ಟಿಎಂಸಿ ಮತ್ತೆ ಗೆದ್ದರೆ ಕಾಶ್ಮೀರವಾಗಲಿದೆ ಬಂಗಾಳ: ಸುವೇಂದು

Published : Mar 08, 2021, 09:57 AM IST
ಟಿಎಂಸಿ ಮತ್ತೆ ಗೆದ್ದರೆ ಕಾಶ್ಮೀರವಾಗಲಿದೆ ಬಂಗಾಳ: ಸುವೇಂದು

ಸಾರಾಂಶ

ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಗ್ದಾಳಿ| ಟಿಎಂಸಿ ಮತ್ತೆ ಗೆದ್ದರೆ ಕಾಶ್ಮೀರವಾಗಲಿದೆ ಬಂಗಾಳ| ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಇಲ್ಲ​ದಿ​ದ್ದರೆ, ಈ ದೇಶ ಇಸ್ಲಾಂ ದೇಶ​ವಾ​ಗಿ​ರು​ತ್ತಿತ್ತು: ಸುವೇಂದು|

ಕೋಲ್ಕ​ತಾ(ಮಾ.08): ಈ ಬಾರಿಯ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ನೇತೃ​ತ್ವದ ಟಿಎಂಸಿ ಅಧಿ​ಕಾ​ರಕ್ಕೇರಿ​ದರೆ, ಪಶ್ಚಿ ಮ ಬಂಗಾ​ಳ​ವನ್ನು ಮತ್ತೊಂದು ಕಾಶ್ಮೀ​ರ​ವ​ನ್ನಾಗಿ ಪರಿ​ವ​ರ್ತಿ​ಸ​ಲಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿ​ಕಾರಿ ಆತಂಕ ವ್ಯಕ್ತ​ಪ​ಡಿ​ಸಿ​ದ್ದಾರೆ.

ಇಲ್ಲಿ ಬಿಜೆಪಿ ರಾರ‍ಯಲಿ​ಯ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಸುವೇಂದು ಅಧಿ​ಕಾರಿ, ‘ಜನ​ಸಂಘದ ಸಂಸ್ಥಾ​ಪ​ಕ​ರಲ್ಲಿ ಒಬ್ಬ​ರಾದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಇಲ್ಲ​ದಿ​ದ್ದರೆ, ಈ ದೇಶ ಇಸ್ಲಾಂ ದೇಶ​ವಾ​ಗಿ​ರು​ತ್ತಿತ್ತು. ಅಲ್ಲದೆ ನಾವೆ​ಲ್ಲರೂ ಬಾಂಗ್ಲಾ​ದೇ​ಶ​ದ​ಲ್ಲಿ​ರ​ಬೇ​ಕಿತ್ತು. ಇದೀ​ಗ ಮತ್ತೊಮ್ಮೆ ಟಿಎಂಸಿ ಅಧಿ​ಕಾ​ರಕ್ಕೆ ಬಂದಲ್ಲಿ ಪಶ್ಚಿಮ ಬಂಗಾಳ ಕಾಶ್ಮೀರ ಆಗ​ಲಿ​ದೆ’ ಎಂದು ಹೇಳಿ​ದ್ದಾರೆ.

ಫೆ.14ರಂದು ಜೈ ಬಾಂಗ್ಲಾ ಘೋಷ ವಾಕ್ಯದ ಮೂಲಕ ಪಶ್ಚಿಮ ಬಂಗಾ​ಳ​ವನ್ನು ಟಿಎಂಸಿ ಬಂಗ್ಲಾ​ವ​ನ್ನಾಗಿ ಪರಿ​ವ​ರ್ತಿ​ಸಲು ಯತ್ನಿ​ಸು​ತ್ತಿದೆ ಎಂದಿ​ದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸೇಡು ತೀರಿಸಿಕೊಳ್ಳಲು ದನದ ಇಂಜೆಕ್ಷನ್‌ ಚುಚ್ಚಿ 7 ವರ್ಷದ ಬಾಲಕನ ಕೊಂದ 8ನೇ ಕ್ಲಾಸ್‌ ಹುಡುಗ!
ಚಿನ್ನ ಲೇಪದ ಲೆಹಂಗಾ ಧರಿಸಿ ಕಣ್ಮನ ಸೆಳೆದ ಮುಖ್ಯಮಂತ್ರಿ ಪತ್ನಿ: ಜಾಲತಾಣದಲ್ಲಿ ಭಾರಿ ಡಿಮಾಂಡ್​