ಹಬ್ಬದ ದಿನಗಳಲ್ಲಿ ಆನ್‌ಲೈನ್ ಫುಡ್ ಆರ್ಡರ್ ಬೇಡಿಕೆ ಜಾಸ್ತಿ. ಇನ್ನು ಟ್ರಾಫಿಕ್, ಮಳೆಯ ನಡುವೆ ಡೆಲಿವರಿ ಕೊಂಚ ವಿಳಂಬವಾಗುವುದು ಸಹಜ. ಹೀಗೆ ಕೊಂಚ ತಡವಾಗಿ ಸ್ಥಳಕ್ಕೆ ಆಗಮಿಸಿದ ಡೆಲಿವರಿ ಬಾಯ್‌ಗೆ ಅಚ್ಚರಿ ಕಾದಿತ್ತು.
ದೆಹಲಿ(ಅ.08): ಹಬ್ಬದ ಸೀಸನ್, ಸತತ ಮಳೆ, ಭಾರಿ ಟ್ರಾಫಿಕ್.. ಇದರ ನಡುವೆ ಆರ್ಡರ್ ಮಾಡಿದವರಿಗೆ ಫುಡ್ ಡೆಲಿವರಿ ಅತೀ ದೊಡ್ಡ ಸವಾಲು. ಅದರೂ ಫುಡ್ ಡೆಲಿವರ್ ಬಾಯ್ಸ್ ತಕ್ಕ ಸಮಯಕ್ಕೆ ಫುಡ್ ಡೆಲವರಿ ಮಾಡುತ್ತಾರೆ. ದೆಹಲಿಯಲ್ಲಿ ಇದೇ ಹಬ್ಬದ ಸೀಸನ್‌ನಲ್ಲಿ ಜೋಮ್ಯಾಟೋ ಬಾಯ್ ಫುಡ್ ಡೆಲಿವರಿ ಮಾಡಲು ತಡವಾಗಿದೆ. ಸರಿ ಸುಮಾರು ಒಂದು ಗಂಟೆ ತಡವಾಗಿದೆ. ಆಹಾರ ಪ್ಯಾಕೆಟ್ ಎತ್ತಿ ಓಡೋಡಿ ಬಂದ ಜೋಮ್ಯಾಟೋ ಡೆಲಿವರಿ ಬಾಯ್‌ಗೆ ಅಚ್ಚರಿ ಕಾದಿತ್ತು. ದೆಹಲಿ ವ್ಯಕ್ತಿ ಆರತಿ ಹಿಡಿದು ಜೋಮ್ಯಾಟೋ ಬಾಯ್ ಸ್ವಾಗತಿಸಿದ್ದಾರೆ. ಹಣೆಗೆ ತಿಲಕವಿಟ್ಟು ನಿಮಗಾಗಿ ಕಾಯುತ್ತಿದ್ದೇವೆ ಎಂಬ ಹಾಡನ್ನು ಹಾಡಿದ್ದಾರೆ. ಈ ಎಲ್ಲಾ ಘಟನೆಯನ್ನು ಕುಟುಂಬ ಸದಸ್ಯರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ದಿಲ್ಲಿಯ ಟ್ರಾಫಿಕ್ ನಡುವೆ, ಥ್ಯಾಂಕ್ಯೂ ಜೋಮ್ಯಾಟೋ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸಂಜೀವ್ ಕುಮಾರ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹಬ್ಬದ ಆವೃತ್ತಿ, ದೆಹಲಿಯಲ್ಲಿ ಸತತ ಮಳೆ, ಜೊತೆಗೆ ಭಾರಿ ಟ್ರಾಫಿಕ್‌ನಿಂದ ತಕ್ಕ ಸಮಯಕ್ಕೆ ಯಾರೂ ತಲುಪಿಲ್ಲ. ಈ ಕಾರಣಗಳಿಂದ ಜೋಮ್ಯಾಟೋ ಬಾಯ್ ಫುಡ್ ಡೆಲವರಿ 1 ಗಂಟೆ ತಡವಾಗಿದೆ. ಹಬ್ಬದ ಊಟ ಸವಿಯಲು ದೆಹಲಿಯ ಕುಟುಂಬ ಆರ್ಡರ್ ಮಾಡಿದ ಫುಡ್ ಬರುವಿಕೆಗೆ ಕಾದಿದೆ.
ಆಹಾರ ಹಿಡಿದು ಲೇಟ್ ಆಗಿ ಬಂದ ಸ್ವಿಗ್ಗಿ ಬಾಯ್: ಅಸಮಾಧಾನದಿಂದ ಬಾಗಿಲು ತೆಗೆದವನಿಗೆ ಶಾಕ್
ಜೋಮ್ಯಾಟೋ ಡೆಲಿವರಿ ಬಾಯ್ ಆಗಮಿಸುವಾಗಿ ಸರ್ಪ್ರೈಸ್ ನೀಡಲು ಈ ಕುಟುಂಬ ನಿರ್ಧರಿಸಿದೆ. ಈ ಮಳೆ, ಟ್ರಾಫಿಕ್ ನಡುವೆ ಆಹಾರ ಡೆಲಿವರಿ ಮಾಡುವ ಜೋಮ್ಯಾಟೋ ಬಾಯ್ ಆಗಮಿಸುತ್ತಿದ್ದಂತೆ ಆರತಿ ಎತ್ತಿ ಸ್ವಾಗತಿಸಿದ್ದಾರೆ. ಬಳಿಕ ಹಣೆಗೆ ಕುಂಕುಮ ಇಟ್ಟು ನಿಮವಾಗಿ ಕಾಯುತ್ತಿದ್ದೇವೆ ಎಂದು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಮೊದಲೇ ತಡವಾಗಿ ಬಂದ ಮುಜುಗರ ಡೆಲಿವರಿ ಬಾಯ್ ಮುಖದಲ್ಲಿ ಕಾಣುತ್ತಿತ್ತು. ಇದರ ನಡುವೆ ಇವರ ಆತ್ಮೀಯ ಸ್ವಾಗತ ನೋಡಿ ಡೆಲಿವರಿ ಬಾಯ್ ಮತ್ತಷ್ಟು ಮುಜುಗರಕ್ಕೀಡಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಡೆಲಿವರಿ ಬಾಯ್ ಸ್ಕೂಟರ್ ಕಳವು
ಉಡುಪಿ ಅಪಾರ್ಟ್‌ಮೆಂಟ್ ಬಳಿ ನಿಲ್ಲಿಸಿದ್ದ ಹೋಂ ಡೆಲಿವರಿ ಬಾಯ್‌ಯೊಬ್ಬರ ಸ್ಕೂಟರನ್ನು ಅಪರಿಚಿತ ಯುವಕ ಪಾರ್ಸೆಲ್ ಸಾಮಗ್ರಿ ಸಹಿತ ಕಳವು ಮಾಡಿದ ಘಟನೆ ಜ.31ರಂದು ನಡೆದಿದೆ. ದೂರುದಾರ ಗಣೇಶ ಎಂಬವರು ಅಂಬಲಪಾಡಿಯ ಇ-ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿದ್ದಾರೆ. ವಿದ್ಯೋದಯ ಶಾಲೆ ಬಳಿ ಮನೆಯೊಂದರ ಮುಂದೆ ಸ್ಕೂಟರ ನಿಲ್ಲಿಸಿ, ಪಾರ್ಸೆಲ್ ಕೊಡಲು ಹೋಗಿದ್ದು, ಹಿಂದಕ್ಕೆ ಬಂದಾಗ ಸ್ಕೂಟರ್ ಕಳವಾಗಿತ್ತು. ಅದರಲ್ಲಿ 8,299 ರು. ಮೌಲ್ಯದ ಮೊಬೈಲ…, 2,191 ರು. ಮೌಲ್ಯದ ಮಿಕ್ಸರ್ ಗ್ರೈಂಡರ್ ಹಾಗೂ ಇತರ ಪಾರ್ಸೆಲ್ ಸೇರಿ 20,000 ರು. ಮೌಲ್ಯದ ಸಾಮಗ್ರಿಗಳು ಕಳವಾಗಿವೆ. ಸ್ಕೂಟರ್ ಕಳವಿನ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.