ಶಾಲಾ ವಾರ್ಷಿಕ ಕ್ರೀಡಾದಿನ, 9ನೇ ತರಗತಿಯ ವಿದ್ಯಾರ್ಥಿಯ ಕತ್ತನ್ನೇ ಸೀಳಿತು ಜಾವಲಿನ್ ಥ್ರೋ!

By Suvarna NewsFirst Published Dec 17, 2022, 7:36 PM IST
Highlights

ಶಾಲಾ ವಾರ್ಷಿಕ ಕ್ರೀಡೋತ್ಸವದಲ್ಲಿ ಆಯೋಜಿಸಿದ್ದ ಜಾವಲಿನ್ ಥ್ರೋ ದುರಂತದಲ್ಲಿ ಅಂತ್ಯಗೊಂಡಿದೆ. ವಿದ್ಯಾರ್ಥಿ ಎಸೆದ ಜಾವಲಿನ್ ನಿಗದಿತ ಗುರಿಯೆಡೆಗೆ ಸಾಗದೆ ದೂರದಲ್ಲಿ ನಿಂತಿದ್ದ ಬಾಲಕನ ಕತ್ತನ್ನೇ ಸೀಳಿದೆ. 

ಒಡಿಶಾ(ಡಿ.17) ನೀರಜ್ ಚೋಪ್ರಾ ಜಾವಲಿನ್ ವಿಭಾಗದಲ್ಲಿನ ಸಾಧನೆ ಬಳಿಕ ಭಾರತದಲ್ಲಿ ಜಾವಲಿನ್ ಥ್ರೋ ಕುರಿತು ಹಲವರು ಆಸಕ್ತಿ ಹೊಂದಿದ್ದಾರೆ. ಕ್ರೀಡೆಗಳಲ್ಲಿ ಜಾವಲಿನ್ ಆಟವನ್ನೂ ಸೇರಿಸಲಾಗುತ್ತಿದೆ. ಶಾಲಾ ಮಟ್ಟದಲ್ಲಿ ಜಾವಲಿನ್ ಆಟಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಹೀಗೆ ಶಾಲಾ ವಾರ್ಷಿಕ ಕ್ರೀಡೋತ್ಸವ ದಿನದಲ್ಲಿ ಜಾವಲಿನ್ ಥ್ರೋ ಸೇರಿಸಲಾಗಿತ್ತು. ಆದರೆ ಇದೇ ಜಾವಲಿನ್ ಥ್ರೋ ದುರಂತದಲ್ಲಿ ಅಂತ್ಯಗೊಂಡಿದೆ. ವಿದ್ಯಾರ್ಥಿ ಎಸೆದ ಜಾವಲಿನ್ ನಿಗದಿತ ಗುರಿಯೆಡೆಗೆ ಸಾಗದೇ ಬೇರೆ ದಿಕ್ಕಿನತ್ತ ಸಾಗಿದೆ. ಇದರಿಂದ ಅನತಿ ದೂರದಲ್ಲಿ ನಿಂತಿದ್ದ 9ನೇ ತರಗತಿ ವಿದ್ಯಾರ್ಥಿ ಕತ್ತಿಗೆ ಚುಚ್ಚಿದೆ. ಇದರಿಂದ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಈ ಘಟನೆ ಒಡಿಶಾದ ಬಾಲಂಗೀರ್ ಜಿಲ್ಲೆಯಲ್ಲಿ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿ ಸದಾನಂದ ಮೆಹರ್‌ನನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದಾನೆ.  ಭೀಮಾ  ಬೊಯಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಐಸಿಯುನಲ್ಲಿ ವಿದ್ಯಾರ್ಥಿ ಸತತ ಪಡೆಯುತ್ತಿದ್ದಾರೆ. ಇತ್ತ ಜಿಲ್ಲಾಧಿಕಾರಿ ಬಾಲಕನ ಕುಟುಂಬಕ್ಕೆ 30,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. 

ಆನ್‌ಲೈನ್‌ನಲ್ಲೇ ಜಾವೆಲಿನ್ ಕಲಿತು ಪದಕ ಗೆದ್ದ ಕರಿಶ್ಮಾ..!

ಇತ್ತ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿದ್ಯಾರ್ಥಿಗೆ ಅತ್ಯುತ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದ್ದಾರೆ. ಇತ್ತ ಈ ಘಟನೆ ನಡೆದ ಬೆನ್ನಲ್ಲೇ ಶಾಲಾ ವಾರ್ಷಿಕ ಕ್ರೀಡಾ ದಿನಚಾರಣೆಯನ್ನು ರದ್ದುಗೊಳಿಸಲಾಗಿದೆ.

ಘಟನೆ ವಿವರ:
ಅಗಲ್ಪುರ ಬಾಲಕರ ಪಂಚಾಯಿತ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾದಿನಾಚರಣೆ ಆಯೋಜಿಸಲಾಗಿತ್ತು. ಶಾಲೆಗಳು ಶೈಕ್ಷಣಿಕ ವರ್ಷದ ಅಂತ್ಯಕ್ಕೆ ತಲಪುತ್ತಿದೆ. ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಶಾಲಾ ಕ್ರೀಡಾದಿನಾಚರಣೆ, ವಾರ್ಷಿಕೋತ್ಸವ ಸಾಮಾನ್ಯ. ಹೀಗೆ ಆಯೋಜಿಸಿದ ಕ್ರೀಡಾ ದಿನಾಚರಣೆಯಲ್ಲಿ ಕಬಡ್ಡಿ, ಕೊಕ್ಕೋ, ಓಟ, ಲಾಂಗ್ ಜಂಪ್, ಹೈಜಂಪ್ ಸೇರಿದಂತೆ ಹಲವು ಕ್ರೀಡೆಗಳನ್ನು ಆಡಿಸಲಾಗಿದೆ. ಈ ಬಾರಿ ಜಾವಲಿನ್ ಥ್ರೋ ಕ್ರೀಡೆಯನ್ನು ಸೇರಿಸಲಾಗಿದೆ.

ಸ್ವತಃ ನೀರಜ್ ಚೋಪ್ರಾ ಬಂದ್ರೂ ಅಭ್ಯಾಸಕ್ಕೆ ಅವಕಾಶ ಇಲ್ಲ, ಏನಿದು ಕಂಠೀರವ ಕ್ರೀಡಾಂಗಣದ ವಿವಾದ!

ಈ ಹಿಂದೆ ಕೂಡ ಅಗಲ್ಪುರ ಶಾಲೆಯಲ್ಲಿ ಜಾವಲಿನ್ ಥ್ರೋ ಕ್ರೀಡೆ ಇತ್ತು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರಲಿಲ್ಲ. ಆದರೆ ನೀರಜ್ ಚೋಪ್ರಾ ಜಾವಲಿನ್ ಸಾಧನೆ ಬಳಿಕ ಇದೀಗ ವಿದ್ಯಾರ್ಥಿಗಳು ಜಾವಲಿನ್ ಕ್ರೀಡೆಯತ್ತ ಆಸಕ್ತಿ ತೋರಿದ್ದಾರೆ. ಹೀಗಾಗಿ ಜಾವಲಿನ್ ಥ್ರೋಗೆ ಮತ್ತೆ ಪುನರ್ಜನ್ಮ ನೀಡಲಾಗಿದೆ. 

ಜಾವಲಿನ್ ಥ್ರೋ ಸರಿಯಾದ ದಿಕ್ಕಿನಲ್ಲಿ ಸಾಗದ ಕಾರಣ ಈ ಘಟನೆ ಸಂಭವಿಸಿದೆ. ಘಟನೆ ನಡೆದ ಬೆನ್ನಲ್ಲೇ ವಿದ್ಯಾರ್ಥಿಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದರ ಪರಿಣಾಮ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ಚಿನ್ನ ಗೆದ್ದ ನೀರಜ್‌ ಚೋಪ್ರಾ
ಭಾರತದ ತಾರಾ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಅವರು ಟೋಕಿಯೋ ಒಲಿಂಪಿಕ್ಸ್‌ ಬಳಿಕ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಶನಿವಾರ ಫಿನ್ಲೆಂಡ್‌ನಲ್ಲಿ ನಡೆದ ಕುಒರ್ಟೆನ್‌ ಗೇಮ್ಸ್‌ನಲ್ಲಿ ನೀರಜ್‌ ಅವರು 86.69 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಬಂಗಾರ ಗೆದ್ದರು. ಟ್ರೆನಿಡಾಡ್‌ ಆ್ಯಂಡ್‌ ಟೊಬಾಗೋದ ಕೆಶೋರ್ನ್‌ ವಾಲ್ಕೊಟ್‌ ಬೆಳ್ಳಿ, ಗ್ರೆನಡಾದ ಆ್ಯಂಡರ್ಸನ್‌ ಪೀಟ​ರ್‍ಸ್ ಕಂಚಿನ ಪದಕ ಗೆದ್ದರು. ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಐತಿಹಾಸಿಕ ಚಿನ್ನ ಗೆದ್ದ ಬಳಿಕ ನೀರಜ್‌ಗೆ ಇದು 2ನೇ ಚಿನ್ನ. ಇದಕ್ಕೂ ಮೊದಲು ಇದೇ ವಾರದ ಆರಂಭದಲ್ಲಿ ಅವರು ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ 89.30 ದೂರಕ್ಕೆ ಜಾವೆಲಿನ್‌ ಎಸೆದು ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಆದರೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಜೂನ್‌ 30ಕ್ಕೆ ಅವರು ಡೈಮಂಡ್‌ ಲೀಗ್‌ನ ಸ್ಟೋಕ್‌ಹೆಲ್ಮ್‌ ಲೆಗ್‌ನಲ್ಲಿ ಸ್ಪರ್ಧಿಸಲಿದ್ದಾರೆ


 

click me!