ಎಣ್ಣೆ ವಿಷ್ಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಕುಡುಕರ ಅಡ್ಡಿಪಡಿಸಲು ನಿರಾಕರಿಸಿದ ಕೋರ್ಟ್!

By Suvarna NewsFirst Published Sep 23, 2022, 5:01 PM IST
Highlights

ಕುಡುಕರು ಅಂತಾ ಅಸಡ್ಡೆಯಿಂದ ನೋಡಬೇಡಿ. ಇದೀಗ ಕುಡುಕರು ಹಿರಿ ಹಿರಿ ಹಿಗ್ಗುವಂತೆ ಮಾಡಿದ ಘಟನೆಯೊಂದು ನಡೆದಿದೆ. ಕುಡುಕರ ಎಣ್ಣೆ ವಿಚಾರ ಚರ್ಚೆ ನಡೆದಿರುವುದು ಹಾದಿ ಬೀದಿಯಲ್ಲಿ ಅಲ್ಲ. ಸುಪ್ರೀಂ ಕೋರ್ಟ್‌ನಲ್ಲಿ. ಇಷ್ಟೇ ಅಲ್ಲ ಈ ವಾದ ವಿವಾದದಲ್ಲಿ ಕುಡುಕರ ಪರ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 
 

ನವದೆಹಲಿ(ಸೆ.23):  ಇದು ಎಣ್ಣೆ ವಿಷ್ಯ. ಬೇಡವೋ ಶಿಷ್ಯಾ ಅಂತೂ ಮಾರುದ್ದ ದೂರ ಹೋಗಬೇಕಿಲ್ಲ. ಕಾರಣ ಮಿತವಾಗಿ ಬಳಸಿದರೆ ಎಣ್ಣೆ ಒಳ್ಳೇದು ಅಂತಾ ಹಲವರು ಹೇಳಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಕುಡುಕರ ಪೆಗ್‌ಗೆ ಯಾವುದೇ ಅಡ್ಡಿ ಆತಂಕ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರೇ ಇದೇನಿದು ಅನ್ನೋ ಕುತೂಹಲನಾ. ನಿಮಗೆ ಸಿಗರೇಟ್ ಪ್ಯಾಕ್‌ನಲ್ಲಿ ಅಪಾಯ, ಎಚ್ಚರಿಕೆ ಸ್ಟಿಕ್ಕರ್ ನೋಡಿರುತ್ತೀರಿ. ಇದೇ ರೀತಿಯ ಲೇಬಲ್ ಮದ್ಯ ಬಾಟಲಿ ಮೇಲೆ ಹಾಕಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿಯೊಂದು ಸಲ್ಲಿಕೆಯಾಗಿತ್ತು. ಆದರೆ ಅತ್ಯಂತ ಕುತೂಹಲಕಾರಿ ವಿಚಾರ ಮುಂದಿಟ್ಟ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. 

ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಮನವಿಯೊಂದನ್ನು ಸಲ್ಲಿಕೆ ಮಾಡಿದ್ದರು. ಮದ್ಯ ಆರೋಗ್ಯಕ್ಕೆ ಹಾನಿಕರ(Health). ಇದರಿಂದ ಹಲವರು ಬದುಕು ಕಳೆದುಕೊಂಡಿದ್ದಾರೆ. ಹಲವು ಕುಟುಂಬಗಳು ಅಧೋಗತಿಗೆ ತಲುಪಿದೆ. ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಈ ಮದ್ಯದ ಬಾಟಲಿ(labels on liquor bottles) ಮೇಲೆ ಅಪಾಯ, ಎಚ್ಚರಿಕೆ ಲೇಬಲ್ ಹಾಕಬೇಕು. ಇದಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಬೇಕು ಎಂದು ಅಶ್ವಿನ್ ಕುಮಾರ್ ಉಪಾಧ್ಯಾಯ ಮನವಿ ಸಲ್ಲಿಸಿದ್ದರು. 

 

2.43 ಲಕ್ಷ ಎಣ್ಣೆ ಬಾಟಲಿ ಮೇಲೆ ಹರಿದ ರೋಡ್ ರೋಲರ್, ಕ್ಷಣಾರ್ಧದಲ್ಲೇ 5 ಕೋಟಿ ಮೌಲ್ಯದ ಮದ್ಯ ನಾಶ!

ಜಸ್ಟೀಸ್ ಎಸ್ ಇಂದಿರಾ ಬ್ಯಾನರ್ಜಿ ಹಾಗೂ ಎಸ್ ರವೀಂದ್ರ ಬ್ಯಾನರ್ಜಿ ಅವರಿದ್ದ ದ್ವಿಸದಸ್ಯ ಪೀಠ ಈ ಮನವಿ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ, ಸಿಗರೇಟ್‌ನಲ್ಲಿ ಅಪಾಯದ ಲೇಬಲ್ ಕಡ್ಡಾಯ ಮಾಡಲಾಗಿದೆ. ಇದೇ ರೀತಿ ಆರೋಗ್ಯಕ್ಕೆ ಹಾನಿಕರವಾಗಿರುವ ಮದ್ಯದ ಪ್ರತಿ ಬಾಟಲಿ, ಪ್ಯಾಕ್ ಮೇಲೆ ಅಪಾಯ, ಎಚ್ಚರಿಕೆ(Warning labels) ಸ್ಟಿಕ್ಕರ್ ಹಾಕಲು ಸುಪ್ರೀಂ ಕೋರ್ಟ್ ಆದೇಶಿಸಬೇಕು ಎಂದು ವಾದಿಸಿದರು. 

ಅಶ್ವಿನ್ ಕುಮಾರ್ ಉಪಾಧ್ಯಾಯ ವಾದದ ಬಳಿಕ ದ್ವಿದಸ್ಯ ಪೀಠ ಮಹತ್ವದ ವಿಚಾರ ಮುಂದಿಟ್ಟಿತು. ಹಲವರು ಮದ್ಯವನ್ನು ಮಿತವಾಗಿ ಅಥವಾ ಅಲ್ಪ ಪ್ರಮಾಣದಲ್ಲಿ ಬಳಸುವುದು ಆರೋಗ್ಯಕ್ಕೆ ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದಾರೆ. ಇನ್ನು ಮದ್ಯವನ್ನು ಸಿಗರೇಟಿನ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ.  ಹೀಗಾಗಿ ಮದ್ಯದ ಬಾಟಲಿ ಮೇಲೆ ಎಚ್ಚರಿಕೆ ಲೇಬಲ್ ಆದೇಶ ನೀಡಲು ಸಾಧ್ಯವಿಲ್ಲ. ಇದು ಪಾಲಿಸಿ ವಿಚಾರವಾಗಿದೆ.  ಹೀಗಾಗಿ ನೀವು ಮನವಿಯನ್ನು ಹಿಂಪಡೆಯರಿ ಅಥವಾ ನಾವು ತರಿಸ್ಕರಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಹೇಳಿದೆ.

Viral Video: ಮದ್ಯದಂಗಡಿ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು: ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು

ಈ ವಿಚಾರವನ್ನು ಕಾನೂನು ಆಯೋಗದ ಮುಂದೆ ಮಂಡಿಸಲು ಅವಕಾಶ ನೀಡಬೇಕು ಎಂದು ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಪೀಠದ ಮುಂದೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸುಪ್ರೀಂ ಕೋರ್ಟ್, ಮನವಿ ವಾಪಸ್ ಪಡೆಯಿರಿ ಇಲ್ಲಾ ತಿರಸ್ಕರಿಸುತ್ತೇವೆ ಎಂದು ಕೋರ್ಟ್ ಖಡಕ್ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಅಶ್ವಿನ್ ಕುಮಾರ್ ಉಪಾಧ್ಯಾಯ ಮನವಿ ಹಿಂಪಡೆದಿದ್ದಾರೆ.

click me!