ಟಾರ್ಗೆಟ್ ರೀಚ್ ಮಾಡದ್ದಕ್ಕೆ ಪ್ಯಾಂಟ್ ಬಿಚ್ಚಿಸಿ, ಮಂಡಿ ಮೇಲೆ ನಡೆಯೋ ಶಿಕ್ಷೆಯ ವಿಡಿಯೋ: ಕಾರ್ಮಿಕ ಇಲಾಖೆಯ ಸ್ಪಷ್ಟನೆ

ಕೊಚ್ಚಿಯ ಖಾಸಗಿ ಕಂಪನಿಯಲ್ಲಿ ಟಾರ್ಗೆಟ್ ತಲುಪದ ಉದ್ಯೋಗಿಗೆ ಕಿರುಕುಳ ನೀಡಲಾಗಿದೆ ಎಂಬ ವಿಡಿಯೋ ವೈರಲ್ ಆಗಿದೆ. ಕಾರ್ಮಿಕ ಇಲಾಖೆ ತನಿಖೆ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.

Kochi Company Accused of Torture for Employees Missing Targets  video viral mrq

ತಿರುವನಂತಪುರ: ಕೇರಳದ ಕೊಚ್ಚಿಯ ಖಾಸಗಿ ಮಾರ್ಕೆಟಿಂಗ್ ಕಂಪನಿಯಲ್ಲಿ ಟಾರ್ಗೆಟ್ ರೀಚ್ ಮಾಡದ ಉದ್ಯೋಗಿಗಳಿಗೆ ಕ್ರೂರ ಕಿರುಕುಳ ನೀಡಲಾಗಿದೆ ಎಂಬ ಶೀರ್ಷಿಕೆಯಡಿ ವಿಡಿಯೋ ವೈರಲ್ ಆಗಿದೆ. ಕೊಚ್ಚಿ ಮೂಲದ ಹಿಂದುಸ್ತಾನ್ ಪವರ್ ಲಿಂಕ್ಸ್  ಕಂಪನಿ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿತ್ತು. ಈ ವಿಡಿಯೋ ವೈರಲ್ ಬೆನ್ನಲ್ಲೇ ಕಾರ್ಮಿಕ ಇಲಾಖೆ, ತನಿಖೆ ನಡೆಸಿ ಘಟನೆಯ ಅಸಲಿ ವಿಷಯವನ್ನು ತೆರೆದಿಟ್ಟಿದೆ. ಈ ಘಟನೆ ಸೆಪ್ಟೆಂಬರ್ -2024ರಂದು ನಡೆದಿದ್ದು, ಕಂಪನಿಯ ಮಾಜಿ ಉದ್ಯೋಗಿ ಈ ವಿಡಿಯೋ ವೈರಲ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ಟಾರ್ಗೆಟ್ ರೀಚ್ ಮಾಡದ ಕಾರಣ ಉದ್ಯೋಗಿಯ ಪ್ಯಾಂಟ್ ಬಿಚ್ಚಿಸಿ, ಕುತ್ತಿಗೆಗೆ ಬೆಲ್ಟ್ ಕಟ್ಟಿ ಮಂಡಿ ಮೇಲೆ ನಡೆಯುವಂತೆ ಶಿಕ್ಷೆ ನೀಡಲಾಗುತ್ತಿದೆ ಎಂದು ಆರೋಪಿಸಿ ಒಂದು ವಾರದ ಹಿಂದೆ ಪೆರುಂಬವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಐದು ತಿಂಗಳು ಸಂಸ್ಥೆಯಲ್ಲಿ ಕೆಲಸ ಮಾಡಿದ ಯುವಕ ಹೇಳಿಕೆ ನೀಡಿದ್ದನು. ಪೊಲೀಸರು ವಿಡಿಯೋ ವೈರಲ್ ಬೆನ್ನಲ್ಲೇ ತನಿಖೆ ಆರಂಭಿಸಿದ್ದರು. ಈ ವಿಡಿಯೋದಲ್ಲಿ ಶಿಕ್ಷೆಗೆ ಒಳಗಾದ ಇದು  ಕೆಲಸದ ಕಿರುಕುಳ ಅಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. 

Latest Videos

ಆದ್ರೆ ಇದೇ ಕಂಪನಿಯಲ್ಲಿ ಕೆಲಸ ಮಾಡಿದ್ದ ಮತ್ತೋರ್ವ ಉದ್ಯೋಗಿ ಅಖಿಲ್ ಎಂಬಾತ, ಖಾಸಗಿ ಮಾರ್ಕೆಟಿಂಗ್ ಸಂಸ್ಥೆ ಟಾರ್ಗೆಟ್ ಮುಟ್ಟದ ಯುವಕರನ್ನು ಈ ರೀತಿ ಶಿಕ್ಷಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿದೆ. ಇದೂ ಸೇರಿದಂತೆ ಕ್ರೂರ ಶಿಕ್ಷೆಗಳನ್ನು ಸಂಸ್ಥೆಯಲ್ಲಿ ಅನುಭವಿಸಿದ್ದೇನೆ ಎಂದು ಆರೋಪಿಸಿದ್ದಾರೆ. ಕೊಚ್ಚಿ ಪಾಲಾರಿವಟ್ಟಂ ಪೊಲೀಸ್ ಠಾಣಾ ವ್ಯಾಪ್ತಿಯ ಹಿಂದೂಸ್ತಾನ್ ಪವರ್ ಲಿಂಕ್ಸ್ ಎಂಬ ಸಂಸ್ಥೆ ಮತ್ತು ಅವರ ಪೆರುಂಬಾವೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡೀಲರ್‌ಶಿಪ್ ಸಂಸ್ಥೆಯಾದ ಕೆಲ್ಟ್ರೋಕೋಪಿ ವಿರುದ್ಧ ಆರೋಪ ಕೇಳಿಬಂದಿದೆ. 

ಇದನ್ನೂ ಓದಿ: ಉದ್ಯೋಗ ಇಲ್ಲದ ಗಂಡನಿಗೆ ಸಿವಿಲ್ ಇಂಜಿನಿಯರ್ ಹೆಂಡ್ತಿ ಮೇಲೆ ಅನುಮಾನ: ಸುತ್ತಿಗೆಯಿಂದ ಹೊಡೆದು ಕೊಲೆ

ಕಾರ್ಮಿಕ ಇಲಾಖೆಯ ಸ್ಪಷ್ಟನೆ 
ನಡೆದಿದ್ದು ಕೆಲಸದ ಕಿರುಕುಳ ಅಲ್ಲ ಎಂದು ದೃಶ್ಯಗಳಲ್ಲಿ ಕಾಣುವ ಯುವಕ ಪೊಲೀಸರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೂ ಹೇಳಿದ್ದಾನೆ. ಗಾಂಜಾ ವ್ಯಸನಿಯಾದ ಮನಾಫ್ ಎಂಬ ಉದ್ಯೋಗಿ ತಿಂಗಳುಗಳ ಹಿಂದೆ ಬಲವಂತವಾಗಿ ಚಿತ್ರೀಕರಿಸಿದ ವಿಡಿಯೋ ಇದಾಗಿದೆ. ಸಂಸ್ಥೆಯ ಮಾಲೀಕರನ್ನು ಕೆಟ್ಟವರನ್ನಾಗಿ ಮಾಡಲು ಈಗ ನನ್ನ ಅನುಮತಿ ಇಲ್ಲದೆ ದೃಶ್ಯಗಳನ್ನು ಹರಿಬಿಟ್ಟಿದ್ದಾನೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ಕ್ರೂರವಾಗಿ ವರ್ತಿಸಿದ ಮನಾಫ್‌ನನ್ನು ಈ ಹಿಂದೆಯೇ ಸಂಸ್ಥೆಯ ಮಾಲೀಕರು ಕೆಲಸದಿಂದ ತೆಗೆದುಹಾಕಿದ್ದರು. ನಾನು ಈಗಲೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಯುವಕ ಹೇಳುತ್ತಾನೆ. ಹೆಚ್ಚಿನ ಉದ್ಯೋಗಿಗಳಿಂದ ಹೇಳಿಕೆ ಪಡೆದ ನಂತರ ಮುಂದಿನ ದಿನ ವಿವರವಾದ ವರದಿಯನ್ನು ಕಾರ್ಮಿಕ ಇಲಾಖೆ ಸಚಿವರಿಗೆ ನೀಡಲಾಗುವುದು ಎಂದು ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: 

vuukle one pixel image
click me!