ರಾಮನವಮಿ: ಮರ್ಯಾದಾ ಪುರುಷೋತ್ತಮನ ಹಣೆಗೆ ಬೆಳಕಿನ ತಿಲಕವಿಟ್ಟ ಸೂರ್ಯ

. ರಾಮನವಮಿಗೂ ಮೊದಲ ದಿನ ಈ ರಾಮಲಲ್ಲಾನ ಹಣೆಯ ಮೇಲೆ ಸೂರ್ಯ ರಶ್ಮಿ ಬೀಳುವ  ಮೂಲಕ ಈ ಸೂರ್ಯ ತಿಲಕ ರಾಮನ ಹಣೆಯನ್ನು ಅಲಂಕರಿಸಿತು.

Surya Tilak ceremony at 12 pm to mark Ram Navami in Ayodhya

ಇಂದು ರಾಮನವಮಿ, ದೇಶದೆಲ್ಲೆಡೆ ಭಕ್ತಿ ಭಾವದಿಂದ ರಾಮನವಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಮನೂರು ಅಯೋಧ್ಯೆಯಲ್ಲಿ ರಾಮನವಮಿ ಉತ್ಸವ ಬಹಳ ಜೋರಾಗಿಯೇ ನಡೆಯುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. ಲಕ್ಷಾಂತರ ಭಕ್ತರ ನಿಯಂತ್ರಣಕ್ಕೆ ಈಗಾಗಲೇ ಎಲ್ಲಾ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. 

ಇತ್ತ ರಾಮನವಮಿಗೂ ಮೊದಲೇ ಸೂರ್ಯ ರಾಮನ ಹಣೆಗೆ ಬೆಳಕಿನ ತಿಲಕವಿಟ್ಟಿದ್ದು, ಈ ಅಪೂರ್ವ ಕ್ಷಣದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಮನವಮಿಗೂ ಮೊದಲ ದಿನ ಈ ರಾಮಲಲ್ಲಾನ ಹಣೆಯ ಮೇಲೆ ಸೂರ್ಯ ರಶ್ಮಿ ಬೀಳುವ  ಮೂಲಕ ಈ ಸೂರ್ಯ ತಿಲಕ ರಾಮನ ಹಣೆಯನ್ನು ಅಲಂಕರಿಸಿತು. ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣ ರಾಮನ ಹಣೆಯ ಮೇಲೆ ಬಿದ್ದಿದ್ದು, ಸುಮಾರು 90 ಸೆಕೆಂಡ್‌ಗಳ ಕಾಲ ಶ್ರೀರಾಮನ ಹಣೆಯನ್ನು ಸೂರ್ಯನ ತಿಲಕ ಅಲಂಕರಿಸಿತ್ತು. ಈ ಸೂರ್ಯ ತಿಲಕದ ಪ್ರಯೋಗದ ಈ ಸಂದರ್ಭದಲ್ಲಿ  ಐಐಟಿ ರೂರ್ಕಿ ಹಾಗೂ ಐಐಟಿ ಚೆನ್ನೈನ ತಜ್ಞರು ಅಲ್ಲಿ ಹಾಜರಿದ್ದರು. 

Latest Videos

ಭಾರತೀಯ ವಿಜ್ಞಾನಿಗಳಿಂದ ವಿನ್ಯಾಸಗೊಳಿಸಲ್ಪಟ್ಟ ಸೂರ್ಯ ತಿಲಕ ಸಮಾರಂಭವು ವರ್ಷಕ್ಕೊಮ್ಮೆ ನಡೆಯುವ ಆಧ್ಯಾತ್ಮಿಕ ಕಾರ್ಯಕ್ರಮವಾಗಿದೆ. ಭಾರತೀಯ ವಿಜ್ಞಾನಿಗಳು ವಿನ್ಯಾಸಗೊಳಿಸಿದ ವಿಶೇಷ ಕನ್ನಡಿ ಮತ್ತು ಮಸೂರ ಆಧಾರಿತ ಉಪಕರಣವನ್ನು ಬಳಸಿ, ತಿಲಕವನ್ನು ಹೋಲುವ ಸೂರ್ಯನ ಬೆಳಕಿನ ಕಿರಣವು ನೇರವಾಗಿ ವಿಗ್ರಹದ ಹಣೆಯ ಮೇಲೆ ಬೀಳುವಂತೆ ನೋಡಿಕೊಳ್ಳಲಾಗುತ್ತದೆ. ರೂರ್ಕಿಯ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ವಿಜ್ಞಾನಿಗಳ ತಂಡವು ಸೂರ್ಯ ತಿಲಕ ಕಾರ್ಯವಿಧಾನವನ್ನು ವಿನ್ಯಾಸಗೊಳಿಸಿದ್ದು, ಪ್ರತಿ ವರ್ಷ ರಾಮ ನವಮಿಯ ದಿನದಂದು ಮಧ್ಯಾಹ್ನ 12 ಗಂಟೆಗೆ ಸುಮಾರು ಆರು ನಿಮಿಷಗಳ ಕಾಲ ಸೂರ್ಯನ ಕಿರಣಗಳು ಭಗವಾನ್ ರಾಮನ ವಿಗ್ರಹದ ಹಣೆಯ ಮೇಲೆ ಬೀಳುತ್ತವೆ.

राम नवमी के अवसर पर अयोध्या में राम जन्मभूमि मंदिर में राम लला का ‘सूर्य तिलक’ किया गया।

राम नवमी के दिन दोपहर ठीक 12 बजे ‘सूर्य तिलक’ किया गया, जब सूर्य की किरणें राम लला की मूर्ति के माथे पर पड़ती हैं, जिससे एक दिव्य तिलक बनता है।

(वीडियो: डीडी) pic.twitter.com/SyE4HgT8W0

— ANI_HindiNews (@AHindinews)

 

ವಿಶೇಷವಾಗಿ ಶಿಕಾರ ಬಳಿಯ ಮೂರನೇ ಮಹಡಿಯಿಂದ ಸೂರ್ಯನ ಕಿರಣಗಳನ್ನು ಸೂರ್ಯನ ಮಾರ್ಗವನ್ನು ಪತ್ತೆಹಚ್ಚುವ ಪ್ರಸಿದ್ಧ ತತ್ವಗಳನ್ನು ಬಳಸಿಕೊಂಡು ಗರ್ಭ ಗೃಹ (ಗರ್ಭಗುಡಿ) ಗೆ ಮರುನಿರ್ದೇಶಿಸುವ ರೀತಿಯಲ್ಲಿ ಗೇರ್‌ಬಾಕ್ಸ್ ಮತ್ತು ಪ್ರತಿಫಲಿತ ಕನ್ನಡಿಗಳು ಮತ್ತು ಮಸೂರಗಳನ್ನು ಜೋಡಿಸಿ ಸೂರ್ಯಕಿರಣ ಶ್ರೀರಾಮನ ಹಣೆಯ ಮೇಲೆ ಬೀಳುವಂತೆ ಮಾಡಲಾಗುತ್ತದೆ. ರಾಮ ಮಂದಿರದ ವಿನ್ಯಾಸದಲ್ಲಿ ಸಹಾಯ ಮಾಡಿದ ಸಿಬಿಆರ್‌ಐ ವಿಜ್ಞಾನಿ ಡಾ. ಪ್ರದೀಪ್ ಚೌಹಾಣ್  ಹೇಳುವಂತೆ ಶೇಕಡಾ 100 ರಷ್ಟು ಸೂರ್ಯ ತಿಲಕವು ರಾಮ ಲಲ್ಲಾ ವಿಗ್ರಹದ ಹಣೆಗೆ ಅಭಿಷೇಕ ಮಾಡುತ್ತದೆ.  ಇದೇ ರೀತಿಯ ಸೂರ್ಯ ತಿಲಕ ಕಾರ್ಯವಿಧಾನವು ಈಗಾಗಲೇ ಕೆಲವು ಜೈನ ದೇವಾಲಯಗಳಲ್ಲಿ ಮತ್ತು ಕೋನಾರ್ಕ್‌ನ ಸೂರ್ಯ ದೇವಾಲಯದಲ್ಲಿ ಅಸ್ತಿತ್ವದಲ್ಲಿದೆ, ಆದರೆ ಅವುಗಳನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ.

ರಾಮ ನವಮಿಯಂದು ಅಪರೂಪ ಯೋಗ, ಈ 3 ರಾಶಿ ಮೇಲೆ ಶ್ರೀ ರಾಮನ ಆಶೀರ್ವಾದ, ಅದೃಷ್ಟ

ಇಂದು ಕೂಡ ಮಧ್ಯಾಹ್ನ ಸರಿಯಾಗಿ 12 ಗಂಟೆ ವೇಳೆಗೆ ಸೂರ್ಯ ರಶ್ಮಿ ರಾಮನ ಹಣೆಯ ಮೇಲೆ ಪ್ರವಹಿಸುವ ಮೂಲಕ ಶ್ರೀರಾಮನಿಗೆ ಬೆಳಕಿನ ತಿಲಕವಿಡಲಿದೆ. ಶ್ರೀರಾಮ ಸೂರ್ಯವಂಶಕ್ಕೆ ಸೇರಿದವನು ಎಂಬ ಪ್ರತೀತಿ ಇದೆ.
ಇತ್ತ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನವಮಿ ಹಿನ್ನೆಲೆ ರಾಮನಿಗೆ ವಿವಿಧ ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತಿದೆ. ಹಲವು ಪುರೋಹಿತರ ನೇತೃತ್ವದಲ್ಲಿ ಈ ಪೂಜಾ ಕೈಂಕರ್ಯ ನಡೆಯುತ್ತಿದೆ. ಶ್ರೀರಾಮಜನ್ಮಭೂಮಿತೀರ್ಥಕ್ಷೇತ್ರ ಟ್ರಸ್ಟ್‌ನ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಪೂಜಾಕಾರ್ಯಗಳ ನೇರ ಪ್ರಸಾರ ಲಭ್ಯವಿದೆ. 

ಸೂರ್ಯ ತಿಲಕ ಸಮಾರಂಭದ ಸಮಯ

  • ಬೆಳಿಗ್ಗೆ 9:30 ರಿಂದ 10:30 ರವರೆಗೆ: ರಾಮ ಲಲ್ಲಾಗೆ ಅಭಿಷೇಕ.
  • ಬೆಳಿಗ್ಗೆ 10:30 ರಿಂದ 10:40 ರವರೆಗೆ: ಪರದೆ ಮುಚ್ಚಿರುತ್ತದೆ.
  • ಬೆಳಿಗ್ಗೆ 10:40 ರಿಂದ 11:45 ರವರೆಗೆ: ಪರದೆ ಮತ್ತೆ ತೆರೆಯುತ್ತದೆ, ನಂತರ ಭೋಗ ಅರ್ಪಣೆ.
  • ಮಧ್ಯಾಹ್ನ 12:00 ಗಂಟೆಗೆ: ಸೂರ್ಯ ತಿಲಕ ಮತ್ತು ಭಗವಾನ್ ರಾಮನ ಸಾಂಕೇತಿಕ ಜನನ.

ಸೂರ್ಯ ತಿಲಕ ಸಮಾರಂಭವನ್ನು ಎಲ್ಲಿ ವೀಕ್ಷಿಸಬಹುದು
ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ರಾಮನವಮಿಯ ಸಂಪೂರ್ಣ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ರಾಮ ಮಂದಿರ ಟ್ರಸ್ಟ್ ನಿರ್ವಹಿಸುವ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಇದನ್ನು ನೇರ ಪ್ರಸಾರ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿರುವ ಆದರೆ ದೇವಾಲಯವನ್ನು ತಲುಪಲು ಸಾಧ್ಯವಾಗದ ಭಕ್ತರಿಗೆ, ಪವಿತ್ರ ನಗರದಾದ್ಯಂತ ಸ್ಥಾಪಿಸಲಾದ ಎಲ್ಇಡಿ ಪರದೆಗಳಲ್ಲಿ ಸಮಾರಂಭವನ್ನು ಪ್ರದರ್ಶಿಸಲಾಗುತ್ತದೆ.

ಪಶ್ಚಿಮ ಬಂಗಾಳದ ಈ ಹಳ್ಳಿಯಲ್ಲಿ ಪ್ರತಿಯೊಬ್ಬರ ಹೆಸರೂ ‘ರಾಮ’... ಏನು ಇಲ್ಲಿನ ವಿಶೇಷತೆ!

 

vuukle one pixel image
click me!