
ನವದೆಹಲಿ/ ಜ್ಯೂರಿಚ್: ಸ್ವಿಜರ್‌ಲೆಂಡ್‌ನಲ್ಲಿರುವ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಬಂಡವಾಳದ ಪ್ರಮಾಣ 2021ಕ್ಕೆ ಹೋಲಿಸಿದರೆ ಶೇ.11ರಷ್ಟುಕುಸಿತ ಕಂಡಿದ್ದು, ಪ್ರಸ್ತುತ 30 ಸಾವಿರ ಕೋಟಿ ರು.ಗೆ ಇಳಿಕೆಯಾಗಿದೆ ಎಂದು ಬ್ಯಾಂಕ್‌ನ ವಾರ್ಷಿಕ ದತ್ತಾಂಶದಿಂದ ತಿಳಿದು ಬಂದಿದೆ. 2021ರಲ್ಲಿ ಭಾರತೀಯರು, ಭಾರತ ಮೂಲದ ಬ್ರಾಂಚ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಂಡವಾಳ 35 ಸಾವಿರ ಕೋಟಿ ರು.ಗೆ ಏರಿಕೆಯಾಗಿತ್ತು. ಇದು 14 ವರ್ಷಗಳಲ್ಲೇ ಗರಿಷ್ಠ ಬಂಡವಾಳ ಸಂಗ್ರಹ ಎನಿಸಿಕೊಂಡಿತ್ತು. ಆದರೆ ಇದೀಗ ಠೇವಣಿಯ ಪ್ರಮಾಣ ಕುಸಿತ ಕಂಡಿರುವುದರಿಂದ ಇದು 30 ಸಾವಿರ ಕೋಟಿ ರು.ಗೆ ಇಳಿಕೆಯಾಗಿದೆ. 2006ರಲ್ಲಿ ಸಾರ್ವಕಾಲಿಕ ಗರಿಷ್ಠ 60 ಸಾವಿರ ಕೋಟಿ ರು.ನಷ್ಟುಭಾರತೀಯರ ಹಣ ಸ್ವಿಸ್ ಬ್ಯಾಂಕ್‌ನಲ್ಲಿತ್ತು.
ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.3: ಫಿಚ್
ನವದೆಹಲಿ: ಭಾರತದ ಜಿಡಿಪಿ ಬೆಳವಣಿಗೆ ಬರುವ 2024ರ ಹಣಕಾಸಿನ ವರ್ಷದಲ್ಲಿ ಶೇ.6.3ರಷ್ಟುಬೆಳವಣಿಗೆಯಾಗಲಿದೆ ಇದು ಅತ್ಯಂತ ವೇಗ ಪಡೆದುಕೊಳ್ಳಲಿದೆ ಎಂದು ಜಾಗತಿಕ ರೇಟಿಂಗ್ ಏಜೆನ್ಸಿ ಫಿಚ್ (Global rating agency Fitch) ಭವಿಷ್ಯ ನುಡಿದಿದೆ. ಮಾರ್ಚ್‌ನಲ್ಲಿ ಭಾರತದ ಜಿಡಿಪಿ ಶೇ.6ರಷ್ಟು ಮಾತ್ರ ಪ್ರಗತಿ ಸಾಧಿಸಲಿದೆ ಎಂದು ಫಿಚ್ ಹೇಳಿತ್ತು. ಆದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬೆಳವಣಿಗೆ ಪ್ರಗತಿಗೆ ಬಲ ನೀಡಿದೆ ಎಂದು ಈಗ ಫಿಚ್ ಹೇಳಿದ್ದು, ಬೆಳವಣಿಗೆಗೆ ಇದು ಪ್ರಮುಖ ಕಾರಣವಾಗಲಿದೆ ಎಂದಿದೆ. ಈ ವರ್ಷ ಮೂಲಭೂತ ಸೌಕರ್ಯ ವಲಯಗಳಲ್ಲಿ ಸಾಕಷ್ಟು ಖರ್ಚು ಮಾಡಲಾಗಿದೆ. ಇದು ಈ ಪ್ರಗತಿಗೆ ಪೂರಕವಾಗಲಿದೆ ಎಂದೂ ಅದು ನುಡಿದಿದೆ. ಈ ವರ್ಷದ ಮೊದಲ ಹಣಕಾಸಿನ ಅವಧಿಯಲ್ಲಿ ಆರ್‌ಬಿಐ ನಿರೀಕ್ಷೆ ಮಟ್ಟ ದಾಟಿ ಶೇ.6.1ರಷ್ಟು ಬೆಳವಣಿಗೆ ಆಗಿತ್ತು. ಹೀಗಾಗಿ ಈ ವರ್ಷದ ಜಿಡಿಪಿ ಶೇ.6.5ರ ದರದಲ್ಲಿ ಪ್ರಗತಿ ಕಾಣಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಪತನದ ಭೀತಿಯಿಂದ ಪಾರಾದ ಸ್ವಿಜರ್ಲೆಂಡ್ ಮೂಲದ ಬ್ಯಾಂಕ್
ಕೋವಿನ್ ಮಾಹಿತಿ ಸೋರಿಕೆ: ಅಪ್ರಾಪ್ತ ಸೇರಿ ಬಿಹಾರದ ಇಬ್ಬರ ಸೆರೆ
ನವದೆಹಲಿ: ಸರ್ಕಾರದ ಕೋವಿನ್ ಪೋರ್ಟಲ್‌ನಿಂದ ಕೋವಿಡ್ ಲಸಿಕೆ ಪಡೆದವರ ಮಾಹಿತಿ ಸೋರಿಕೆಯಾಗಿ, ಪೋರ್ಟಲ್ ಹ್ಯಾಕ್ ಆಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಿಹಾರ ಮೂಲದ ಓರ್ವ ವ್ಯಕ್ತಿ ಮತ್ತು ಒಬ್ಬ ಅಪ್ರಾಪ್ತನನ್ನು ಬಂಧಿಸಲಾಗಿದೆ. ವ್ಯಕ್ತಿಯು ಟೆಲಿಗ್ರಾಮ್ ಆ್ಯಪ್ (Teligram App) ಬಳಸಿ ಕೋವಿನ್‌ನ ದತ್ತಾಂಶಗಳನ್ನು ಅನಧಿಕೃತ ವಾಗಿ ಸೋರಿಕೆ ಮಾಡಿದ್ದರು. ಬಂಧಿತರಲ್ಲಿ ಒಬ್ಬನ ತಾಯಿ ವೈದ್ಯಕೀಯ ಸಿಬ್ಬಂದಿಯಾಗಿದ್ದು, ಆಕೆ ಕೋವಿನ್ ಖಾತೆಯ ವೆಬ್ಸೈಟ್ನ ಪಾಸ್ವರ್ಡ್ ಬಳಸಿಕೊಂಡು ಅದರಲ್ಲಿನ ಮಾಹಿತಿ ಕದ್ದಿದ್ದರು ಹಾಗೂ ಟೆಲಿಗ್ರಾಂನಲ್ಲಿ ಮಾಹಿತಿ ಸೋರಿಕೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇತ್ತೀಚೆಗೆ ಕೋವಿನ್ನಲ್ಲಿನ ಕೆಲವರ ಮಾಹಿತಿ ಸೋರಿಕೆ ಆಗಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಜನರ ವೈಯಕ್ತಿಕ ಮಾಹಿತಿ ಬಗ್ಗೆ ಸುರಕ್ಷತೆ ಇಲ್ಲ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿದ್ದವು. ಆದರೆ ಪೋರ್ಟಲ್ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳಿತ್ತು.
ಇಲ್ಲಿದೆ 100 ಬೋಗಿಗಳ ವಿಶ್ವದ ಅತಿ ಉದ್ದದ ರೈಲು... ದಾಖಲೆ ಬರೆದ ಸ್ವಿಸ್ ಸಂಸ್ಥೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ