Collegium Row: '10 ದಿನ ಕೊಡ್ತೀವಿ, ಏನ್‌ ಮಾಡ್ತೀರೋ ನೋಡಿ..' ಕೇಂದ್ರದ ವಿರುದ್ಧ ಸುಪ್ರೀಂ ಗರಂ!

Published : Feb 03, 2023, 03:07 PM ISTUpdated : Feb 03, 2023, 03:31 PM IST
Collegium Row: '10 ದಿನ ಕೊಡ್ತೀವಿ, ಏನ್‌ ಮಾಡ್ತೀರೋ ನೋಡಿ..' ಕೇಂದ್ರದ ವಿರುದ್ಧ ಸುಪ್ರೀಂ  ಗರಂ!

ಸಾರಾಂಶ

ಜಡ್ಜ್‌ಗಳ ನೇಮಕ ಹಾಗೂ ವರ್ಗಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರಿಂದ ಸ್ವತಃ ಸುಪ್ರೀಂ ಕೋರ್ಟ್‌ ಕೆಲವು ಕಠಿಣ ನಿರ್ಧಾರಗಳನ್ನು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದೆ.  

ನವದೆಹಲಿ (ಫೆ.3): ಕೊಲಿಜಿಯಂ ಶಿಫಾರಸು ಮಾಡಿರುವ ನ್ಯಾಯಾಧೀಶರುಗಳನ್ನು ನೇಮಕ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿಳಂಬ ನೀತಿಯ ವಿರುದ್ಧ ಸುಪ್ರೀಂ ಕೋರ್ಟ್‌ ಶುಕ್ರವಾರ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ. ಇದು ಹೀಗೆ ಮುಂದುವರಿದಲ್ಲಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರ ಪೀಠವು ಅಟಾರ್ನಿ ಜನರಲ್ ಎನ್ ವೆಂಕಟರಮಣಿ ಅವರನ್ನು ಡಿಸೆಂಬರ್‌ನಲ್ಲಿ ಹೊರಡಿಸಿದ ಐವರು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸುವ ಕೊಲಿಜಿಯಂ ಪ್ರಸ್ತಾವನೆಯನ್ನು ಯಾವಾಗ ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರಶ್ನೆ ಮಾಡಿತು. ಇದಕ್ಕೆ ಉತ್ತರ ನೀಡಿದ ಎಜಿ ಶೀಘ್ರದಲ್ಲೇ ಇದನ್ನು ಮಾಡಲಾಗುವುದು ಎಂದು ಹೇಳಿದರು. ಬಳಿಕ ಪೀಠ ಎಜಿ ಅವರ ಹೇಳಿಕೆಯನ್ನು ತನ್ನ ಆದೇಶದಲ್ಲಿ ದಾಖಲಿಸಲು ಮುಂದಾಯಿತು. "ಸುಪ್ರೀಂಕೋರ್ಟ್‌ಗೆ ಐದು ಶಿಫಾರಸುಗಳನ್ನು ಮಾಡಲಾಗಿದ್ದು, ಐದು ದಿನಗಳಲ್ಲಿ ವಾರಂಟ್‌ಗಳನ್ನು ನೀಡಲಾಗುವುದು ಎಂದು ಎಜಿ ಹೇಳಿಕೆ ಸಲ್ಲಿಸಿದ್ದಾರೆ' ಎಂದು ಹೇಳಿತು.

ಈ ಹಂತದಲ್ಲಿ ಮಾತನಾಡಿದ ಎಜಿ, ಈ ಹಂತದಲ್ಲಿ ಇದನ್ನು ದಾಖಲು ಮಾಡಲು ಅಗತ್ಯವಿಲ್ಲ. ಇದು ಸಾಧ್ಯವಾಗಬಹುದು ಎಂದು ಹೇಳಿದ್ದೇನೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಸ್ಟೀಸ್‌ ಕೌಲ್‌, ಪ್ರತಿ ಬಾರಿಯೂ ಇದು ಆಗುತ್ತದೆ ಎಂದು ಹೇಳುತ್ತಿದ್ದೀರಿ. ಆದರೆ, ಯಾವಾಗ ಆಗುತ್ತದೆ ಎನ್ನುವುದು ನಮ್ಮ ಪ್ರಶ್ನೆ. ಸುಮಾರು ವರ್ಷಗಳಿಂದ ಇದು ಆಗಿಯೇ ಇಲ್ಲ ಎಂದು ಹೇಳಿದರು. ಮುಂದಿನ ಶುಕ್ರವಾರದ ವೇಳೆಗೆ ಎಜಿ ಏನಾದರೂ "ಒಳ್ಳೆಯ ಸುದ್ದಿ" ನೀಡಲಿದ್ದಾರೆ ಎಂದು ಕೋರ್ಟ್ ಹೇಳಿದರೂ,  ವೆಂಕಟರಮಣಿ ಹೆಚ್ಚಿನ ಸಮಯ ಕೇಳಿದರು.

ಇದಕ್ಕೆ ತಕ್ಷಣವೇ ಉತ್ತರ ನೀಡಿದ ಜಸ್ಟೀಸ್‌ ಕೌಲ್‌. 'ಸರಿ ಹಾಗಿದ್ದರೆ, 10 ದಿನ ತೆಗೆದುಕೊಳ್ಳಿ. ಐದು ಜಡ್ಜ್‌ಗಳ ನೇಮಕ ವಿಚಾರ, ವರ್ಗಾವಣೆ ಹಾಗೂ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರ ವಿಚಾರದಲ್ಲಿ ನಿಮ್ಮ ಮಾತನ್ನು ತೆಗೆದುಕೊಳ್ಳುತ್ತಿದ್ದೇನೆ. ಈ ಎಲ್ಲದಕ್ಕಾಗಿ 10 ದಿನಗಳ ಕಾಲಾವಕಾಶ ನೀಡುತ್ತಿದ್ದೇನೆ' ಎಂದು ಹೇಳುವುದರೊಂದಿಗೆ ವಿಚಾರಣೆ ಮುಗಿಸಿದರು.

ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶರ ವರ್ಗಾವಣೆಗೆ ಕೊಲಿಜಿಯಂ ನೀಡಿದ್ದ ಪ್ರಸ್ತಾವನೆಗಳ ಬಗ್ಗೆಯೂ ನ್ಯಾಯಾಲಯವು ಸಣ್ಣ ಪ್ರಮಾಣದಲ್ಲಿ ಚರ್ಚೆ ಮಾಡಿತು. "ವರ್ಗಾವಣೆ ಆದೇಶಗಳು ಜಾರಿಯಾಗದಿದ್ದರೆ, ನಾವೇನು ಮಾಡಬೇಕು ಎಂದು ಬಯಸಿದ್ದೀರಿ? ಅವರಿಗೆ ನೀಡಿದ ಆದೇಶವನ್ನು ಹಿಂಪಡೆಯಬೇಕೇ? ಎ ಕೋರ್ಟ್‌ಗಳ ಬದಲಾಗಿ ಬಿ ಕೋರ್ಟ್‌ನಲ್ಲಿ ಕೆಲಸ ಮಾಡಬೇಕು ಎಂದು ನಾವು ಭಾವಿಸಿದರೆ, ಇದು ಬಹಳ ಗಂಭೀರ ವಿಚಾರ ಎಂದು ನಾವು ಅಂದುಕೊಲ್ಳಯತ್ತೇವೆ. ನಾವು ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತಿದ್ದೀರಿ. ಹೊಸ ನೇಮಕಗಳ ಬಗ್ಗೆ ನಿಮಗೆ ಏನನ್ನಾದರೂ ಹೇಳಬೇಕು ಎಂದನಿಸಿದೆ ಎನ್ನುವುದು ನಮಗೆ ಗೊತ್ತು. ಆದರೆ, ವರ್ಗಾವಣೆಯಲ್ಲಿ ಯಾವ ವಿಷಯವಿದೆ? ಇದು ಗಂಭೀರ ವಿಚಾರ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಕನ್ನಡಿಗನ ಹೆಸರು ಶಿಫಾರಸು!

ಎಜಿ ಅವರು ಪ್ರಕರಣದ ಅಲ್ಪಾವಧಿಯ ಮುಂದೂಡಿಕೆಯನ್ನು ಕೋರಿದಾಗ, ನ್ಯಾಯಾಲಯವು ಕಠಿಣ ನಿಲುವು ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಲ್ಲದೆ, ಹೇಳಿಕೆಯನ್ನು ದಾಖಲು ಮಾಡುವಂತೆ ಎಜಿಗೆ ಎಚ್ಚರಿಸಿತು. "ವರ್ಗಾವಣೆಯಲ್ಲಿನ ಯಾವುದೇ ವಿಳಂಬವು ಆಡಳಿತ ಮತ್ತು ನ್ಯಾಯಾಂಗ ಕ್ರಮಗಳಿಗೆ ಕಾರಣವಾಗಬಹುದು ಎಂದು ನಾವು ವಕೀಲರಿಗೆ ತಿಳಿಸಿದ್ದೇವೆ." ಎಂದು ಕೋರ್ಟ್‌ ಹೇಳಿತು.

ಕೊಲಿಜಿಯಂ: ಸರ್ಕಾರಕ್ಕೆ ಗಡುವು ನೀಡುವಂತೆ ಸುಪ್ರೀಂಗೆ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಒತ್ತಾಯ

ವಿಚಾರಣೆಯ ಕೊನೆಯಲ್ಲಿ, ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಅವರು 2019 ರಿಂದ ಕೊಲಿಜಿಯಂನ ಪುನರಾವರ್ತನೆಗಳನ್ನು ಸರ್ಕಾರ ಅನುಸರಿಸದ ಹಲವಾರು ನಿದರ್ಶನಗಳನ್ನು ಮಂಡನೆ ಮಾಡಿದರು. "ಪುನರಾವರ್ತನೆಯ ನಂತರ, ಅವರಿಗೆ ಯಾವುದೇ ಆಯ್ಕೆಯಿಲ್ಲ! ಅವರು ಅದನ್ನು ಮತ್ತೆ ಮತ್ತೆ ಕಳುಹಿಸಲು ಸಾಧ್ಯವಿಲ್ಲ," ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!