ಸನಾತನ ಧರ್ಮದ ಮೇಲೆ ಬ್ರಿಟಿಷರ ದಾಳಿಗೆ ಸಹಾಯ ಮಾಡಿದ್ದು ಕಾರ್ಲ್‌ಮಾರ್ಕ್ಸ್‌: ತಮಿಳುನಾಡು ರಾಜ್ಯಪಾಲ

Published : Jun 23, 2023, 11:21 AM ISTUpdated : Jun 23, 2023, 11:22 AM IST
ಸನಾತನ ಧರ್ಮದ ಮೇಲೆ ಬ್ರಿಟಿಷರ ದಾಳಿಗೆ ಸಹಾಯ ಮಾಡಿದ್ದು ಕಾರ್ಲ್‌ಮಾರ್ಕ್ಸ್‌: ತಮಿಳುನಾಡು ರಾಜ್ಯಪಾಲ

ಸಾರಾಂಶ

ಜಗತ್ತಿನಲ್ಲಿ ಇಂದು ಆಗುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಯಾವುದಾದರೂ ದೇಶಕ್ಕಿದ್ದರೆ ಅದು ಭಾರತಕ್ಕೆ ಮಾತ್ರ ಎಂದು ತಮಿಳುನಾಡು ರಾಜ್ಯಪಾಲ ಆರ್‌ಎನ್‌ ರವಿ ಹೇಳಿದ್ದಾರೆ.  

ಕಡಲೂರ್‌ (ಜೂ.23): ಇಂದು ದೇಶದ ಬಹುತೇಕ ಯುವ ಜನತೆಗೆ ಸನಾತನ ಧರ್ಮದ ಬಗ್ಗೆ ತಪ್ಪು ಕಲ್ಪನೆಗಳಿವೆ. ಸನಾತನ ಧರ್ಮದ ಕುರಿತಾಗಿ ಇರುವ ನಿರ್ಲಕ್ಷ್ಯ ಹಾಗೂ ಜ್ಞಾನದ ಕೊರತೆಯೂ ಇದಕ್ಕೆ ಕಾರಣ. ಸನಾತನ ಧರ್ಮದ ಮೇಲೆ ಬ್ರಿಟಿಷರು ದಾಳಿ ಮಾಡಲು ಸಹಾಯ ಮಾಡಿದ್ದು ಕಾರ್ಲ್‌ ಮಾರ್ಕ್ಸ್‌ ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಹೇಳಿದ್ದಾರೆ. ಕಡಲೂರು ಜಿಲ್ಲೆಯಲ್ಲಿ ಬುಧವಾರ ನಡೆದ ವಲ್ಲಲರ 200ನೇ ಜನ್ಮ ದಿನಾಚರಣೆಯಲ್ಲಿ ರಾಜ್ಯಪಾಲರು ಮಾತನಾಡುವ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಗತ್ತಿನಲ್ಲಿ ಭಾರತದ ಅಸ್ಮಿತೆ ಏನಾದರೂ ಇದ್ದರೆ ಅದು ಸನಾತನ ಧರ್ಮದಿಂದ ಮಾತ್ರ. ಅದರೊಂದಿಗೆ ಇದೇ ಧರ್ಮದಿಂದ ಕವಲುಗಳಾಗಿರುವ ಸಾಕಷ್ಟು ಧರ್ಮಗಳು ಯಾವುದೇ ಸಂಘರ್ಷವಿಲ್ಲದೆ ಭಾರತದಲ್ಲಿ ಇದ್ದವು. ಆದರೆ, "ಅವರು (ಬ್ರಿಟಿಷರು) ತಮ್ಮ ಸಿದ್ಧಾಂತಗಳು ಮತ್ತು ನಂಬಿಕೆಗಳನ್ನು ಹೊರಗಿನಿಂದ ತರಲು ಪ್ರಾರಂಭಿಸಿದಾಗ ಸಂಘರ್ಷ ಪ್ರಾರಂಭವಾಯಿತು" ಎಂದು ತಿಳಿಸಿದ್ದಾರೆ.

ನಾನು ಯಾವಾಗಲೂ ತಮಿಳುನಾಡನ್ನು ಭಾರತದ ಆಧ್ಯಾತ್ಮಿಕ ರಾಜಧಾನಿ ಎಂದು ಪರಿಗಣಿಸುತ್ತೇನೆ ಎಂದು ಹೇಳಿದರು. “ಇದು ನಮ್ಮ ಸನಾತನ ಅಧ್ಯಾತ್ಮ (ಧರ್ಮ) ಉಳಿದುಕೊಂಡಿರುವ ಸ್ಥಳವಾಗಿದೆ ಮತ್ತು ಅದರ ಶುದ್ಧ ರೂಪದಲ್ಲಿ ಹಲವಾರು ಸಾವಿರ ವರ್ಷಗಳಿಂದ ಸಂರಕ್ಷಿಸಲಾಗಿದೆ. ಕಾರ್ಲ್ ಮಾರ್ಕ್ಸ್‌ರಂತಹವರನ್ನು ನಾವೂ ಪ್ರೋತ್ಸಾಹಿಸಿದ್ದೇವೆ. ಅವರ ರಾಜಕೀಯ ತತ್ವದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದರು.

1852ರಲ್ಲಿ ಕಾರ್ಲ್‌ ಮಾರ್ಕ್ಸ್‌ ನ್ಯೂ ಯಾರ್ಕ್ ಡೈಲಿ ಟ್ರಿಬ್ಯೂನ್‌ಗೆ ಪ್ರಬಂಧಗಳನ್ನು ಬರೆಯಲು ಆರಂಭಿಸಿದ್ದರು. ಸಸ್ಯಗಳು ಮತ್ತು ಪ್ರಾಣಿಗಳನ್ನು ಪೂಜಿಸುವ ಭಾರತದ ಸಾಮಾಜಿಕ ವ್ಯವಸ್ಥೆಯನ್ನು  ನಿರ್ನಾಮ ಮಾಡುವ ನಿಟ್ಟಿನಲ್ಲಿ ಬ್ರಿಟಿಷರಿಗೆ ಮನವಿ ಮಾಡಲು ಆರಂಭ ಮಾಡಿದ್ದರು. ಇದರ ಹಿನ್ನಲೆಯಲ್ಲಿ ಬ್ರಿಟಿಷರು ಭಾರತವನ್ನು ಮತ್ತು ಅದರ ಅಸ್ಮಿತೆಯನ್ನು ನಾಶಮಾಡಲು ಪ್ರಯತ್ನವನ್ನೂ ಆರಂಭಿಸಿದ್ದರು. ಮಾಜವು ದುರಾಚಾರಗಳಿಂದ ತುಂಬಿರುವಾಗ, ಮಹಾನ್ ಸಂತ ವಲ್ಲಲರು ಕಾಣಿಸಿಕೊಂಡು ನಮಗೆ ತಮ್ಮದೇ ಆದ ಸರಳ ರೀತಿಯಲ್ಲಿ ಎಲ್ಲವನ್ನೂ ಕಲಿಸಿದರು' ಎಂದು ರವಿ ಹೇಳಿದ್ದಾರೆ.

ತಮಿಳ್ನಾಡಲ್ಲಿ ಮತ್ತೆ ಆನ್‌ಲೈನ್‌ ಜೂಜು ನಿಷೇಧ ಕಾಯ್ದೆ ಜಾರಿ: ರಾಜ್ಯಪಾಲರಿಂದ ಸಹಿ

ಹವಾಮಾನ ಬದಲಾವಣೆ, ಯುದ್ಧ, ಸಂಘರ್ಷ, ಹಸಿವು ಮತ್ತು ಬಡತನದಂತಹ ಬಿಕ್ಕಟ್ಟಿನಿಂದ ಜಗತ್ತನ್ನು ರಕ್ಷಿಸುವ ಯಾವುದಾದರೂ ಒಂದು ದೇಶವಿದ್ದರೆ ಅದು ಭಾರತ ಮಾತ್ರ ಎಂದು ರವಿ ಹೇಳಿದರು.

ತಮಿಳುನಾಡಿನಲ್ಲಿ ವ್ಯಾಪಕ ದಲಿತ ದೌರ್ಜನ್ಯ: ರಾಜ್ಯಪಾಲ ರವಿ ಆರೋಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..