Delhi Narela Footwear Factory: 100 ಜನ ಕಾರ್ಮಿಕರಿದ್ದ ದೆಹಲಿ ಕಾರ್ಖಾನೆಯಲ್ಲಿ ಭಾರಿ ಬೆಂಕಿ ದುರಂತ!

By Santosh NaikFirst Published Nov 1, 2022, 12:18 PM IST
Highlights

ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು 135 ಜನ ಸಾವಿಗೀಡಾದ ಪ್ರಕರಣ ಮಾಸುವ ಮುನ್ನವೇ ದೆಹಲಿಯ ಪಾದರಕ್ಷೆ ಕಾರ್ಖಾನೆಯಲ್ಲಿ ಬೆಂಕಿ ದುರಂತದ ಘಟನೆ ನಡೆದಿದೆ. 100 ಕಾರ್ಮಿಕರು ಕೆಲಸ ಮಾಡುತ್ತಿದ್ದ ಮೂರನೇ ಮಹಡಿಯಲ್ಲಿ ದುರಂತ ಸಂಭವಿಸಿದ್ದು, ಈವರೆಗೂ ಇಬ್ಬರು ಸಾವು ಕಂಡಿದ್ದಾರೆ.
 

ನವದೆಹಲಿ (ನ. 1): ಮೊರ್ಬಿಯಲ್ಲಿ ನಡೆದ ಭೀಕರ ದುರಂತದ ನೆನಪು ಮಾಸುವ ಮುನ್ನವೇ ದೆಹಲಿಯ ನರೇಲಾದಲ್ಲಿ ದುರಂತ ಸಂಭವಿಸಿದೆ. ನರೇಲಾದಲ್ಲಿರುವ ಪಾದರಕ್ಷೆಯ ಫ್ಯಾಕ್ಟರಿಯ ಮೂರನೇ ಮಹಡಿಯಲ್ಲಿ ಬೆಂಕಿ ದುರಂತ ಸಂಭವಿಸಿದ್ದು ಈವರೆಗೂ ಇಬ್ಬರು ಸಾವು ಕಂಡಿದ್ದಾರೆ. ಕಟ್ಟಡದಿಂದ 20 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ. ಆದರೆ, ಸುಟ್ಟ ಗಾಯಗಳಾಗಿರುವ ಕಾರಣದಿಂದ ಅವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಈವರೆಗೂ 10 ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸಲು ನಿರತವಾಗಿವೆ.  ಕಾರ್ಖಾನೆಯ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇನ್ನೂ ಕೆಲವು ಮೃತದೇಹಗಳು ಪತ್ತೆಯಾಗಬಹುದು ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡಾಗ ಅಲ್ಲಿ 100 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಮೆಟ್ಟಿಲುಗಳ ಮೇಲಿದ್ದ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಇನ್ನೂ ಹಲವರು ಒಳಗೆ ಸಿಲುಕಿಕೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

Delhi | Fire breaks out in Narela Industrial Area, 10 fire tenders rushed to the spot. Three people have been rescued so far, a few people feared trapped. Rescue operation underway: Delhi Fire Service pic.twitter.com/PTh0ksEUDq

— ANI (@ANI)

ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪಾದರಕ್ಷೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರು ಸಾವನ್ನಪ್ಪಿದ್ದು, ಅವರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು  ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 8.30ರ ವೇಳೆಗೆ ಬೆಂಕಿ ದುರಂತ ಸಂಭವಿಸಿದ್ದಾಗಿ ಹೇಳಲಾಗಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಬೆಂಕಿ, ಕೆಲವೇ ಹೊತ್ತಿನಲ್ಲಿ ಉರಿಯಲಾರಂಭಿಸಿತು.  9.30ರ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
 

click me!