
ರಾಮೇಶ್ವರಂ [ಜ.31]: ಕಾಗೆಗಳ ಮಾಂಸವನ್ನು ಕೋಳಿ ಮಾಂಸದ ಅಂಗಡಿಗಳಿಗೆ ಪೂರೈಸುತ್ತಿದ್ದ ಪ್ರಕರಣ ಭೇದಿಸಿರುವ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೆ, ಈ ಆರೋಪಿಗಳಿಂದ ಸುಮಾರು 150 ಸತ್ತ ಕಾಗೆಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದೇವನಗರಿ ಎಂದೇ ಪ್ರಸಿದ್ಧವಾದ ರಾಮೇಶ್ವರಂ ನಗರದಲ್ಲಿ ಭಕ್ತಾದಿಗಳು, ತಮ್ಮ ಪೂರ್ವಜರ ಆತ್ಮಶಾಂತಿಗಾಗಿ ಇಡಲಾಗಿದ್ದ ಪಿಂಡದ ಆಹಾರ ತಿಂದ ಕೆಲ ಕಾಗೆಗಳು ಸತ್ತಿದ್ದವು.
ಚೀನಾಕ್ಕೆ ಹೋದರೆ ಹಸಿಯಾದ ಮಾಂಸ ತಿನ್ನಬೇಡಿ: ಕೇಂದ್ರ..
ಈ ಸಂಬಂಧ ಭಕ್ತಾದಿಗಳೇ ನೀಡಿದ ದೂರಿನ ಮೇರೆಗೆ, ಕಾರಾರಯಚರಣೆ ಕೈಗೊಂಡ ಅಧಿಕಾರಿಗಳು, ದುಷ್ಕರ್ಮಿಗಳು ಕಾಗೆಗಳನ್ನೇ ಕೋಳಿ ಮಾಂಸದ ಅಂಗಡಿಗಳಿಗೆ ಮಾರುತ್ತಿದ್ದನ್ನು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ