ಮರಣ ಪ್ರಮಾಣಪತ್ರ ಕಳೆದೋಗಿದೆ: ಬದುಕಿರುವಾಗಲೇ ವ್ಯಕ್ತಿ ನೀಡಿದ ಜಾಹೀರಾತು ಫುಲ್ ವೈರಲ್

By Anusha KbFirst Published Sep 23, 2022, 3:33 PM IST
Highlights

ಇಲ್ಲೊಬ್ಬ ತನ್ನ ಮರಣ ಪ್ರಮಾಣಪತ್ರ ಕಳೆದು ಹೋಗಿರುವುದಾಗಿ ಜಾಹೀರಾತು ನೀಡಿದ್ದಾನೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ಕೋಲಾಹಲ ಸೃಷ್ಟಿಸಿದೆ. 

ಪತ್ರಿಕೆಗಳಲ್ಲಿ ಹೆಸರು ಬದಲಾಯಿಸಿರುವ ಬಗ್ಗೆ ಮದುವೆ ಮುಂದೂಡಿರುವ ಬಗ್ಗೆ, ಆಧಾರ್ ಕಾರ್ಡ್, ಪಾನ್‌ ಕಾರ್ಡ್ ಮುಂತಾದ ದಾಖಲೆಗಳನ್ನು ಎಲ್ಲೋ ಕಳೆದು ಹೋಗಿರುವುದರ ಬಗ್ಗೆ ಜಾಹೀರಾತು ನೀಡಿ ಇವುಗಳ ಸಿಕ್ಕಿದವರು ಕೂಡಲೇ ಈ ವಿಳಾಸಕ್ಕೆ ಕಳುಹಿಸುವಂತೆ ಜಾಹೀರಾತು ನೀಡುವುದನ್ನು ನೋಡಿದ್ದೇವೆ. ಹೌದು ಇದು ನಮಗೂ ಗೊತ್ತು ಇದರಲ್ಲೇನು ವಿಶೇಷ ಅಂತೀರಾ. ವಿಶೇಷ ಇರುವುದು ಇಲ್ಲೇ ನೋಡಿ ಇಲ್ಲೊಬ್ಬ ತನ್ನ ಮರಣ ಪ್ರಮಾಣಪತ್ರ ಕಳೆದು ಹೋಗಿರುವುದಾಗಿ ಜಾಹೀರಾತು ನೀಡಿದ್ದಾನೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ಕೋಲಾಹಲ ಸೃಷ್ಟಿಸಿದೆ. 

ಸಾಮಾನ್ಯವಾಗಿ ನಮ್ಮದೇ ಮರಣ ಪ್ರಮಾಣ ಪತ್ರವನ್ನು ನಾವೇ ಪಡೆಯಲಾಗುವುದಿಲ್ಲ. ನಾವು ಸತ್ತ ನಂತರವಷ್ಟೇ ನಮ್ಮ ಕುಟುಂಬದವರಿಗೆ ಈ ಪ್ರಮಾಣ ಪತ್ರ ಸಿಗುತ್ತದೆ. ಸ್ಥಳೀಯ ಪಂಚಾಯತ್‌ಗಳಲ್ಲಿ ಇದಕ್ಕೆ ಬೇಕಾದ ಸೂಕ್ತ ದಾಖಲೆಗಳನ್ನು ನೀಡಿ ಮರಣ ಪ್ರಮಾಣ ಪತ್ರ ಪಡೆಯಲಾಗುತ್ತದೆ. ಆದರೆ ಇಲ್ಲೊಬ್ಬ ತನ್ನದೇ ಮರಣ ಪ್ರಮಾಣ ಪತ್ರ ಕಳೆದು ಹೋಗಿರುವುದಾಗಿ ಜಾಹೀರಾತು ನೀಡಿದ್ದಾನೆ. ಮರಣ ಹೊಂದಿದವರು ಮರಳಿ ಬರಲಾಗದು ಹಾಗಾದರೆ ಜಾಹೀರಾತು (Advertisment) ನೀಡಿದ್ದು ಮೃತನ ಆತ್ಮವೇ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. 

ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ (Rupin sharma) ಈ ಜಾಹೀರಾತಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹಂಚಿಕೊಂಡಿದ್ದಾರೆ. ಅಂದ ಹಾಗೆ ಜಾಹೀರಾತಿನಲ್ಲಿ ಏನಿದೆ ಇಲ್ಲಿ ನೋಡಿ..

It happens only in 😂😂😂 pic.twitter.com/eJnAtV64aX

— Rupin Sharma (@rupin1992)


ದಿನಾಂಕ 7/9/2022 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಲಂಬ್ಡಿಂಗ್ ಬಜಾರ್‌ನಲ್ಲಿ ನಾನು ನನ್ನ ಮರಣ ಪ್ರಮಾಣಪತ್ರವನ್ನು(Death certificate) ಕಳೆದುಕೊಂಡಿದ್ದೇನೆ. ಎಂದು ಅಸ್ಸಾಂನ ಹೊಜೈ ಜಿಲ್ಲೆಯ  ರಂಜಿತ್ ಕುಮಾರ್ ಚಕ್ರವರ್ತಿ ಜಾಹೀರಾತು ನೀಡಿದ್ದಾರೆ. ಅಲ್ಲದೇ ಆ ಪ್ರಮಾಣಪತ್ರದ ರಿಜಿಸ್ಟೇಷನ್ ನಂಬರ್ ಹಾಗೂ ಸೀರಿಯಲ್ ನಂಬರ್ ಅನ್ನು ಕೂಡ ಬರೆದುಕೊಂಡಿದ್ದಾರೆ.

ಮರಣ ಪ್ರಮಾಣಪತ್ರ ತಿದ್ದುಪಡಿಗೆ ವಿರೋಧ

ಈ ಜಾಹೀರಾತಿನ ಫೋಟೋ ಶೇರ್ ಮಾಡಿದ ರುಪಿನ್ ಶರ್ಮಾ, ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇಂಟರ್‌ನೆಟ್‌ನಲ್ಲಿ ಹಾಸ್ಯದ ಸುಂಟರಗಾಳಿ ಎಬ್ಬಿಸಿದೆ ಎಂದರೆ ತಪ್ಪಾಗಲಾರದು. ಈ ವ್ಯಕ್ತಿ ಸ್ವರ್ಗದಿಂದ ಸಹಾಯ ಕೇಳುತ್ತಿದ್ದಾರೆಯೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರಮಾಣಪತ್ರ ಸಿಕ್ಕರೆ ಎಲ್ಲಿಗೆ ತಲುಪಿಸಬೇಕು ಎಂದು ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. 

ಧರ್ಮ, ಜಾತಿ ಇಲ್ಲದ ಪ್ರಮಾಣಪತ್ರ ನೀಡಿ: ಕೋರ್ಟ್‌ ಮೆಟ್ಟಿಲೇರಿದ ಬ್ರಾಹ್ಮಣ ಮಹಿಳೆ

ಮತ್ತೊಬ್ಬರು ಸಿಕ್ಕರೆ ಇದನ್ನು ಸ್ವರ್ಗಕ್ಕೆ(Heaven) ತಲುಪಿಸಬೇಕೆ ಅಥವಾ ನರಕಕ್ಕೋ(Hell) ಎಂದು ಕೇಳಿದ್ದಾರೆ. ಇನ್ನೊಬ್ಬರು ಯಾರೋ ಒಬ್ಬರು ತಮ್ಮ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದು, ಯಾರಿಗಾದರೂ ಸಿಕ್ಕರೆ ಕೂಡಲೇ ಅವರಿಗೆ ತಲುಪಿಸಿ, ಇದನ್ನು ತುರ್ತು ಎಂದು ಭಾವಿಸಿ ಇಲ್ಲದಿದ್ದರೆ ಪ್ರೇತಾತ್ಮ ಕೋಪಗೊಳ್ಳುವುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೊದಲ ಬಾರಿ ಒಬ್ಬರು ತಮ್ಮದೇ ಪ್ರಮಾಣ ಪತ್ರವನ್ನು ಕಳೆದುಕೊಂಡಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

खबर आ रही ही की एक मृतक ने अपना मृत-प्रमाणपत्र को दिया है, जिस भाई को भी मिले कृपया करके वापस कर देना,नही तो वो अपने आप को मृतक घोषित नही कर पायेगा।
असम सरकार से भी निवेदन है की इस लाचार व्यक्ति की मदद की जाए।😂😂😂😂
(प्रभु कहां हो आप)😁😁 https://t.co/1XgnKBc2dN

— Mukesh Tiwari (@MukeshT0321)

ಕೆಲವೊಮ್ಮೆ ಆಸ್ತಿಗಾಗಿ ಜೀವಂತವಿರುವವರ ಮರಣ ಪ್ರಮಾಣಪತ್ರವನ್ನು ಸಿದ್ಧಪಡಿಸಿದಂತಹ ಘಟನೆಗಳು ಈ ಹಿಂದೆ ನಡೆದಿವೆ. ಅಲ್ಲದೇ  ದುಡ್ಡು ಕೊಟ್ಟರೆ ನಕಲಿ ಆಧಾರ್‌ಕಾರ್ಡ್ ನಕಲಿ ವೋಟರ್‌ಐಡಿಗಳು, ನಕಲಿ ರೇಷನ್‌ ಕಾರ್ಡ್‌ಗಳು (Ration Card) ಸುಲಭವಾಗಿ ಸಿಗುವ ಇಂದಿನ ಕಾಲದಲ್ಲಿ ಮರಣ ಪ್ರಮಾಣಪತ್ರ ಸಿಗುವುದು ದೊಡ್ಡ ವಿಚಾರವಲ್ಲ ಬಿಡಿ.

ಕೆಲ ದಿನಗಳ ಹಿಂದೆ ವಿವಾಹದ ಪ್ರಸ್ತಾವನೆಯ ಪತ್ರಿಕಾ ಜಾಹೀರಾತೊಂದು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಜಾಹೀರಾತಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ವರರು ಈ ಸಂಬಂಧಕ್ಕೆ ಕರೆ ಮಾಡದಂತೆ ವಿಶೇಷವಾಗಿ ಉಲ್ಲೇಖಿಸಲಾಗಿತ್ತು. ಈ ವಿಚಾರವೂ ಕೂಡ ಸಖತ್ ವೈರಲ್ ಆಗಿತ್ತು.

 

click me!