ಚೀನಾಕ್ಕೆ ಶಾಕ್ ಕೊಡಲು ಭಾರತದ ಸಿದ್ಧತೆ; ಪೇಜರ್ ಸ್ಪೋಟ ಬೆನ್ನಲ್ಲೇ ಅಲರ್ಟ್ !

By Kannadaprabha News  |  First Published Oct 3, 2024, 7:18 AM IST

ಲೆಬನಾನ್‌ನಲ್ಲಿ ನಡೆದ ಪೇಜರ್ ಸ್ಫೋಟಗಳ ಬೆನ್ನಲ್ಲೇ ಭಾರತ ಸರ್ಕಾರವು ವಿದೇಶಿ ಕಣ್ಗಾವಲು ಉಪಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಚೀನಾದ ಕಂಪನಿಗಳಿಂದ ಭದ್ರತಾ ಬೆದರಿಕೆ ಇದೆ ಎಂಬ ಕಾರಣಕ್ಕೆ ಕಣ್ಗಾವಲು ಮಾರುಕಟ್ಟೆಯಲ್ಲಿ ನಿರ್ಬಂಧ ಹೇರುವ ಸಾಧ್ಯತೆ ಇದೆ.


ನವದೆಹಲಿ: ಲೆಬನಾನ್‌ನಲ್ಲಿ ಇತ್ತೀಚಿನ ಸಂಘಟಿತ ಪೇಜರ್ ಸ್ಫೋಟಗಳು ಸಂಭವಿಸಿದ ಬೆನ್ನಲ್ಲೇ ಭಾರತ ಸರ್ಕಾರ ಎಚ್ಚೆತ್ತಿದೆ. ವಿದೇಶದಲ್ಲಿ ಸಿದ್ಧವಾದ ಇಂಥ ಉಪಕರಣಗಳು ಭಾರತದ ಭದ್ರತೆಯ ಮೇಲೆ ದುಷ್ಪರಿಣಾಮ ಬೀರಬಲ್ಲವು ಎಂದು ಅನುಮಾನ ವ್ಯಕ್ತಪಡಿಸಿರುವ ಭಾರತ ಸರ್ಕಾರವು ಸಿಸಿ ಕ್ಯಾಮೆರಾದಂಥ ‘ಕಣ್ಗಾವಲು ಮಾರುಕಟ್ಟೆ’ಯಲ್ಲಿ ವಿದೇಶಿ ಉಪಕರಣಗಳ (ಅದರಲ್ಲೂ ವಿಶೇಷವಾಗಿ ಚೀನಾ ಉಪಕರಣ) ಮೇಲೆ ನಿರ್ಬಂಧ/ನಿಯಂತ್ರಣ ಹೇರಲು ಮುಂದಾಗಿದೆ.

ಈ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ಪೇಜರ್ ಸ್ಫೋಟಗಳ ಬಳಿಕ ಭಾರತ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಿದೆ, ಸರ್ಕಾರದ ಕಣ್ಗಾವಲು ಕ್ಯಾಮೆರಾ ನೀತಿಯು ಅ.8 ರಂದು ಜಾರಿಗೆ ಬರುವ ಸಾಧ್ಯತೆಯಿದೆ, ಇದು ಮಾರುಕಟ್ಟೆಯಿಂದ ಚೀನಾದ ಕಂಪನಿಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ ಮತ್ತು ಭಾರತೀಯ ಕಂಪನಿಗಳಿಗೆ ಪ್ರಯೋಜನವನ್ನು ನೀಡುತ್ತದೆ’ ಎಂದಿದ್ದಾರೆ.

Latest Videos

undefined

ಕಚೇರಿಗೆ ಬಂದ ಕೆಲ ಸಮಯದಲ್ಲೇ ಯುವಕ ಸಾವು: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೊನೆಕ್ಷಣ

ಸಂಶೋಧನಾ ವಿಶ್ಲೇಷಕ ವರುಣ್ ಗುಪ್ತಾ ಪ್ರತಿಕ್ರಿಯಿಸಿ, ‘ಪ್ರಸ್ತುತ, ಸಿಪಿ ಪ್ಲಸ್‌, ಹಿಕಿವಿಷನ್‌ ಮತ್ತು ದಹುವಾ ಎಂಬ ಕಂಪನಿಗಳು ಭಾರತ ಕಣ್ಗಾವಲು ಮಾರುಕಟ್ಟೆಯಲ್ಲಿ ಶೇ.60ರಷ್ಟು ಪಾಲು ಹೊಂದಿವೆ. ಈ ಪೈಕಿ ಸಿಪಿ ಪ್ಲಸ್‌ ಮಾತ್ರ ಭಾರತದ್ದು. ಉಳಿದವು ಎಎಡೂ ಚೀನೀ ಕಂಪನಿಗಳು. ರಾಷ್ಟ್ರೀಯ ಭದ್ರತೆಗೆ ಚೀನೀ ಕಂಪನಿಗಳು ಅಪಾಯ ಎಂಬ ಕಾರಣಕ್ಕೆ ಅಮೆರಿಕದಲ್ಲಿ ಅವನ್ನು ನಿಷೇಧಿಸಲಾಗಿದೆ. ಭಾರತದಲ್ಲೂ ಇದೇ ರೀತಿಯ ಕ್ರಮಗಳ ಸಾಧ್ಯತೆ ಇದೆ’ ಎಂದಿದ್ದಾರೆ.

ಇರಾನ್‌- ಇಸ್ರೇಲ್ ವಾರ್: ಯುದ್ಧ ಭಾರತದ ಮಧ್ಯಸ್ಥಿಕೆಗೆ ಇರಾನ್‌ ಕರೆ

click me!