌ ಗೇಟ್‌ವೇ ಪೂರೈಕೆದಾರರು ಆನ್‌ಲೈನ್‌ ಜೂಜು ಅಥವಾ ಆಟಗಳ ಯಾವುದೇ ರೀತಿಯ ಹಣಕಾಸಿನ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಹಣ ಗಳಿಸುವ ಅವಕಾಶ ಸಿಗುವ (ಗೇಮ್ಸ್‌ ಆಫ್‌ ಚಾನ್ಸ್‌) ಆನ್‌ಲೈನ್‌ ಆಟ ಆಡುವುದನ್ನೂ ಆನ್‌ಲೈನ್‌ ಜೂಜಾಟದ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.

ಜೈಲು ಶಿಕ್ಷೆ, ದಂಡ:
ಈ ನಿಯಮವನ್ನು ಉಲ್ಲಂಘಿಸಿ ಆನ್‌ಲೈನ್‌ ಜೂಜಿನಲ್ಲಿ ತೊಡಗುವವರಿಗೆ 3 ತಿಂಗಳವರೆಗೆ ಜೈಲು ಶಿಕ್ಷೆ ಥವಾ 5000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆನ್‌ಲೈನ್‌ ಜೂಜಿನ ಬಗ್ಗೆ ಯಾವುದೇ ಮಾಧ್ಯಮದಲ್ಲಿ ಜಾಹೀರಾತು ನೀಡಿದ ವ್ಯಕ್ತಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 5 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.ಆನ್‌ಲೈನ್‌ ಜೂಜಾಟದ ಸೇವೆ ಒದಗಿಸಿ ನಿಬಂಧನೆಗಳನ್ನು ಉಲ್ಲಂಘಿಸಿದವರಿಗೆ 3 ವರ್ಷಗಳವರೆಗೆ ಜೈಲು ಅಥವಾ 10 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದು ಅಧಿಸೂಚನೆ ತಿಳಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!