ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ!

Published : Sep 22, 2020, 07:35 AM ISTUpdated : Sep 22, 2020, 01:57 PM IST
ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ!

ಸಾರಾಂಶ

ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ| ರಾಜ್ಯಸಭೆಗೆ ಗೃಹ ಖಾತೆ ರಾಜ್ಯ ಸಚಿವ ಕಿಶನ್‌ರೆಡ್ಡಿ ಲಿಖಿತ ಉತ್ತರ| ದಿಲ್ಲಿ ಪೊಲೀಸರಿಂದ 233 ತಬ್ಲೀಘಿಗಳ ಬಂಧನ| ಸರ್ಕಾರದ ಸೂಚನೆಗಳನ್ನು ತಬ್ಲೀಘಿಗಳು ಪಾಲಿಸಿರಲಿಲ್ಲ

ನವದೆಹಲಿ(ಸೆ.22): ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್‌ ಮರ್ಕಝ್‌ನಲ್ಲಿ ನಡೆದ ತಬ್ಲೀಘಿ ಜಮಾತ್‌ ಧರ್ಮಸಭೆಯಿಂದಾಗಿಯೇ ಹಲವು ಮಂದಿಗೆ ಕೊರೋನಾ ವ್ಯಾಪಿಸಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸೋಮವಾರ ತಿಳಿಸಿದೆ.

ತಬ್ಲಿಘಿಗಳಿಂದ ಎಷ್ಟು ಜನರಿಗೆ ಕೊರೋನಾ ಹರಡಿತು? ಲೆಕ್ಕ ಕೊಟ್ಟ ಕೇಂದ್ರ!

ಕೊರೋನಾಗೆ ಸಂಬಂಧಿಸಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ಹಲವು ಮಾರ್ಗಸೂಚಿ ಹಾಗೂ ಆದೇಶಗಳನ್ನು ಹೊರಡಿಸಿದ್ದವು. ಆದಾಗ್ಯೂ ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಬಳಕೆ ಮಾಡದೆ ಒಳಾಂಗಣದಲ್ಲಿ ಭಾರಿ ಸಂಖ್ಯೆಯ ಜನ ಹೆಚ್ಚಿನ ಅವಧಿಗೆ ಸೇರಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿಯೇ ಹಲವು ಮಂದಿಗೆ ಕೊರೋನಾ ಹರಡಲು ಕಾರಣವಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್‌ ರೆಡ್ಡಿ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ದೇಶದಿಂದ 9 ತಬ್ಲೀಘಿಗಳನ್ನ ಹೊರಹಾಕಿ: ಹೈಕೋರ್ಟ್‌

ದೆಹಲಿ ಪೊಲೀಸರು 233 ತಬ್ಲೀಘಿ ಜಮಾತ್‌ ಸದಸ್ಯರನ್ನು ಬಂಧಿಸಿದ್ದಾರೆ. ತಬ್ಲೀಘಿ ಜಮಾತ್‌ಗಳ ಕೇಂದ್ರ ಕಚೇರಿಯಿಂದ 2361 ಜನರನ್ನು ತೆರವುಗೊಳಿಸಲಾಗಿದೆ. ಜಮಾತ್‌ ಮುಖ್ಯಸ್ಥ ಮೌಲಾನಾ ಮೊಹಮದ್‌ ಸಾದ್‌ ವಿರುದ್ಧ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ