
ಪುದುಚೇರಿ(ಮಾ.08): ಪುದುಚೇರಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. ಹೀಗಾಗಿ ಕಾಂಗ್ರೆಸ್ ವಿರೋಧಿ ಅಲೆ ಪುದುಚೇರಿಯಲ್ಲಿ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿ ಹಾಗೂ ಎಐಎಡಿಎಂಕೆ ಭರ್ಜರಿ ಗೆಲುವು ಸಾಧಿಸುವ ಸೂಚನೆ ನೀಡಿದೆ.
ಮಾ.27 ರಿಂದ ಎಪ್ರಿಲ್ 29: ಪಂಚರಾಜ್ಯ ಚುನಾವಣಾ ದಿನಾಂಕ ಘೋಷಿಸಿದ ಆಯೋಗ!.
ರೆನಿಸ್ಯಾನ್ಸ್ ಫೌಂಡೇಶನ್ ನಡೆಸಿದ ಸರ್ವೆಯಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿ ಬರೋಬ್ಬರಿ 23 ಸ್ಥಾನ ಗೆಲ್ಲಲಿದೆ ಎಂದಿದೆ.ಆದರೆ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಕೇವಲ 3 ಸ್ಥಾನಕ್ಕೆ ತೃಪ್ತಿಪಡಬೇಕಾಗಬಹುದು ಎಂದಿದೆ.
ಬಿಜೆಪಿ ಹಾಗೂ ಎಐಎಡಿಎಂಕೆ - 23
ಡಿಎಂಕೆ-ಕಾಂಗ್ರೆಸ್- 3
NR ಕಾಂಗ್ರೆಸ್- 2
ಇತರ-1
ಬೆಂಗಳೂರು ಮೂಲಕ ಸರ್ವೇ ಎಜೆನ್ಸಿ ಹೇಳಿರುವ ಪ್ರಕಾರ, ಪುದುಚೇರಿ ಮಾಜಿ ಮುಖ್ಯಮಂತ್ರಿ ಎನ್ ನಾರಾಯಣಸ್ವಾಮಿ ಸ್ಥಾಪಿಸಿರುವ NR ಕಾಂಗ್ರೆಸ್ ಪಕ್ಷ ಶೇಕಡಾ 25 ರಷ್ಟು ವೋಟ್ ಶೇರ್ ಪಡೆಯಲಿದೆ ಎಂದಿದೆ. ಇನ್ನು ಬಿಜೆಪಿ ಶೇಕಾಡ 24, ಹಾಗೂ ಕಾಂಗ್ರೆಸ್ ಶೇಕಡಾ 20 ರಷ್ಟು ವೋಟ್ ಶೇರ್ ಪಡೆಯಲಿದೆ ಎಂದಿದೆ
ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ: ಕೇಂದ್ರ ಘೋಷಣೆ!.
NR ಕಾಂಗ್ರೆಸ್, ಬಿಜೆಪಿ ಹಾಗೂ ಎಐಎಡಿಎಂಕೆ ಜೊತೆಯಾದರೆ ಪುದುಚೇರಿ ಸಂಪೂರ್ಣವಾಗಿ ಈ ಮೈತ್ರಿ ಪಕ್ಷ ಕೈವಶಮಾಡಲಿದೆ. ಈ ಕುರಿತು ವಿವರನ್ನು ಸರ್ವೆ ಬಹಿರಂಗ ಪಡಿಸಿದೆ
ಬಿಜೆಪಿ. ಎಐಎಡಿಎಂಕೆ, NR ಕಾಂಗ್ರೆಸ್ - 28
ಡಿಎಂಕೆ-ಕಾಂಗ್ರೆಸ್ - 1
ಇತರ - 1
ಪುದುಚೇರಿ ಚುನಾವಣೆ ಎಪ್ರಿಲ್ 06 ರಂದು ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ.02ರಂದು ಫಲಿತಾಂಶ ಹೊರಬೀಳಲಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ