ತುಮಕೂರಿಗೆ ಕೇಂದ್ರದಿಂದ ಭರ್ಜರಿ ಕೊಡುಗೆ : ಸೃಷ್ಟಿಯಾಗಲಿದೆ ಸಾವಿರಾರು ಉದ್ಯೋಗ

By Kannadaprabha News  |  First Published Sep 22, 2020, 7:25 AM IST

ತುಮಕೂರಿನಲ್ಲಿ ಶೀಘ್ರವೇ ಕೈಗಾರಿಕಾ ವಲಯ ತಲೆ ಎತ್ತಲಿದ್ದು, ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯವು ಸಂಪುಟದ ಅನುಮತಿ ಕೋರಲಿದೆ.


ನವದೆಹಲಿ (ಸೆ.22): ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ (ಸಿಬಿಐಸಿ) ಯೋಜನೆಯಡಿ ಬರುವ ತುಮಕೂರು ಔದ್ಯೋಗಿಕ ವಲಯದ ಅಭಿವೃದ್ಧಿಗೆ ಶೀಘ್ರದಲ್ಲೇ ಕೇಂದ್ರ ವಾಣಿಜ್ಯ ಸಚಿವಾಲಯವು ಸಚಿವ ಸಂಪುಟದ ಅನುಮೋದನೆ ಕೋರಲಿದೆ.

1,736 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿರುವ ಈ ಕೈಗಾರಿಕಾ ವಲಯಕ್ಕೆ ಈಗಾಗಲೇ ರಾಷ್ಟ್ರೀಯ ಔದ್ಯೋಗಿಕ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ಜಾರಿ ಟ್ರಸ್ಟ್‌ (ಎನ್‌ಐಸಿಡಿಐಟಿ) ಅನುಮೋದನೆ ನೀಡಿದೆ. ಶೀಘ್ರದಲ್ಲೇ ಇದರ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

Tap to resize

Latest Videos

ಮಕ್ಕಳಿಗೆ ಮನಿ ಮ್ಯಾನೇಜ್‌ಮೆಂಟ್: ವಾರನ್‌ ಬಫೆಟ್‌ ಹೇಳೋದೇನು? ...

ತುಮಕೂರಿನ ಜೊತೆಗೆ ಉತ್ತರ ಪ್ರದೇಶದ ಮಲ್ಟಿ-ಮೋಡಲ್‌ ಲಾಜಿಸ್ಟಿಕ್‌ ಹಬ್‌ ಮತ್ತು ಆಂಧ್ರಪ್ರದೇಶದ ಔದ್ಯೋಗಿಕ ವಲಯಕ್ಕೂ ಅನುಮೋದನೆ ಕೋರಲಾಗುತ್ತದೆ. ಸದ್ಯ ದೇಶದಲ್ಲಿ 11 ಔದ್ಯೋಗಿಕ ಕಾರಿಡಾರ್‌ಗಳ ನಿರ್ಮಾಣ ಯೋಜನೆ ವಿವಿಧ ಹಂತದಲ್ಲಿದ್ದು, ಅದರಲ್ಲಿ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ (ಸಿಬಿಐಸಿ), ಬೆಂಗಳೂರು-ಮುಂಬೈ ಇಂಡಸ್ಟ್ರಿಯಲ್‌ ಕಾರಿಡಾರ್‌ (ಬಿಎಂಐಸಿ) ಹಾಗೂ ಹೈದರಾಬಾದ್‌-ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ (ಎಚ್‌ಬಿಐಸಿ) ಕೂಡ ಸೇರಿವೆ.

click me!