ಯಾರಿಗೇಳೋಣ ಪ್ರಾಬ್ಲೆಮ್, ದಾಂಪತ್ಯ ಜೀವನಕ್ಕೆ ತಲಾಖ್ ಮೂಲಕ ಅಂತ್ಯ ಹಾಡಿದ ಬಿಜೆಪಿ ನಾಯಕ!

By Suvarna NewsFirst Published Dec 17, 2022, 5:22 PM IST
Highlights

ಕೇಂದ್ರ ಬಿಜೆಪಿ ಸರ್ಕಾರದ ಮಹತ್ತರ ಬದಲಾವಣೆಗಳಲ್ಲಿ ತ್ರಿವಳಿ ತಲಾಖ್ ನಿಷೇಧ ನಿಯಮ ಕೂಡ ಒಂದು. ಮುಸ್ಲಿಮ್ ಹೆಣ್ಣುಮಕ್ಕಳ ಪರ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರಕ್ಕೆ ಇದೀಗ ಮುಖಭಂಗವಾಗಿದೆ. ಕಾರಣ ತಮ್ಮದೇ ಪಕ್ಷದ ನಾಯಕ ತಲಾಖ್ ಮೂಲಕ ಪತ್ನಿಗೆ ಡಿವೋರ್ಸ್ ನೀಡಿದ ಘಟನೆ ನಡೆದಿದೆ.

ಮೆಹಸಾನ(ಡಿ.17): ತ್ರಿವಳಿ ತಲಾಖ್.. ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವದ ನಿಯಮ. ಮುಸ್ಲಿಮ್ ಹೆಣ್ಣುಮಕ್ಕಳಿಗೆ ಅಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದ ಬಿಜೆಪಿ, ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಬಿಜೆಪಿ ತನ್ನ ಸಾಧನೆಗಳ ಪಟ್ಟಿಯಲ್ಲಿ ತ್ರಿವಳಿ ತಲಾಖ್ ನಿಷೇಧ ಕೂಡ ಪ್ರಮುಖ ಸ್ಥಾನ ಪಡೆದಿದೆ. ತ್ರಿವಳಿ ತಲಾಖ್ ನಿಷೇಧಕ್ಕೆ ದೇಶ ವಿದೇಶಗಳಿಂದ ಬಿಜೆಪಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ತಮ್ಮದೇ ಪಕ್ಷದ ನಾಯಕ, ತಮ್ಮ 22 ವರ್ಷದ ದಾಂಪತ್ಯ ಜೀವನಕ್ಕೆ ತಲಾಖ್ ಮೂಲಕ ಅಂತ್ಯ ಹಾಡಿದ ಘಟನೆ ವರದಿಯಾಗಿದೆ. ಗುಜರಾತ್‌ನ ಮೆಹಸಾನ ಕಾರ್ಪೋರೇಟ್ ಸಲೀಮ್ ನೂರ್ ಮೊಹಮ್ಮದ್ ವೋರಾ ತಲಾಖ್ ಮೂಲಕ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ. ಪತ್ನಿ ದೂರಿನ ಆಧಾರದಲ್ಲಿ ಇದೀಗ ಬಿಜೆಪಿ ಕಾರ್ಪೋರೇಟರ್ ಮೇಲೆ ಪ್ರಕರಣ ದಾಖಲಾಗಿದೆ.

ಸಲೀಮ್ ನೂರ್ ಮೊಹಮ್ಮದ್ ವೋರಾ ಪತ್ನಿ ಸಿದ್ದಿಕಿಬಾನ್ ತಮ್ಮ ದೂರಿನಲ್ಲಿ ಪತಿಯ ತಲಾಖ್ ಕ್ರೌರ್ಯವನ್ನು ಉಲ್ಲೇಖಿಸಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಪತಿ ತಲಾಖ್ ಹೇಳಿದ್ದಾರೆ. ಬಳಿಕ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲೂ ತಲಾಖ್ ಹೇಳಿದ್ದಾರೆ. ಬಳಿಕ ಸಂಬಂಧವನ್ನೇ ಅಂತ್ಯಗೊಳಿಸಿದ್ದಾರೆ ಎಂದಿದ್ದಾರೆ.

4 ವರ್ಷದ ದಾಂಪತ್ಯ 4 ಸೆಕೆಂಡ್‌ನಲ್ಲಿ ಅಂತ್ಯ, ವ್ಯಾಟ್ಸ್ಆ್ಯಪ್ ಮೂಲಕ ಪತ್ನಿಗೆ ತಲಾಖ್ ಮೆಸೇಜ್!

ಮೊಬೈಲ್ ಮೂಲಕ ತ್ರಿವಳಿ ತಲಾಖ್ ನೀಡಿರುವ ವಿಡಿಯೋ ರೆಕಾರ್ಡ್ ಮಾಡಿ ಪತಿ ಅವರ ಕುಟುಂಬಸ್ಥರಿಗೆ ರವಾನೆ ಮಾಡಿದ್ದಾರೆ. ಇತ್ತ ಪತಿಯ ಕುಟುಂಬಸ್ಥರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ತಲಾಖ್ ನೀಡಿದ ಬಳಿಕ ಪತಿಯನ್ನು ಬಿಟ್ಟುಹೋಗದೆ ಇರುವ ಕಾರಣಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟೇ ಅಲ್ಲ ಪತಿಯ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಈ ಮೊದಲೇ ದೂರು ನೀಡಿದ್ದೇನೆ ಎಂದಿದ್ದಾರೆ.

ಕಳೆದ 22 ವರ್ಷದ ದಾಂಪತ್ಯ ಜೀವನದಲ್ಲಿ ಪತಿ ಸಲೀಮ್ ವೋರಾ, ನನ್ನ ಸಹೋದರರಿಂದ ಹಲವು ಬಾರಿ ಹಣ ಪಡೆದಿದ್ದಾರೆ. ಲಕ್ಷ ಲಕ್ಷ ರೂಪಾಯಿ ಹಣ ಪಡೆದು ಮರಳಿ ನೀಡಿಲ್ಲ. ಮರಳಿ ಕೇಳಿದರೆ ತ್ರಿವಳಿ ತಲಾಖ್ ಮೂಲಕ ಬೆದರಿಸಿದ್ದಾರೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

 

Triple Talaq : ಲೇಟಾಗಿ ಹಾಲು ತಂದು ಕೊಟ್ಟ ಪತ್ನಿ.. ಅಷ್ಟಕ್ಕೆ ತಲಾಖ್ ಎಂದ ಪತಿರಾಯ! 

ಸಲೀಮ್ ವೋರಾ ಹಾಗೂ ಸಿದ್ದಿಕಿಬಾನ್ 2000ನೇ ಇಸವಿಯಲ್ಲಿ ಮದುವೆಯಾಗಿದ್ದಾರೆ. ದಂಪತಿಗಳಿಗೆ 21 ವರ್ಷದ ಅಲಿಸಾ ಅನ್ನೋ ಮಗಳಿದ್ದಾಳೆ. ಇನ್ನು 6 ವರ್ಷದ ಹಿಂದೆ ಪುತ್ರ ಮೃತಪಟ್ಟಿದ್ದಾನೆ. 

ತ್ರಿವಳಿ ತಲಾಖ್ ರದ್ದು ಕೇಂದ್ರದ ಮಹತ್ವದ ಸಾಧನೆ!
ತ್ರಿವಳಿ ತಲಾಖ್‌ ವಿರುದ್ಧದ ಕಾನೂನು ಸಾವಿರಾರು ಮಹಿಳೆಯರ ಕುಟುಂಬ ಒಡೆಯುವುದನ್ನು ತಪ್ಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಹೇಳಿದ್ದಾರೆ. ಈ ಕುರಿತ ಅಂಕಿ ಅಂಶಗಳು ಇದನ್ನೇ ಹೇಳುತ್ತಿದೆ.  ಈ ಹಿಂದೆ ಮುಸ್ಲಿಂ ಮಹಿಳೆ ತನ್ನ ತವರು ಮನೆಯಿಂದ ಬರಿಗೈನಲ್ಲಿ ಹಿಂದಿರುಗಿದರೆ ಆಕೆಗೆ ತಕ್ಷಣವೇ ತಲಾಖ್‌ ನೀಡಲಾಗುತ್ತಿತ್ತು. ಮೋಟಾರ್‌ ಸೈಕಲ್‌, ಚಿನ್ನದ ಸರ ಅಥವಾ ಮೊಬೈಲ್‌ ಫೋನ್‌ ತರದಿದ್ದರೂ ತಲಾಖ್‌ ನೀಡಲಾಗುತ್ತಿತ್ತು. ಇದರಿಂದ ಮಹಿಳೆಯರ ಜೀವನವೇ ನಾಶವಾಗುತ್ತಿತ್ತು. ಮಹಿಳೆ ಮಾತ್ರವಲ್ಲ, ಆಕೆಯ ಪೋಷಕರ ನೋವು ಅರ್ಥ ಮಾಡಿಕೊಳ್ಳಿ. ಮಗಳು ಗಂಡನ ಮನೆಯಿಂದ ತವರಿಗೆ ಬಂದಾಗ ತ್ರಿವಳಿ ತಲಾಖ್‌ನ ಭಯದಲ್ಲಿ ಆಕೆ ಕಾಲಕಳೆಯಬೇಕಾಗಿತ್ತು. ಇಂದು ಇದರಿಂದ ರಕ್ಷಣೆ ಪಡೆದುಕೊಳ್ಳಲು ಮುಸ್ಲಿಂ ಸಹೋದರಿಯರಿಗಾಗಿ ಕಾನೂನು ಜಾರಿ ಮಾಡಿದ್ದೇವೆ ಎಂದು ಮೋದಿ ಹೇಳಿದ್ದರು. 
 

click me!