ಸ್ವಚ್ಛ ಭಾರತ 21ನೇ ಶತಮಾನದ ದೊಡ್ಡ ಯಶಸ್ವಿ ಆಂದೋಲನ:ಮೋದಿ

By Kannadaprabha NewsFirst Published Oct 3, 2024, 7:52 AM IST
Highlights

ಪ್ರಧಾನಿ ಮೋದಿ ಸ್ವಚ್ಛ ಭಾರತ್ ಮಿಷನ್ ಅನ್ನು 21 ನೇ ಶತಮಾನದ ಅತ್ಯಂತ ಯಶಸ್ವಿ ಜನರ ಆಂದೋಲನ ಎಂದು ಶ್ಲಾಘಿಸಿದ್ದಾರೆ, ಇದು ಆರೋಗ್ಯ ಮತ್ತು ಸಮೃದ್ಧಿಯ ಹೊಸ ಮಾರ್ಗವನ್ನು ಸೃಷ್ಟಿಸಿದೆ.

ನವದೆಹಲಿ: ಸ್ವಚ್ಛ ಭಾರತ್ ಮಿಷನ್ ಅನ್ನು 21 ನೇ ಶತಮಾನದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನರ ಆಂದೋಲನ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಶ್ಲಾಘಿಸಿದ್ದಾರೆ ಆರೋಗ್ಯ, ಸಮೃದ್ಧಿಯ ಹೊಸ ಮಾರ್ಗ ಎಂದು ಬಣ್ಣಿಸಿದ್ದಾರೆ. 10 ವರ್ಷಗಳ ನೆನಪಿನ ಸಮಾರಂಭದಲ್ಲಿ ಮಾತನಾಡಿದ ಮೋದಿ, ಸಾಮೂಹಿಕ ಭಾಗವಹಿಸುವಿಕೆ ಅಭಿಯಾನವು ಸಮೃದ್ಧಿಯ ಹೊಸ ಮಾರ್ಗವಾಗಿ ಗೋಚರಿಸಿದೆ. ನೀವೆಲ್ಲರೂ ಸ್ವಚ್ಛ ಭಾರತ್ ಮಿಷನ್‌ನನ್ನು ಯಶಸ್ವಿಗೊಳಿಸಿದ್ದೀರಿ ಎಂದು ಹರ್ಷಿಸಿದರು. ಆಂದೋಲನಕ್ಕೆ 10 ವರ್ಷ ಸಂದಿರುವ ಕಾರಣ ಈಗ 'ಸ್ವಚ್ಛತಾ ಪಾಕ್ಷಿಕ' ಆರಂಭಿಸಲಾಗಿದ್ದು, 15 ದಿನದಲ್ಲಿ 27 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿವೆ.  28 ಕೋಟಿ ಮಂದಿ ಇದ್ದರು ಎಂದು ಶ್ಲಾಘಿಸಿದರು. 

'ಈ ರಾಷ್ಟ್ರೀಯ ಪ್ರಯತ್ನದಲ್ಲಿ ಸಿಎಂಗಳು, ಸಚಿವರು ಮತ್ತು ಇತರ ಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ನಿರಂತರ ಪ್ರಯತ್ನಗಳು ಮಾತ್ರ ಸ್ವಚ್ಛ ಭಾರತಕ್ಕೆ ಕಾರಣವಾಗಬಹುದು' ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಿ ಅವರು ಸ್ವಚ್ಛ ಭಾರತ್ ಅಮೃತ್ 2.0 ಮಿಷನ್ ಅಡಿ 10 ಸಾವಿರ ಕೋಟಿ ಯೋಜನೆಗಳನ್ನು ಉದ್ಘಾಟಿಸಿದರು. ಇದರಲ್ಲಿ ಹಲವಾರು ರಾಜ್ಯಗಳಲ್ಲಿ ನೀರು ಮತ್ತು ಸಂಸ್ಕರಣಾ ಘಟಕಗಳು ಸೇರಿವೆ. 

Latest Videos

1,000 ವರ್ಷಗಳ ನಂತರವೂ ಜನರು 21 ನೇ ಶತಮಾನದ ಭಾರತದ ಬಗ್ಗೆ ಮಾತನಾಡುವಾಗ, ಅವರು ಖಂಡಿತವಾಗಿಯೂ ಸ್ವಚ್ಛ ಭಾರತ್ ಮಿಷನ್ ಅನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಹಿಂದಿನ ಸರ್ಕಾ ರಗಳು ಮೂಲಭೂತ ನೈರ್ಮಲ್ಯವನ್ನು ನಿರ್ಲಕ್ಷಿಸಿದ್ದವು. ನೈರ್ಮಲೀಕರಣದ ಪ್ರತಿಪಾದಕರಾಗಿದ್ದ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ಓಟಿಗೆ ಬಳಸಿಕೊಂಡವೇ ವಿನಾ ಅವರ ಆದರ್ಶಗಳನ್ನು ಪಾಲಿಸಲಿಲ್ಲ. ಅವರು ಎಂದಿಗೂ ಕೊಳಕು ಮತ್ತು ಶೌಚಾಲಯದ ಅಭಾವವನ್ನು ರಾಷ್ಟ್ರೀಯ ಸಮಸ್ಯೆಗಳೆಂದು ಪರಿಗಣಿಸಲಿಲ್ಲ ಎಂದು ಟೀಕಿಸಿದರು. 

ಅಪ್ಪನ ಚಿತೆಗೆ ಕೊಳ್ಳಿ ಇಡೋಕೆ ಎರಡೂವರೆ ಲಕ್ಷ ಕೇಳಿದ ಮಗ- ಅಮ್ಮ ಗೋಳಾಡಿ ಬೇಡಿಕೊಂಡ್ರೂ ಕೇಳದ ಮಗ

'ದಶಕದ ಹಿಂದೆ ಶೇ.60ಕ್ಕೂ ಹೆಚ್ಚು ಜನಸಂಖ್ಯೆಯು ಅನಿವಾರ್ಯವಾಗಿ ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿತ್ತು. ಇದು ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಅವಮಾನ ಮಹಿಳೆಯರಿಗೆ ಅನಾನುಕೂಲತೆಯ ಪ್ರಮುಖ ಮೂಲ ಇದಾಗಿತ್ತು. ಪ್ರಧಾನಿಗಳ ಮೊದಲ ಕೆಲಸ ಶ್ರೀಸಾಮಾನ್ಯನ ಜೀವನವನ್ನು ಸುಲಭಗೊಳಿಸುವುದು. ಹೀಗಾಗಿ ನಾನು ಅಧಿಕಾರಕ್ಕೆ ಬಂದ ನಂತರ ಶೌಚಾಲಯಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮಾತನಾಡಿದೆ.  ಇಂದು ನಾವು ಫಲಿತಾಂಶಗಳನ್ನು ನೋಡುತ್ತಿದ್ದೇವೆ. 10 ವರ್ಷದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಆಗಿವೆ ಎಂದರು. 

ತಮ್ಮ ಕ್ರಮಕ್ಕೆ ಪೂರಕವಾಗಿ ಪ್ರಕಟವಾದ ಅಧ್ಯಯನ ವರದಿಗಳನ್ನು ಉಲ್ಲೇಖಿಸಿದ ಪ್ರಧಾನಿ, 'ಸ್ವಚ್ಚ ಭಾರತ್ ಮಿಷನ್ ವಾರ್ಷಿಕವಾಗಿ 60,000 ರಿಂದ 70,000 ಮಕ್ಕಳ ಜೀವವನ್ನು ಉಳಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಅಧ್ಯಯನ ತೋರಿಸಿದೆ. ಶೇ.90 ಮಹಿಳೆಯರು ಮನೆಯಲ್ಲೇ ಶೌಚಾಲಯ ಇರುವ ಕಾರಣ ಸುರಕ್ಷತಾ ಭಾವನೆ ಹೊಂದಿದ್ದೇವೆ ಎಂದು ಯುನಿಸೆಫ್ ವರದಿಯಲ್ಲಿ ಹೇಳಿದ್ದಾರೆ ಎಂದರು.

ಚೀನಾಕ್ಕೆ ಶಾಕ್ ಕೊಡಲು ಭಾರತದ ಸಿದ್ಧತೆ; ಪೇಜರ್ ಸ್ಪೋಟ ಬೆನ್ನಲ್ಲೇ ಅಲರ್ಟ್ !

Marking with India's Yuva Shakti! Have a look... pic.twitter.com/PYKopNeBoM

— Narendra Modi (@narendramodi)
click me!