3 ವರ್ಷದ ಬಾಲಕಿ ರೇಪ್‌ ಮಾಡಿದಾತಗೆ ಫೆ. 29ಕ್ಕೆ ಗಲ್ಲು

By Kannadaprabha News  |  First Published Jan 31, 2020, 1:43 PM IST

ನಿರ್ಭಯಾ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಇನ್ನೋರ್ವ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 29 ರಂದು ಗಲ್ಲು ಶಿಕ್ಷೆಗೆ ಸಮಯ ನಿಗದಿ ಮಾಡಲಾಗಿದೆ. 


ಸೂರತ್‌ [ಜ.31]: ನಿರ್ಭಯಾ ಅತ್ಯಾಚಾರಿಗಳು ಗಲ್ಲು ಶಿಕ್ಷೆ ಎದುರು ನೋಡುತ್ತಿರುವ ಸಂದರ್ಭದಲ್ಲೇ, ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ 22 ವರ್ಷದ ದೋಷಿಯೊಬ್ಬನಿಗೆ ಗುಜರಾತಿನ ಸೂರತ್‌ನ ಕೋರ್ಟ್‌ವೊಂದು ಡೆತ್‌ ವಾರೆಂಟ್‌ ಜಾರಿ ಮಾಡಿದೆ. 

ಫೆ.29ರಂದು ಅನಿಲ್‌ ಯಾದವ್‌ ಎಂಬಾತನನ್ನು ಗಲ್ಲಿಗೆ ಏರಿಸುವಂತೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಪಿ.ಎಸ್‌. ಕಾಲಾ ಹೊರಡಿಸಿರುವ ಡೆತ್‌ ವಾರೆಂಟ್‌ನಲ್ಲಿ ಸೂಚಿಸಲಾಗಿದೆ. 2018ರಲ್ಲಿ ಸೂರತ್‌ನ ಗೋದದರ ಪ್ರದೇಶದಲ್ಲಿ ಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 

Tap to resize

Latest Videos

undefined

ನಿರ್ಭಯಾಳನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಲವ್ ಯೂ ನಿರ್ಭಯಾ'.

ಬಾಲಕಿಯ ಮನೆಯಲ್ಲಿ ವಾಸವಾಗಿದ್ದ ಯಾದವ್‌ ಈ ಕೃತ್ಯ ಎಸಗಿದ್ದು ಸಾಬೀತಾಗಿತ್ತು. ಸ್ಥಳೀಯ ಕೋರ್ಟ್‌ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆ (ಪೋಸ್ಕೋ) ಅಡಿಯಲ್ಲಿ ಯಾದವ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು. 

ಈ ತೀರ್ಪನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಯಾದವ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿಲ್ಲ. ಹೀಗಾಗಿ ದೋಷಿಗೆ ಡೆತ್‌ ವಾರಂಟ್‌ ಜಾರಿ ಮಾಡಿ ಸಾಬರಿಮತಿ ಜೈಲಿನಲ್ಲಿ ಫೆ.29ರ ಬೆಳಗ್ಗೆ 4.30ಕ್ಕೆ ಗಲ್ಲು ಶಿಕ್ಷೆ ನಿಗದಿ ಪಡಿಸಲಾಗಿದೆ.

ಜನವರಿ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!