ಹಾಲುಣಿಸುವ ತಾಯಿಗೆ ಕೋವಿಡ್‌... ಮಗುವಿನ ಕಾಳಜಿ ಹೇಗೆ... ಅನುಭವ ಹಂಚಿಕೊಂಡ ನಟಿ ಶಿಖಾ

By Suvarna News  |  First Published Jan 7, 2022, 4:28 PM IST
  • ಹೊಸದಾಗಿ ತಾಯಿಯದವರಿಗೆ ಕೋವಿಡ್‌ನಿಂದಾಗಿ ಕಷ್ಟ
  • ಮಗುವಿನ ಆರೈಕೆ ಬಗ್ಗೆ ಅನುಭವ ಹಂಚಿಕೊಂಡ ನಟಿ ಶಿಖಾ
  • ಕೋವಿಡ್‌ ಸೋಂಕಿಗೊಳಗಾಗಿದ್ದ ನಟಿ ಶಿಖಾ ಸಿಂಗ್

ಮುಂಬೈ(ಜ.7): ಕೋವಿಡ್‌ ಬಂದ ಆರಂಭದಲ್ಲಿ ಮಗುವಿಗೆ ಹಾಲುಣಿಸಲಾಗದೆ ತಾಯಿ ಮಗು ಇಬ್ಬರು ಸಂಕಷ್ಟಕ್ಕೊಳಗಾದ ಹಾಗೂ ಮಗುವನ್ನು ಕಳೆದುಕೊಂಡಂತಹ ಘಟನೆಗಳು ನಡೆದಿದ್ದವು. ಆದರೆ ಇಲ್ಲೊಬ್ಬರು ತಾಯಿ ಕೋವಿಡ್‌ ಗೆದ್ದು ಬಂದಿದ್ದು, ಆ ಸಂದರ್ಭದಲ್ಲಿ ಎದೆ ಹಾಲು ಕುಡಿಯುವ ಕಂದನ ರಕ್ಷಿಸಿದ್ದು ಹೇಗೆ ಎಂಬ ಬಗ್ಗೆ ಹಾಗೂ ಆ ಸಮಯದ ಮಾನಸಿಕ ತೊಳಲಾಟದ ಬಗ್ಗೆ ಮನಬಿಚ್ಚಿ ನಟಿ ಶಿಖಾ ಸಿಂಗ್‌ ಮಾತನಾಡಿದ್ದಾರೆ.

ನನಗೆ ಕೋವಿಡ್‌ ಬಂದಂತಹ ಸಂದರ್ಭದಲ್ಲಿ ನಾನು ಮೊದಲಿಗೆ ಭಯ ಪಟ್ಟಿದ್ದು, ಕಂದ ಅಲೈನಾ ಮೇಲೆ ಇದು ಹೇಗೆ ಪರಿಣಾಮ ಬೀರಬಹುದು ಎಂದು ನಟಿ ಶಿಖಾ ಸಿಂಗ್ ಹೇಳಿದ್ದಾರೆ.  2020 ರಲ್ಲಿ ನಟಿ ಶಿಖಾ ಸಿಂಗ್‌ ಪುತ್ರಿಗೆ ಜನ್ಮ ನೀಡಿದ್ದರು. ನಾನು ಕೋವಿಡ್ ಪಾಸಿಟಿವ್‌ ಆಗಿದ್ದೆ. ಆದರೆ ಅದೃಷ್ಟವಶಾತ್‌ ನನ್ನ ಮನೆಮಂದಿಯೆಲ್ಲಾ ನೆಗೆಟಿವ್‌ ಆಗಿದ್ದರು. ಜ್ವರ ಹಾಗೂ ಶೀತ ಬಂದ ಕೂಡಲೇ ನಾನು ನನ್ನನ್ನು ಮನೆಯವರಿಂದ ಐಸೋಲೇಟ್‌ (ದೂರ ಇರುವುದು) ಮಾಡಿಕೊಂಡಿದ್ದೆ. 

 
 
 
 
 
 
 
 
 
 
 
 
 
 
 

Tap to resize

Latest Videos

undefined

A post shared by Shikha Singh Shah (@shikhasingh)

 

ಒಟ್ಟು  36 ಗಂಟೆಗಳ ಕಾಲ ನಾನು ನನ್ನ ಪುತ್ರಿ ಅಲೈನಾರನ್ನು ನೋಡಲಿಲ್ಲ. ಆದರೆ ನನ್ನ ಹೃದಯ ಅವಳಿಗಾಗಿ ಹಾಗೂ ಅವಳೊಂದಿಗೆ ಇರಲು ಕಾತರಿಸುತ್ತಿತ್ತು. ಆದರೆ ಅವಳ ಆರೋಗ್ಯಕ್ಕಾಗಿ ಈ ಸಂದರ್ಭದಲ್ಲಿ ಭಾವುಕತೆಯನ್ನು ನಿಯಂತ್ರಿಸಬೇಕು ಎಂದು ನಾನು ತಿಳಿದಿದ್ದೆ. ನನಗೆ ಮೈ ಕೈ ನೋವು, ತಲೆನೋವು, ಜ್ವರ, ಹಾಗೂ ಕಫ ಬಾಧಿಸುತ್ತಿತ್ತು. ಆದರೆ ಮುಖ್ಯವಾದ ಸಮಸ್ಯೆ ಎಂದರೆ ನಾನು ಆಕೆಗೆ (ಮಗಳಿಗೆ)ಹಾಲುಡಿಸಬೇಕಾಗಿತ್ತು. ಅಲ್ಲದೇ ನಿದ್ದೆಗೆ ಜಾರುವಾಗಿನ ಆ  ತಾಯಿಯ ಜೊತೆಗಿನ ಆ ಆರಾಮವನ್ನು ಆಕೆ ಮಿಸ್‌ ಮಾಡಿಕೊಳ್ಳುತ್ತಿದ್ದಳು. ವೈದ್ಯರ ಸಲಹೆಯಂತೆ ಎದೆಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ನನ್ನ ಎದೆಹಾಲನ್ನು ಪಂಪ್‌ ಮಾಡಿ ಆಕೆಗೆ ನೀಡಲಾಗುತ್ತಿತ್ತು ಎಂದು ಶಿಖಾ ಹೇಳಿದ್ದಾರೆ. 

 

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೊಸ ಚೊಚ್ಚಲ ತಾಯಿಯು ಕೋವಿಡ್‌ ಪಾಸಿಟಿವ್ ಆಗಿರುವಾಗಲೂ ಸ್ತನ್ಯಪಾನವನ್ನು ಮುಂದುವರಿಸಬಹುದು. ಏಕೆಂದರೆ ಹಾಲಿನ ಮೂಲಕ ಸೋಂಕಿನ ವರ್ಗಾವಣೆಯಾದ ಬಗ್ಗೆ ಯಾವುದೇ ಲಕ್ಷಣಗಳಿರಲಿಲ್ಲ. ಈ ಬಗ್ಗೆ ಬೆಂಗಳೂರಿನ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ(Cloudnine Group of Hospitals) ಮುಖ್ಯ ಸಲಹೆಗಾರರಾದ ರೂತ್ ಪ್ಯಾಟರ್ಸನ್ (Ruth Patterson) ನೀಡಿದ ಮಾಹಿತಿ ಪ್ರಕಾರ ಇಲ್ಲಿಯವರೆಗೆ, ಎದೆ ಹಾಲು ವೈರಸ್ ಅನ್ನು ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ತಾಯಿ ತನ್ನ ನೈರ್ಮಲ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. 

ಮಗುವಿಗೆ ಹಾಲುಣಿಸುವ ಮೊದಲು, ತಾಯಿ ತನ್ನ ಕೈಗಳನ್ನು ಸೋಪ್ ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‌ನಿಂದ ತೊಳೆಯಬೇಕು. ಹಾಲುಣಿಸುವ ಸಮಯದಲ್ಲಿ, ತಾಯಿ ಮಾಸ್ಕ್‌ನ್ನು ಧರಿಸಬೇಕು. ಹಾಲುಡಿಸುವಾಗ ಆಕೆಯ ಮುಖ ಮತ್ತು ಮಗುವಿನ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಪ್ಯಾಟರ್ಸನ್ ಸಲಹೆ ನೀಡಿದರು.

Spicy Food : ಹಾಲುಣಿಸುವ ತಾಯಿ ಮಸಾಲೆ ಪದಾರ್ಥ ಸೇವನೆ ಮಾಡಿದ್ರೆ ಮಗು ಏನಾಗುತ್ತೆ ಗೊತ್ತಾ?

ತಾಯಿಯಲ್ಲಿ ತೀವ್ರತರವಾದ ರೋಗಲಕ್ಷಣಗಳು ಕಂಡು ಬಂದರೆ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿದ್ದಲ್ಲಿ, ಹಾಲನ್ನು ಪಂಪ್‌ ಮಾಡಿ ಹೊರತೆಗೆದು ಆ ಸಂದರ್ಭದಲ್ಲಿ ಮಗುವಿನ ಆರೈಕೆದಾರರಿಗೆ ನೀಡಿ ಮಗುವಿಗೆ ಕೊಡಿಸಬೇಕು.  ಆರೈಕೆ ಮಾಡುವವರು ಕೂಡ ಹಾಲು ನೀಡುವ ಮೊದಲು ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸಬೇಕು. ಮೊಲೆಯಿಂದ ಹಾಲನ್ನು ತೆಗೆಯದಿದ್ದರೆ ಅದು ಶೇಖರಣೆಯಾಗುತ್ತದೆ ಮತ್ತು ತಾಯಿಗೆ ಅದು ಹೆಚ್ಚು ತೊಂದರೆ ಉಂಟುಮಾಡುತ್ತದೆ. ಸ್ತನಗಳನ್ನು ಕೈಗಳಿಂದ ತೊಳೆಯುವುದು ಮತ್ತು ಸ್ವಚ್ಛಗೊಳಿಸುವುದಲ್ಲದೇ  ಹಾಲು ತೆಗೆಯುವ ಪಂಪ್ ಅನ್ನು ಮೊದಲು ಸೋಂಕುರಹಿತಗೊಳಿಸಬೇಕು. ಹಾಲು ಸಂಗ್ರಹಿಸುವ ಮೊದಲು ಮತ್ತು ನಂತರ ತಾಯಿ ತನ್ನ ಕೈಗಳನ್ನು ತೊಳೆಯಬೇಕು ಎಂದು ಅವರು ಹೇಳಿದರು. 

Woman Breastfeeds Cat: ವಿಮಾನದಲ್ಲಿ ಬೆಕ್ಕಿಗೆ ಎದೆಹಾಲುಣಿಸಿದ ಮಹಿಳೆ!

click me!