ಯೋಗಿ ಸರ್ಕಾರ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್, ಒಬಿಸಿ ಮೀಸಲು ಹಗ್ಗಜಗ್ಗಾಟದಲ್ಲಿ ಲಖನೌ ಆದೇಶಕ್ಕೆ ತಡೆ!

By Suvarna NewsFirst Published Jan 4, 2023, 9:24 PM IST
Highlights

ಸ್ಥಳೀಯ ಚುನಾವಣೆಯಲ್ಲಿ ಒಬಿಸಿ ಮೀಸಲು ಕುರಿತು ಯೋಗಿ ಸರ್ಕಾರದ ನಿಲುವಿಗೆ ಸುಪ್ರೀಂ ಮನ್ನಣೆ ನೀಡಿದೆ. ಇಷ್ಟೇ ಅಲ್ಲ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಯೋಗಿ ಸರ್ಕಾರಕ್ಕೆ ಬಹುದೊಡ್ಡ ಗೆಲುವು ಸಿಕ್ಕಿದೆ
 

ನವದೆಹಲಿ(ಜ.04): ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಸರ್ಕಾರದ ಕರುಡು ಆದೇಶವನ್ನು ರದ್ದುಗೊಳಿಸಿ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಮೀಸಲು ನೀಡದೇ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂದು ಅಲಹಾಬಾದ್‌ ಹೈಕೋರ್ಟ್ ಆದೇಶ ನೀಡಿತ್ತು. ಇದರ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಯೋಗಿ ಸರ್ಕಾರಕ್ಕೆ ಗೆಲುವಾಗಿದೆ.  ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಇಲ್ಲದೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಸಮಿತಿಗೆ ಸೂಚಿಸಿದ್ದ ಅಲಹಾಬಾದ್‌ ಹೈಕೋರ್ಚ್‌ ಆದೇಶಕ್ಕೆ ಸುಪ್ರೀಂ ಕೋರ್ಚ್‌ ಬುಧವಾರ ತಡೆ ನೀಡಿದೆ.

ಹೈಕೋರ್ಚ್‌ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಮಾಡಿದ ಮನವಿಯ ಮೇಲೆ ಸುಪ್ರೀಂ ಕೋರ್ಟು ಯೋಗಿ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ ಮತ್ತು ಪ್ರತಿಕ್ರಿಯೆ ಸಲ್ಲಿಸಲು 3 ವಾರಗಳ ಕಾಲಾವಕಾಶ ನೀಡಿದೆ. ಅಲ್ಲದೆ, ಸರ್ಕಾರ ರಚಿಸಿರುವ ಸಮಿತಿ ಮೀಸಲನ್ನು ಮಾ.31ರೊಳಗೆ ನಿಗದಿ ಮಾಡಬೇಕೆಂದು ಸೂಚಿಸಿದೆ. ಒಬಿಸಿಗಳಿಗೆ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಸ್ಥಾನಗಳನ್ನು ಮೀಸಲಿಡಲು ತಾನು ಹೊರಡಿಸಿದ್ದ ಡಿ.5ರ ಕರಡು ಅಧಿಸೂಚನೆಯನ್ನು ಹೈಕೋರ್ಚ್‌ ತಪ್ಪಾಗಿ ರದ್ದುಗೊಳಿಸಿದೆ ಎಂದು ಯೋಗಿ ಸರ್ಕಾರ ವಾಸಿಸಿದೆ.

ಬೆಕ್ಕನ್ನು ಮಡಿಲಲ್ಲಿರಿಸಿಕೊಂಡು ಮುದ್ದು ಮಾಡುತ್ತಿರುವ ಯೋಗಿ ಆದಿತ್ಯನಾಥ್: ಫೋಟೋ ವೈರಲ್

‘ಸುಪ್ರೀಂ ಕೋರ್ಚ್‌ ನಿಗದಿಪಡಿಸಿದ ‘ತ್ರಿವಳಿ ಪರೀಕ್ಷಾ ಸೂತ್ರ’ದಂತೆ ಉತ್ತರ ಪ್ರದೇಶ ಸರ್ಕಾರ ಒಬಿಸಿ ಮೀಸಲು ನೀಡಿಲ್ಲ’ ಎಂದಿದ್ದ ಹೈಕೋರ್ಟು, ‘ಒಬಿಸಿ ಮೀಸಲು ಇಲ್ಲದೇ ಚುನಾವಣೆ ನಡೆಸಿ’ ಎಂದು ಆದೇಶಿಸಿತ್ತು. 2023ರ ಜ.31ರೊಳಗೆ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿಯಲಿದ್ದು, ಅಷ್ಟರೊಳಗೆ ಚುನಾವಣೆ ನಡೆಸಬೇಕಿದೆ. ಹೀಗಾಗಿ ರಾಜ್ಯ ಸರ್ಕಾರ ಡಿ.5ರಂದು ಕರಡು ಮೀಸಲು ಪಟ್ಟಿಸಿದ್ಧಪಡಿಸಿ ಕರಡು ಅಧಿಸೂಚನೆ ಹೊರಡಿಸಿತ್ತು.

ಆದರೆ, ‘ಸುಪ್ರೀಂ ಕೋರ್ಚ್‌ ಸೂಚಿಸಿದ ‘ತ್ರಿವಳಿ ಪರೀಕ್ಷಾ ಸೂತ್ರ’ವನ್ನು ಅನುಸರಿಸದೆ ಒಬಿಸಿ ಮೀಸಲಾತಿ ಕರಡನ್ನು ಯೋಗಿ ಆದಿತ್ಯನಾಥ್‌ ಸರ್ಕಾರ ಸಿದ್ಧಪಡಿಸಿದೆ. ಹೀಗಾಗಿ ಕರಡು ಅಧಿಸೂಚನೆ ರದ್ದುಗೊಳಿಸಬೇಕು’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಅರ್ಜಿಗಳನ್ನು ಮಾನ್ಯ ಮಾಡಿದ ವಿಭಾಗೀಯ ಪೀಠ, ಕರಡು ಅಧಿಸೂಚನೆ ರದ್ದು ಮಾಡಿತು.

‘ರಾಜ್ಯ ಸರ್ಕಾರವು ಸುಪ್ರೀಂ ಕೋರ್ಚ್‌ ಸೂತ್ರವನ್ನು ಅನುಸರಿಸಬೇಕು ಮತ್ತು ಮೀಸಲಾತಿ ನಿಗದಿಪಡಿಸುವ ಮೊದಲು ಒಬಿಸಿಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಬೇಕು. ಅಧ್ಯಯನಕ್ಕೆಂದು ಆಯೋಗವನ್ನು ರಚಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು. ಆದರೆ, ತಾನು ಕ್ಷಿಪ್ರ ಸಮೀಕ್ಷೆ ನಡೆಸಿದ್ದು, ತ್ರಿವಳಿ ಪರೀಕ್ಷಾ ಸೂತ್ರದಂತೆಯೇ ಕರಡು ಉತ್ತಮವಾಗಿದೆ ಎಂದಿತ್ತು.

 

ರಾಮಮಂದಿರದ ಆವರಣದಲ್ಲೇ ರಾಮಾಯಣ ಕಾಲದ ಸ್ಮಾರಕಗಳ ಮರುಸ್ಥಾಪನೆಗೆ ನಿರ್ಧಾರ

3 ಹಂತದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 17 ಮುನ್ಸಿಪಲ… ಕಾರ್ಪೊರೇಷನ್‌ಗಳ ಮೇಯರ್‌ಗಳು, 200 ಮುನ್ಸಿಪಲ… ಕೌನ್ಸಿಲ್‌ಗಳು ಮತ್ತು 545 ನಗರ ಪಂಚಾಯತ್‌ಗಳ ಅಧ್ಯಕ್ಷರಿಗೆ ರಾಜ್ಯ ಸರ್ಕಾರವು ಈ ತಿಂಗಳ ಆರಂಭದಲ್ಲಿ ಮೀಸಲಾತಿ ಸ್ಥಾನಗಳ ತಾತ್ಕಾಲಿಕ ಪಟ್ಟಿಬಿಡುಗಡೆ ಮಾಡಿತ್ತು ಮತ್ತು 7 ದಿನಗಳಲ್ಲಿ ಸಲಹೆ/ಆಕ್ಷೇಪಣೆಗಳನ್ನು ಕೇಳಿತ್ತು. ಹೈಕೋರ್ಚ್‌ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ವಕ್ತಾರ ಸುನೀಲ… ಸಿಂಗ್‌ ಸಜನ್‌, ಒಬಿಸಿಗೆ ಮೀಸಲು ದೊರಕದ ಹಿಂದೆ ಬಿಜೆಪಿ ಸರ್ಕಾರದ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.

click me!