
ತಿರುಪತಿ: ಹಿಂದಿನ ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡು ವಿಷಯದಲ್ಲಿ ನಡೆದಿರುವ ಪಾಪಗಳ ಪರಿಹಾರಕ್ಕಾಗಿ ಕೈಗೊಂಡಿದ್ದ ಪ್ರಾಯಶ್ಚಿತ್ತ ದೀಕ್ಷೆಯನ್ನು ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಬುಧವಾರ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಅಂತ್ಯಗೊಳಿಸಿದ್ದಾರೆ. ಈ ವೇಳೆ ಕಲ್ಯಾಣ್ ಅವರು ಮಾತೃಶ್ರೀ ತರಿಗೊಂಡ ವೆಂಗಮಾಂಬಾ ನಿತ್ಯ ಅನ್ನದಾನ ಕೇಂದ್ರವನ್ನೂ ಉದ್ಘಾಟಿಸಿದರು.
ವೆಂಕಟೇಶ್ವರನಲ್ಲಿ ನಂಬಿಕೆಯಿದೆ: ಪವನ್‌ರ ಕ್ರೈಸ್ತ ಪುತ್ರಿ ಘೋಷಣೆ
ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಲ್ಯಾಣ್ ಅವರ ಕಿರಿಯ ಪುತ್ರಿ ಪಲಿನಾ ಅಂಜನಿ, ತಾವು ವೆಂಕಟೇಶ್ವರ ಸ್ವಾಮಿಯಲ್ಲಿ ನಂಬಿಕೆ ಹೊಂದಿರುವುದಾಗಿ ಘೋಷಿಸಿದ್ದಾರೆ. ಆಕೆ ಅಪ್ರಾಪ್ತೆಯಾದ ಕಾರಣ ಪವನ್ ಕಲ್ಯಾಣ್ ಈ ಘೋಷಣೆಯನ್ನು ಅನುಮೋದಿಸಿದ್ದಾರೆ.
ಟಿಟಿಡಿಯ ನಿಯಮದ ಪ್ರಕಾರ ಹಿಂದು ಅಲ್ಲದವರು ಮತ್ತು ವಿದೇಶಿಗರು ದೇವಸ್ಥಾನ ಪ್ರವೇಶಕ್ಕೂ ಮುನ್ನ ತಮ್ಮ ನಂಬಿಕೆಯನ್ನು ಘೋಷಿಸಿಕೊಳ್ಳಬೇಕು. ಅದರ ಭಾಗವಾಗಿ ಕಲ್ಯಾಣ್‌ರ 3ನೇ ಮಡದಿ ಅನ್ನಾ ಲೆಜ್ನೆವಾರ ಮಗಳು, ಅಂತೆಯೇ ವಿದೇಶಿ ಪ್ರಜೆಯಾಗಿರುವ ಪಲಿನಾ ಈ ಘೋಷಣೆಗೆ ಸಹಿ ಹಾಕಿದ್ದಾರೆ. ಪವನ್ ಕಲ್ಯಾಣ್ ಹಿಂದೂ ಧರ್ಮದ ಪಾಲಕರಾದರೂ ಅವರ ಮಗಳು ಕ್ರೈಸ್ತ ಧರ್ಮದ ಅನುಯಾಯಿ ಎಂದು ಈ ಹಿಂದೆ ಪವನ್ ಹೇಳಿದ್ದರು.
ತನಿಖೆಗೂ ಮುನ್ನವೇ ತುಪ್ಪದಲ್ಲಿ ಪ್ರಾಣಿ ಕೊಬ್ಬು ಇತ್ತೆಂದು ಹೇಳಿದ್ದೇಕೆ? ಆಂಧ್ರ ಸಿಎಂಗೆ ಸುಪ್ರೀಂ ತರಾಟೆ
ಲಡ್ಡು ವಿವಾದ: ಇಂದು ಸುಪ್ರೀಂ ವಿಚಾರಣೆ
ನವದೆಹಲಿ: ತಿರುಪತಿ ಲಡ್ಡು ಪ್ರಸಾದಕ್ಕೆ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾದ ಪ್ರಕರಣದ ಕುರಿತ ಅರ್ಜಿಯನ್ನು ಗುರುವಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಈ ವೇಳೆ ಈ ವಿಚಾರಣೆಯಲ್ಲಿ ಪ್ರಕರಣದ ತನಿಖೆಯನ್ನು ಆಂಧ್ರ ಪ್ರದೇಶದ ಎಸ್‌ಐಟಿ ನಡೆಸಬೇಕೋ ಅಥವಾ ಸ್ವತಂತ್ರ ತನಿಖಾ ಸಂಸ್ಥೆ ನಡೆಸಬೇಕೋ ಎಂಬುದರ ಬಗ್ಗೆಯೂ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಸೆ.30ರಂದು ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ ಸೇರಿ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ‘ದೇವರನ್ನು ರಾಜಕೀಯದಿಂದ ದೂರವಿಡಿ’ ಎಂದು ತರಾಟೆಗೆ ತೆಗೆದುಕೊಂಡಿತ್ತು.
ತಿರುಪತಿ ಲಡ್ಡು ವಿವಾದ: ಆಂಧ್ರ ಸರ್ಕಾರಕ್ಕೆ ಸುಪ್ರೀಂ ಚಾಟಿ ಬೀಸಿದ ಬೆನ್ನಲ್ಲೇ ಎಸ್‌ಐಟಿ ತನಿಖೆಗೆ ತಡೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ