Supreme Court: ಇವಿಎಂನಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಬೇಡ ಎಂದಿದ್ದ ಅರ್ಜಿ ವಜಾ!

Published : Nov 01, 2022, 12:58 PM IST
Supreme Court: ಇವಿಎಂನಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಬೇಡ ಎಂದಿದ್ದ ಅರ್ಜಿ ವಜಾ!

ಸಾರಾಂಶ

ಇವಿಎಂನಲ್ಲಿ ಅಭ್ಯರ್ಥಿಗಳ ಹೆಸರು ಮಾತ್ರವೇ ಇರಬೇಕು. ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳ ಚಿಹ್ನೆ ಇರಬಾರದು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಇದು ಚುನಾವಣಾ ಆಯೋಗದ ಅಡಿಯಲ್ಲಿ ಬರುವ ವಿಚಾರ ಎಂದಿರುವ ಕೋರ್ಟ್‌, ಅದೆಲ್ಲಕ್ಕಿಂತ ಮುಖ್ಯವಾಗಿ ಇವಿಎಂನ ಮುಂದೆ ನಿಂತು ಯಾರೂ ಅಭ್ಯರ್ಥಿಯನ್ನ ಆಯ್ಕೆ ಮಾಡೋದಿಲ್ಲ ಎಂದು ಹೇಳಿದೆ.

ನವದೆಹಲಿ (ನ. 1): ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾ ಮಾಡಿದೆ. ಇಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ನಲ್ಲಿ (ಇವಿಎಂ) ರಾಜಕೀಯ ಪಕ್ಷಗಳ ಚಿಹ್ನೆ ಇರಬಾರದು. ವ್ಯಕ್ತಿಯ ಫೋಟೋ ಮಾತ್ರ ಇರಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಯುಯು ಲಿಲಿತ್‌ ಇದ್ದ ಪೀಠ, ಭಾರತೀಯ ಚುನಾವಣಾ ಆಯೋಗವು ಅರ್ಜಿದಾರರ ಪ್ರಾತಿನಿಧ್ಯವನ್ನು ಪರಿಗಣಿಸಿದರೆ ನ್ಯಾಯದ ಅಂತ್ಯವನ್ನು ಪೂರೈಸಲಾಗುವುದು ಎಂದು ಹೇಳಿದೆ. ಉಪಾಧ್ಯಾಯ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ವಿಕಾಸ್ ಸಿಂಗ್ ಮತ್ತು ಗೋಪಾಲ್ ಶಂಕರನಾರಾಯಣ್ ಅವರು ಸಂವಿಧಾನದ 14 ಮತ್ತು 21 ನೇ ವಿಧಿಯ ಉಲ್ಲಂಘನೆ ಎಂದು ಆರೋಪಿಸಿದರು. ಇವಿಎಂಗಳಲ್ಲಿ ಪಕ್ಷದ ಚಿಹ್ನೆಗಳ ಪ್ರದರ್ಶನವು ಮತದಾರರ ಆಯ್ಕೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ಚುನಾವಣಾ ಅಭ್ಯರ್ಥಿಗಳ ವಿಶ್ವಾಸಾರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡುವ ಅವಕಾಶವನ್ನು ಕಸಿದುಕೊಳ್ಳುತ್ತದೆ ಎಂದು ವಾದ ಮಾಡಿದರು. ಇದರ ಪರಿಣಾಮವಾಗಿ ರಾಜಕೀಯ ನಾಯಕರಲ್ಲಿ ಕ್ರಿಮಿನಲ್‌ ಪ್ರಕರಣಗಳು ಹೆಚ್ಚಿವೆ ಎಂದು ಆರೋಪಿಸಿದರು.

"ಪಕ್ಷಗಳು ಕ್ರಿಮಿನಲ್ ಹಿನ್ನೆಲೆ ಇಲ್ಲದವರನ್ನು ಏಕೆ ಆಯ್ಕೆ ಮಾಡುತ್ತಿಲ್ಲ? ಪ್ರಮಾಣಿತ ಅಫಿಡವಿಟ್ ಸಲ್ಲಿಸಲಾಗುತ್ತದೆ, ಪ್ರತಿ ರಾಜಕೀಯ ಪಕ್ಷವು ಅದನ್ನು ಮಾಡುತ್ತಿದೆ. ಅವರು ಆ ಪ್ರದೇಶದಲ್ಲಿ ಜನಪ್ರಿಯರಾಗಿದ್ದಾರೋ ಇಲ್ಲವೋ ಎನ್ನುವುದನ್ನು ಹೇಳಲಾಗುತ್ತದೆ. ಶಾಸಕಾಂಗವು ತಮ್ಮ ಸ್ವಂತ ಕೈಗಳನ್ನು ಕಟ್‌ ಮಾಡಿಕೊಳ್ಳಲು ಬಯಸುವುದಿಲ್ಲ" ಎಂದು ಶಂಕರನಾರಾಯಣ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಆದರೆ ಸರ್ಕಾರಿ ಪರ ವಕೀಲ ಈ ಅರ್ಜಿಯನ್ನು ವಿರೋಧಿಸಿದರು. ಮತ ಹಾಕಲು ಬರುವ ವ್ಯಕ್ತಿ ಇವಿಎಂನ ಎದುರು ನಿಂತು ಅಭ್ಯರ್ಥಿಯ ಆಯ್ಕೆ ಮಾಡೋದಿಲ್ಲ. 'ಯಾವುದೇ ಮತದಾರ ಇವಿಎಂನ ಮುಂದೆ ನಿಂತು ಅಭ್ಯರ್ಥಿಯ ಆಯ್ಕೆ ಮಾಡೋದಿಲ್ಲ. ಇವಿಎಂಗೆ ಬರುವ ವೇಳೆಗಾಗಲೇ ಆತ ಯಾರಿಗೆ ಮತ ಹಾಕಬೇಕು ಅನ್ನೋದನ್ನ ತೀರ್ಮಾನ ಮಾಡಿರುತ್ತಾನೆ' ಎಂದು ವಾದ ಮಂಡಿಸಿದರು.

Hate Speech: ಧರ್ಮದ ಹೆಸರಿನಲ್ಲಿ ಎಂಥಾ ಸ್ಥಿತಿಗೆ ತಲುಪಿದ್ದೇವೆ..! ದ್ವೇಷ ಭಾಷಣಕ್ಕೆ ಸುಪ್ರೀಂ ಕೋರ್ಟ್‌ ಬೇಸರ!

ಕೋರ್ಟ್‌ರೂಮ್‌ನಲ್ಲಿ ವಾದ ಪ್ರತಿವಾದ:  "ಚುನಾವಣೆಯು ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿದೆ... ಇವಿಎಂ ಇರುವ ಪ್ರದೇಶದಲ್ಲಿ ಮತದಾರರು (ಅಭ್ಯರ್ಥಿಯನ್ನು) ಆಯ್ಕೆ ಮಾಡುತ್ತಾರೆ...ಆದ್ದರಿಂದ ಮತದಾರರು ಯಾರನ್ನೇ ಆಯ್ಕೆ ಮಾಡಿದ್ದರೂ, ಅವರು ತಮ್ಮ ರಾಜಕೀಯ ಪಕ್ಷವನ್ನು ತ್ಯಜಿಸಲು ಸಾಧ್ಯವಿಲ್ಲ" ಎಂದು ಸಿಜೆಐ ಹೇಳಿದರು.

ಇದು 'ಪಬ್ಲಿಸಿಟಿ ಇಂಟ್ರಸ್ಟ್‌ ಲಿಟಿಗೇಷನ್‌', ತಾಜ್‌ಮಹಲ್‌ ಕುರಿತಾದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್‌!

ಅಭ್ಯರ್ಥಿಯನ್ನು ಮತದಾರರು ಪ್ರತ್ಯೇಕವಾಗಿ (ಪಕ್ಷದೊಂದಿಗೆ ಸಂಬಂಧವಿಲ್ಲದೆ) ನೋಡಬೇಕಾದರೆ, ವ್ಯವಸ್ಥೆಯು ಉತ್ತಮ ಜನರನ್ನು ಹೊಂದಿರುತ್ತದೆ ಎಂದು ವಿಕಾಸ್‌ ಸಿಂಗ್ ಅರ್ಜಿಯಲ್ಲಿ ಹೇಳಿದ್ದಾರೆ."ಉತ್ತಮ ಜನರಿಗೆ ಟಿಕೆಟ್ ನೀಡಲು ಪಕ್ಷವನ್ನು ಒತ್ತಾಯಿಸಲಾಗುತ್ತದೆ. ಇದು ಬ್ರೆಜಿಲ್‌ನಲ್ಲಿ ಮಾಡಲ್ಪಟ್ಟಿದೆ, ಅಲ್ಲಿ ಯಾವುದೇ ಚಿಹ್ನೆಗಳಿಲ್ಲ. ಮತದಾರರು ಈಗ ಹೋಗಿ ಪಕ್ಷಕ್ಕೆ ಮತ ಹಾಕುತ್ತಾರೆ. ಪಕ್ಷದ ಚಿಹ್ನೆಗಳನ್ನು ತೆಗೆದುಹಾಕಿದರೆ, ಮತದಾರರು ತಮ್ಮ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಕಳೆದ 4 ವರ್ಷಗಳಿಂದ ಕಾನೂನು ಆಯೋಗವು ಕಾರ್ಯನಿರ್ವಹಿಸದ ಕಾರಣ ಈ ವಿಷಯವನ್ನು ಕಾನೂನು ಆಯೋಗಕ್ಕೆ ತರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!