ಸೆಕ್ಸ್ ಉತ್ಸಾಹ ಕುಗ್ಗಿಸಿದೆ MP ಸರ್ಕಾರ, ಬುಡಕಟ್ಟು ವ್ಯಕ್ತಿ ಕೇಳಿದ್ದು 10ಸಾವಿರ ಕೋಟಿ ರೂ ಪರಿಹಾರ!

Published : Jan 04, 2023, 08:05 PM ISTUpdated : Jan 04, 2023, 08:09 PM IST
ಸೆಕ್ಸ್ ಉತ್ಸಾಹ ಕುಗ್ಗಿಸಿದೆ MP ಸರ್ಕಾರ, ಬುಡಕಟ್ಟು ವ್ಯಕ್ತಿ ಕೇಳಿದ್ದು 10ಸಾವಿರ ಕೋಟಿ ರೂ ಪರಿಹಾರ!

ಸಾರಾಂಶ

ಒಂದಲ್ಲ, ಎರಡಲ್ಲ, ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಲಾಗಿದೆ. ಮಧ್ಯ ಪ್ರದೇಶ ಸರ್ಕಾರದ ವಿರುದ್ಧ ಬುಡಕಟ್ಟು ವ್ಯಕ್ತಿಯ ಕಾನೂನು ಹೋರಾಟ ಆರಂಭಗೊಂಡಿದೆ. ಅಷ್ಟಕ್ಕೂ ಈತ ಇಷ್ಟು ಮೊತ್ತ ಪರಿಹಾರ ಕೇಳಲು ಕಾರಣವೇನು?  ಇಲ್ಲಿದೆ ಸಂಪೂರ್ಣ ವಿವರ.

ಇಂದೋರ್(ಜ.04): ಮಧ್ಯಪ್ರದೇಶ ಸರ್ಕಾರಕ್ಕೆ ಇದೀಗ ತಲೆನೋವು ಶುರುವಾಗಿದೆ. ಬುಡಕಟ್ಟು ವ್ಯಕ್ತಿ ಬರೋಬ್ಬರಿ 10,000 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾನೆ. ಈ ಕುರಿತು ಕಾನೂನು ಹೋರಾಟ ಆರಂಭಿಸಿದ್ದಾರೆ. ಇದಕ್ಕೆ ಕಾರಣ ತಪ್ಪಿಲ್ಲದ ಕಾರಣಕ್ಕೆ ಈತ ಅನುಭವಿಸಿದ ಶಿಕ್ಷೆ. ಹೌದು, ಅಕ್ಟೋಬರ್ 2022ರಲ್ಲಿ ಸಾಮೂಹಿಕ ಅತ್ಯಾಚಾರ ಆರೋಪದಡಿ ಬುಡಕಟ್ಟು ವ್ಯಕ್ತಿ ಕಾಂತಿಲಾಲ್ ಭೀಲ್ ಜೈಲು ಸೇರಿದ್ದ. 666 ದಿನ ಜೈಲು ಶಿಕ್ಷೆ ಅನುಭವಿಸಿದ ಕಾಂತಿಲಾಲ್‌ನನ್ನು ಕೋರ್ಟ್ ಖುಲಾಸೆಗೊಳಿಸಿದೆ. ಸಾಮೂಹಿಕ ಅತ್ಯಾಚಾರದಲ್ಲಿ ಈತನ ಪಾತ್ರವಿಲ್ಲ ಅನ್ನೋದು ಸಾಕ್ಷ್ಯಗಳಿಂದ ಸಾಬೀತಾಗಿತ್ತು. 35 ವರ್ಷಗ ಕಾಂತಿಲಾಲ್ ಜೈಲಿನಿಂದ ಹೊರಬಂದ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದಾನೆ. ತನಗಾಗಿರುವ ನಷ್ಟದ ದೊಡ್ಡ ಪಟ್ಟಿಯನ್ನೇ ಮುಂದಿಟ್ಟಿದ್ದಾನೆ. ಇದರಲ್ಲಿ ಲೈಂಗಿಕ ಆಸಕ್ತಿಯನ್ನು ಕುಗ್ಗಿಸಿದ ಕಾರಣವನ್ನೂ ಉಲ್ಲೇಖಿಸಿ ಒಟ್ಟು 10,000 ಕೋಟಿ ರೂಪಾಯಿ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

ಜೈಲಿನಿಂದ ಹೊರಬಂದ ಬೆನ್ನಲ್ಲೇ ತನ್ನ ಆಕ್ರೋಶ ಹೊರಹಾಕಿರುವ ಕಾಂತಿಲಾಲ್, ತನಗಾಗಿರುವ ಅನ್ಯಾಯ, ನಷ್ಟದ ಪ್ರಮಾಣ ಸರ್ಕಾರಕ್ಕೆ ಅರ್ಥವಾಗಬೇಕು ಎಂದು ಪಣತೊಟ್ಟಿದ್ದಾರೆ. ಸರಿಯಾಗಿ ತನಿಖೆ ಮಾಡದ, ಸರಿಯಾದ ದಿಕ್ಕಿನಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕಿದ, ಸರಿಯಾದ ಆರೋಪಿಗಳನ್ನು ಪತ್ತೆ ಹಚ್ಚದ ಸರ್ಕಾರ, ಅದೇ ದಾರಿಯಲ್ಲಿ ಸುಮ್ಮನೆ ಹೋದವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಜೈಲು ಶಿಕ್ಷೆ ನೀಡುತ್ತಿದೆ. ಇದಕ್ಕೆ ನಾನೇ ಸಾಕ್ಷಿ. ಸಾಮೂಹಿಕ ಅತ್ಯಾಚಾರ ಆರೋಪ ಹೊರಿಸಿ ನನನ್ನು 666 ದಿನ ಜೈಲಿಗಟ್ಟಲಾಯಿತು. ನನ್ನ ಪತ್ನಿ, ಮಕ್ಕಳು, ಅನಾರೋಗ್ಯದಿಂದ ಇರುವ ನನ್ನ ತಾಯಿ ಹಾಗೂ ನನ್ನ ಕುಟುಂಬಕ್ಕಾಗಿರುವ ನೋವು ಎಂತದ್ದು ಅನ್ನೋದು ತಿಳಿದಿದೆಯಾ? ಎಂದು ಕಾಂತಿಲಾಲ್ ಪ್ರಶ್ನಿಸಿದ್ದಾರೆ. 

ಸಮ್ಮತಿ ಲೈಂಗಿಕತೆಯ ವಯಸ್ಸು ಕಡಿಮೆ ಮಾಡುವ ಪ್ರಸ್ತಾಪವಿಲ್ಲ; ಕೇಂದ್ರದ ಸ್ಪಷ್ಟನೆ!

ನಾನು ಹಾಗೂ ನನ್ನ ಕುಟುಂಬ ಅನುಭವಿಸಿದ ನೋವು, ಕಷ್ಟಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನನ್ನ ಕುಟುಂಬಕ್ಕಿರುವ ಏಕೈಕ ಆಧಾರ ನಾನು. ನನ್ನ ಆದಾಯದಿಂದಲೇ ಕುಟುಂಬದ ನಿರ್ವಹಣೆ ಆಗುತ್ತಿತ್ತು. ಕಳೆದರುಡ ವರ್ಷ ನಾನು ಜೈಲು ಸೇರಿದ ಕಾರಣ ನನ್ನ ಕುಟುಂಬ ಊಟ ಬಿಡಬೇಕಾಯಿತು. ಒಳ ಉಡುಪು ಖರೀದಿಸಲು ಹಣವಿಲ್ಲದ ಪರಿಸ್ಥಿತಿ ಎದುರಾಯಿತು. ಕುಟುಂಬ ಹಲವು ಅಪಮಾನ ಅನುಭವಿಸಬೇಕಾಯಿತು. ಗ್ಯಾಂಗ್ ರೇಪ್ ಆರೋಪಿ ಕುಟುಂಬ ಅನ್ನೋ ಹಣೆ ಪಟ್ಟಿ ಹೊತ್ತುಕೊಳ್ಳಬೇಕಾಯಿತು. ಯಾರೂ ನೆರವಿಗೆ ಬರಲೇ ಇಲ್ಲ. ನನ್ನ ಹಾಗೂ ಅವರ ಮಾನಸಿಕ ಸ್ಥಿತಿ ಹೇಗಿತ್ತು? ಅನ್ನೋ ಸಣ್ಣ ಅರಿವು ಸರ್ಕಾರಕ್ಕೆ ಇರಲಿಲ್ಲ ಎಂದು ಕಾಂತಿಲಾಲ್ ಹೇಳಿದ್ದಾರೆ.

ಜೈಲು ಸೇರಿದ ಕಾರಣ ನನ್ನ ಉದ್ಯೋಗ ನಷ್ಟವಾಯಿತು. ಜೈಲಿನಲ್ಲಿ ಚರ್ಮ ಸೇರಿದಂತೆ ಹಲವು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ತಲೆನೋವು ಸೇರಿದಂತೆ ಇತರ ಸಮಸ್ಯೆಗಳು ಶುರುವಾಗಿದೆ. ನನ್ನ ಉದ್ಯೋಗ ನಷ್ಟಕ್ಕೆ 1 ಕೋಟಿ ರೂ ಪರಿಹಾರ ನೀಡಬೇಕು, ನನ್ನ ಘನತೆಗೆ ಧಕ್ಕೆ ತಂದ ಕಾರಣಕ್ಕೆ 1 ಕೋಟಿ ರೂ, ನನ್ನ ಕುಟುಂಬದ ಘನತೆ ನಷ್ಟಕ್ಕೆ 1 ಕೋಟಿ, ಕುಟುಂಬ ಅನುಭವಿಸಿದ ಕಷ್ಟಕ್ಕೆ 1 ಕೋಟಿ, ಏನೂ ಅರಿಯದ ನನ್ನ ಮಕ್ಕಳ ಶಿಕ್ಷಣ ನಷ್ಟವಾಗಿರುವ ಕಾರಣಕ್ಕೆ 1 ಕೋಟಿ, ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಲು ಸಾಧ್ಯವಾಗಲಿಲ್ಲ ಇದಕ್ಕಾಗಿ 1 ಕೋಟಿ, ನಾನು 666 ದಿನ ಜೈಲು ಸೇರಿದ ಕಾರಣ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿದ್ದೇನೆ ಇದರಿಂದ ಲೈಂಗಿಕ ಆಸಕ್ತಿಯೂ ಕುಗ್ಗಿಹೋಗಿದೆ. ಇದಕ್ಕಾಗಿ 1 ಕೋಟಿ.. ಹೀಗೆ ತನ್ನ 666 ದಿನದ ಜೈಲು ಶಿಕ್ಷೆಗೆ ಪ್ರತಿ ನಷ್ಟವನ್ನು ಲೆಕ್ಕಾಚಾರ ಹಾಕಿ ಒಟ್ಟು 10,000 ಕೋಟಿ ರೂಪಾಯಿ ಹಣವನ್ನು ಮಧ್ಯಪ್ರದೇಶ ಸರ್ಕಾರ ನೀಡಬೇಕು ಎಂದಿದ್ದಾನೆ.

ದಿನ ರಾತ್ರಿ ಸೆಕ್ಸ್ ಇಲ್ಲ ಅಂದ್ರೆ ಬೆಳಗ್ಗೆ ಎದ್ದಾಗ ತೃಪ್ತಿಯೇ ಇರಲ್ಲ; ಗಾಯಕಿ ರಿಹಾನಾ

ಅನುಮಾನದ ಕಾರಣಕ್ಕೆ ವ್ಯಕ್ತಿಯೊರ್ವನ ಬಂಧಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕ್ಷ್ಯಗಳು ಇರಬೇಕು. ಅಥವಾ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು. ಆದರೆ ಈ ಪ್ರಕರಣದಲ್ಲಿ ಪೊಲೀಸರು ಕಾಂತಿಲಾಲ್ ವಿರುದ್ದ ಒಂದೇ ಒಂದು ಸಾಕ್ಷ್ಯ ನೀಡಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ಈತನ ಕುರಿತು ಸಂಗ್ರಹಿಸಿರುವ ಇತರ ಮಾಹಿತಿಗಳಲ್ಲಿ ಕಾಂತಿಲಾಲ್ ಉತ್ತಮ ವ್ಯಕ್ತಿ ಅನ್ನೋ ಅಭಿಪ್ರಾಯವಿದೆ. ಹೀಗಾಗಿ ಸೆಷನ್ ಕೋರ್ಟ್ ಕಾಂತಿಲಾಲ್ ಮೇಲೆ ಎಲ್ಲಾ ಆರೋಪ ಖುಲಾಸೆಗೊಳಿಸಿ ಬಿಡುಗಡೆ ಮಾಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ