Mamata Vs Modi ಆಸ್ಪತ್ರೆ ಉದ್ಘಾಟಿಸಿದ ಮೋದಿ, ಕ್ರೆಡಿಟ್ ನಮ್ಗೆ ಸಲ್ಲಬೇಕು ಎಂದ ದೀದಿ, ಅಸಲಿ ಕತೆ ಬಹಿರಂಗವಾಯ್ತು ನೋಡಿ!

By Suvarna NewsFirst Published Jan 7, 2022, 5:02 PM IST
Highlights
  • ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ 2ನೇ ಕ್ಯಾಂಪಸ್ ಉದ್ಘಾಟಿಸಿದ ಮೋದಿ
  • ವರ್ಚುವಲ್ ಕಾನ್ಫೆರನ್ಸ್ ಮೂಲಕ ಪ್ರಧಾನಿ ಮೋದಿಯಿಂದ ಉದ್ಘಾಟನೆ
  • ಉದ್ಘಾಟನೆ ಸಭೆಯಲ್ಲಿ ಹೊತ್ತಿಕೊಂಡಿತು ಕ್ರೆಡಿಟ್ ಬೆಂಕಿ
  • ಬಂಗಾಳ ಜನತೆ ದಾರಿ ತಪ್ಪಿಸಿದ್ರಾ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತಾ(ಜ.07): ಪ್ರಧಾನಿ ನರೇಂದ್ರ ಮೋದಿ(PM Narendra Modi) ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ(CM Mamata Banerjee) ಬ್ಯಾನರ್ಜಿ ನಡುವಿನ ಯುದ್ಧ ಇಂದು ನಿನ್ನೆಯದಲ್ಲ. ಹಲವು ಬಾರಿ ವೇದಿಕೆಯಲ್ಲಿ ಮಾತಿನ ಯುದ್ಧವಾಗಿದೆ. ವೇದಿಕೆಯಿಂದಲೇ ಬ್ಯಾನರ್ಜಿ ಎದ್ದು ಹೊರನಡೆದ ಘಟನೆಗಳು ನಡೆದಿದೆ. ಇದೀಗ ಕೋಲ್ಕತಾದ ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ವೇಳೆಯೂ ಮತ್ತೆ ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ಹರಿಹಾಯ್ದು ಭಾರಿ ಮುಖಭಂಗಕ್ಕೆ ಒಳಗಾಗಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆದ ಮಮತಾ ಬ್ಯಾನರ್ಜಿ ಹಾಗೂ ಹಿಂದಿನ ಉದ್ಘಾಟನೆಯ ಅಸಲಿಯತ್ತನ್ನು ಬಂಗಾಳ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಬಿಚ್ಚಿಟ್ಟಿದ್ದಾರೆ.

ದೇಶದಲ್ಲಿನ ಆರೋಗ್ಯ ಸೌಲಭ್ಯಗಳ ವಿಸ್ತರಣೆ, ಮೂಲಭೂತ ಸೌಕರ್ಯ ಅಭಿವೃದ್ಧಿ, ಅತ್ಯಾಧನಿಕ ತಂತ್ರಜ್ಞಾನ, ಯಂತ್ರಗಳ ಬಳಕೆ ಮೂಲಕ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಕೇಂದ್ರದ ಯೋಜನೆ ಮಿಂಚಿನ ವೇಗದಲ್ಲಿ ನಡೆಯುತ್ತಿದೆ. ಇದೇ ನವೀಕರಣ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಕೋಲ್ಕತಾದ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಆಸ್ಪತ್ರೆಯ(Chittaranjan National Cancer Institute in Kolkata) 2ನೇ ಕ್ಯಾಂಪಸ್ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಈ ಕ್ಯಾಂಪಸ್ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರನ್ಸ್(virtually inauguration) ಮೂಲಕ ಮಾಡಿದ್ದಾರೆ. ಆದರೆ ಈ ಸಭೆಯಲ್ಲಿ ಮಮತಾ ಬ್ಯಾನರ್ಜಿ ಗರಂ ಆಗಿದ್ದಾರೆ. ಮೋದಿಗಿಂತ ಮೊದಲೇ ನಾವು ಆಸ್ಪತ್ರೆ ಉದ್ಘಾಟಿಸಿದ್ದೇವೆ ಎಂದ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಕ್ರೆಡಿಟ್ ನಮಗೆ ಸಲ್ಲಬೇಕು ಎಂದಿದ್ದಾರೆ. ಇದೀಗ ಮಮತಾ ಬ್ಯಾನರ್ಜಿ ಕ್ರಿಡಿಟ್ ವಿಚಾರದ ಅಸಲಿ ಕತೆ ಬಹಿರಂಗವಾಗಿದೆ.

Mamata In Mumbai: ರಾಷ್ಟ್ರಗೀತೆಗೆ ಅವಮಾನ, ಕುರ್ಚಿಯಿಂದ ಏಳದ ದೀದೀ ವಿರುದ್ಧ ದೂರು ದಾಖಲು!

ಕ್ಯಾನ್ಸರ್ ಆಸ್ಪತ್ರೆಯ 2ನೇ ಕ್ಯಾಂಪಸ್ ಉದ್ಘಾಟನೆ ವರ್ಚುವಲ್ ಸಭೆಯಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಹಾಜರಿದ್ದರು. ತಮ್ಮ ಭಾಷಣದ ವೇಳೆ ಮಮತಾ ಬ್ಯಾನರ್ಜಿ, ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ ಕಾರಣ ನಾನು ಈ ಸಭೆಯಲ್ಲಿ ಹಾಜರಿದ್ದೇನೆ. ನನಗೆ ಈ ಸಭೆಗೆ ಹಾಜಾರಾಗಲು 2 ಬಾರಿ ಕರೆ ಮಾಡಿದ್ದಾರೆ.  ಇದು ಕೋಲ್ಕಾತಾದ ಕಾರ್ಯಕ್ರಮ, ಆದರೆ ಪ್ರಧಾನಿ ಮೋದಿ ಖುದ್ದು ಆಸಕ್ತಿ ತೋರಿದ್ದಾರೆ. ಅವರಿಗೆ ತಿಳಿದಿರಲಿ ಎಂದು ಹೇಳುತ್ತಿದ್ದೇನೆ, ಮೋದಿ ಆಸ್ಪತ್ರೆಯನ್ನು ವರ್ಚುವಲಿ ಉದ್ಘಾಟನೆ ಮಾಡಿದ್ದಾರೆ. ಆದರೆ ನಾವು ಈ ಹಿಂದೆ ಆಸ್ಪತ್ರೆ ಉದ್ಘಾಟನೆ ಮಾಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ನಮಗೆ ಆಸ್ಪತ್ರೆ ಅವಶ್ಯಕತೆ ಇತ್ತು. ಆ ಸಂದರ್ಭದಲ್ಲಿ ನಾವು ಚಿತ್ತರಂಜನ್ ಆಸ್ಪತ್ರೆ ಉದ್ಘಾಟಿಸಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

PM Security Lapse ಪಂಜಾಬ್ ಸರ್ಕಾರ, ಪೊಲೀಸರ ಉದ್ದೇಶಿತ ಕೃತ್ಯ, ದೋಗ್ರಾ ಸೇರಿ ಭಾರತದ ಮಾಜಿ DGPಗಳಿಂದ ರಾಷ್ಟ್ರಪತಿಗೆ ಪತ್ರ!

ಈ ವಿಚಾರ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಕೊರೋನಾ 2ನೇ ಅಲೆ(Coronavirus) ಸಂದರ್ಭದಲ್ಲಿ ಚಿತ್ತರಂಜನ್ ಆಸ್ಪತ್ರೆ ಕ್ಯಾಂಪಸ್‌ನ್ನು ತುರ್ತು ಬಳಕೆಗೆ ಉಪಯೋಗಿಸಲಾಗಿದೆ. ನಿರ್ಮಾಣ ಹಂತದಲ್ಲಿನ ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ಬಳಸಲಾಗಿದೆ. ಆದರೆ ಅದು ಉದ್ಘಾಟನೆಯಲ್ಲ. ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮಮತಾ ಬ್ಯಾನರ್ಜಿ ಮಾಡುತ್ತಿದ್ದಾರೆ ಎಂದು ಸುವೇಂಧು ಅಧಿಕಾರಿ ಟ್ವೀಟ್ ಮಾಡಿದ್ದಾರೆ. 

 

Guilefully articulating the emergency usage of an under construction facility as Safe Home during the 2nd wave of Covid, to discredit the formal inauguration of the most advanced fully equipped Cancer facility of Eastern India is a deliberate attempt to mislead the people of WB.

— Suvendu Adhikari • শুভেন্দু অধিকারী (@SuvenduWB)

ಕೋಲ್ಕತಾದಲ್ಲಿ ಮೋದಿ ಕಾರ್ಯಕ್ರಮ ಯಾಕೆ ಅನ್ನೋ ರೀತಿ ಪ್ರಶ್ನೆ ಮಾಡಿದ ಮಮತಾ ಬ್ಯಾನರ್ಜಿ ಆಸ್ಪತ್ರೆ ನಿರ್ಮಾಣ ಹಾಗೂ ಉದ್ಘಾಟನೆ ನಾವು ಮಾಡಿದ್ದೇವೆ ಎಂದು ಭಾಷಣದಲ್ಲಿ ಮಾತನಾಡಿದ್ದರು. ಇದರ ಅಸಲಿ ಕತೆಯನ್ನು ಸುವೇಂಧು ಅಧಿಕಾರಿ ಬಹಿರಂಗ ಪಡಿಸಿದ್ದಾರೆ. ಕೇಂದ್ರ ಸರ್ಕಾರ 400 ಕೋಟಿ ರೂಪಾಯಿ ನೀಡಿದೆ. ರಾಜ್ಯ ಸರ್ಕಾರ ಶೇಕಡಾ 25 ರಷ್ಟು ಹಣ ಮಾತ್ರ ವ್ಯಯಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. 

 

Not only you disparaged intentionally, trying to conceal the fact that, the Central Govt has provided 75% of the funds; i.e. 400 crores, but also belittled the Federal Polity of India and stained the sanctity of a solemn occasion.
How unfortunate. pic.twitter.com/X64k9zHeDe

— Suvendu Adhikari • শুভেন্দু অধিকারী (@SuvenduWB)

PM Security Breach ರಾಷ್ಟ್ರಪತಿ ಭೇಟಿಯಾದ ನರೇಂದ್ರ ಮೋದಿ, ಭದ್ರತಾ ಲೋಪ ಕುರಿತು ಗಂಭೀರ ಚರ್ಚೆ!

ಹೌದು, ಇದು ನಿಜ. ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ನವೀಕರಣ 530 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಲಾಗಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ 75:25 ಅನುಪಾತದ ಯೋಜನೆ ಅಂದರೆ ಈ ಆಸ್ಪತ್ರೆ ನಿರ್ಮಾಣಕ್ಕೆ 400 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದೆ. ಇನ್ನುಳಿದ 130 ಕೋಟಿ ರೂಪಾಯಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಹಾಕಿದೆ. ಹಾಗೂ ಇದು ಕೇಂದ್ರ ಆರೋಗ್ಯ ಸೌಲಭ್ಯ ವಿಸ್ತರಣೆ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯಾಗಿದೆ.

click me!